32 C
Mysore
Monday, January 17, 2022
Home All News ತಂದೆಗೆ ಡೆತ್ ನೋಟ್ ಪೋಸ್ಟ್ ಮಾಡಿ ನೇಣಿಗೆ ಶರಣಾದ ಮಗಳು…

ತಂದೆಗೆ ಡೆತ್ ನೋಟ್ ಪೋಸ್ಟ್ ಮಾಡಿ ನೇಣಿಗೆ ಶರಣಾದ ಮಗಳು…

ತಂದೆಗೆ ಒಳ್ಳೆಯ ಮಗಳಾಗಲಿಲ್ಲ,ಗಂಡನಿಗ ತಕ್ಕ ಹೆಂಡತಿಯಾಗಿಲ್ಲವೆಂದು ಡೆತ್ ನೋಟ್ ಬರೆದ ಗೃಹಿಣಿ ನೇಣಿಗೆ ಶರಣಾದ ಘಟನೆ ಎನ್.ಆರ್.ಮೊಹಲ್ಲಾದ ಟ್ಯಾಂಕ್ ರೋಡ್ ನಲ್ಲಿ ನಡೆದಿದೆ.ಮೋಹನ್ ಕುಮಾರಿ(32) ಮೃತ ದುರ್ದೈವಿ.ಚಾರ್ಟೆಡ್ ಅಕೌಂಟೆಂಟ್ ಒಬ್ಬರ ಬಳಿ ಸಹಾಯಕಳಾಗಿ ಕೆಲಸ ಮಾಡುತ್ತಿದ್ದ ಮೋಹನ್ ಕುಮಾರಿ 2013 ರಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಉದಯ್ ಕುಮಾರ್ ಎಂಬುವರನ್ನ ಪ್ರೀತಿಸಿ ಮದುವೆ ಆಗಿದ್ದರು.ಚಾರ್ಟೆಡ್ ಅಕೌಂಟೆಂಟ್ ಬಳಿ ಕೆಲಸ ಮಾಡುತ್ತಿದ್ದ ಮೋಹನ ಕುಮಾರಿ ಸಾಕಷ್ಟು ಸಾಲದ ಶೂಲಕ್ಕೆ ಸಿಲುಕಿದ್ದರು.ಲಾಕ್ ಡೌನ್ ಹಿನ್ನಲೆ ಪತಿಗೂ ಆದಾಯ ಕಡಿಮೆ ಆಗಿತ್ತು.ಇದರಿಂದ ಮನನೊಂದಿದ್ದ ಮೋಹನ್ ಕುಮಾರಿ ತಾನು ತಂದೆಗೂ ಒಳ್ಳೆಯ ಮಗಳಾಗಿಲ್ಲ ಗಂಡನಿಗೂ ಒಳ್ಳೆಯ ಪತ್ನಿ ಆಗಿಲ್ಲವೆಂದು ಡೆತ್ ನೋಟ್ ಬರೆದು ನಾಯ್ಡುನಗರದಲ್ಲಿರುವ ತಂದೆ ಮಹೇಂದ್ರ ರಿಗೆ ಪೋಸ್ಟ್ ಮಾಡಿ ಮನೆಯಲ್ಲಿ ಒಂದು ಕಾಪಿ ಇಟ್ಟು ನೇಣಿಗೆ ಶರಣಾಗಿದ್ದಾರೆ.ತಂದೆಗೆ ಡೆತ್ ನೋಟ್ ತಲುಪಿದ ನಂತರ ಎನ್.ಆರ್.ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಪೊಲೀಸರ ಸಮೇತ ತಂದೆ ಮಹೇಂದ್ರ ಮನೆಗೆ ಬಂದಾಗ ಮಗಳು ನೇಣುಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

LEAVE A REPLY

Please enter your comment!
Please enter your name here

- Advertisment -

Most Popular

ನೀರಿನ ಶುಲ್ಕ ಬಾಕಿಗೆ ಬಡ್ಡಿ ವಿಧಿಸಿರುವ ಪಾಲಿಕೆ…ಕೈ ಬಿಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ…

ಮೈಸೂರು,ಜ.17.Tv10 kannadaಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನೀರಿನ ಶುಲ್ಕ ಹೆಚ್ಚಳ ಹಾಗೂ ಬಾಕಿ ಮೊತ್ತಕ್ಕೆ ಬಡ್ಡಿ ವಿಧಿಸಿರುವ ವಿಚಾರಕ್ಕೆ ಸಂಸದ ಪ್ರತಾಪ್ ಸಿಂಹ ಕಳವಳ...

ಸ್ಮಾರ್ಟ್ ಫೋನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಾಜಶೇಖರ್…

ಮೈಸ್ಮಾರ್ಟ್ ಫೋನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಾಜಶೇಖರ್ಸೂರು,ಜ.17.Tv10 kannadaರಸ್ತೆಯಲ್ಲಿ ಬೆಲೆಬಾಳುವ ವಸ್ತುಗಳು ದೊರೆತರೆ ಖುಷಿಯಾಗಿ ಹೊಡೆದುಕೊಂಡು ಹೋಗುವವರೇ ಹೆಚ್ಚು ಮಂದಿ ಇದ್ದಾರೆ.ಇಂತಹವರ ಮಧ್ಯೆ ಖಾಸಗಿ...

ನಿವೇಶನ ಖಾತೆ ಬದಲಾವಣೆ ವಿಚಾರದಲ್ಲಿ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಬನ್ನೂರು,ಜ.16. Tv10 Kannadaಪತಿಯ ಹೆಸರಿನಲ್ಲಿದ್ದ ಖಾಲಿನಿವೇಶನ ಪತ್ನಿ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡುವ ವಿಚಾರದಲ್ಲಿ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಟಿ.ನರಸೀಪುರ...

ಚಿಕ್ಕಪ್ಪನ ಜೊತೆ ಪತ್ನಿಯ ಅಕ್ರಮ ಸಂಭಂಧ…ಮಗನನ್ನು ಕೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪತಿ…

ಬೆಂಡಿಗನವಿಲೆ,ಜ.15.Tv10 Kannadaಎಲ್.ಐ.ಸಿ.ಏಜೆಂಟ್ ಆಗಿರುವ ಚಿಕ್ಕಪ್ಪನ ಜೊತೆ ಅಕ್ರಮ ಸಂಭಂಧ ಇರಿಸಿಕೊಂಡಿದ್ದ ಪತ್ನಿಯ ವರ್ತನೆಗೆ ಬೇಸತ್ತ ಪತಿರಾಯ ತನ್ನ ಮಗನನ್ನ ಕೊಂದು ತಾನೂ ಕೆರೆಗೆ ಹಾರಿ...

Recent Comments