32 C
Mysore
Wednesday, September 22, 2021
Home All News ಯಜುರುಪಾಕರ್ಮ…ಮೈಸೂರಿನಲ್ಲಿ ಸಾಮೂಹಿಕ ಯಜ್ಞೋಪವೀತ ಧಾರಣೆ…

ಯಜುರುಪಾಕರ್ಮ…ಮೈಸೂರಿನಲ್ಲಿ ಸಾಮೂಹಿಕ ಯಜ್ಞೋಪವೀತ ಧಾರಣೆ…

ಇಂದು ಯಜುರುಪಾಕರ್ಮದ ಸಂಭ್ರಮ.ಕೋವಿಡ್ ನಡುವೆ ಮೈಸೂರಿನಲ್ಲಿ ಸರಳವಾಗಿ ಯಜುರುಪಾಕರ್ಮ ಹಬ್ಬವನ್ನ ಆಚರಿಸಲಾಯಿತು.ಕೋವಿಡ್ ಹಿನ್ನಲೆ ಹಬ್ಬದ ವಿಶೇಷ ಆಚರಣೆಗೆ ಬ್ರೇಕ್ ಬಿದ್ದಿದ್ದು ಸರಳ ಆಚರಣೆಗೆ ಒತ್ತು ನೀಡಲಾಯಿತು.ಮೈಸೂರಿನ ಹವೀಕ ಸಂಘ ಹಾಗೂ ಮೈಸೂರು ಹವ್ಯಕ ಪರಿಷತ್ ಸಂಯುಕ್ತಾಶ್ರಯದಲ್ಲಿ ಶ್ರೀರಾಮಚಂದ್ರಾಪುರ ಹಾಗೂ ಸ್ವರ್ಣವಲ್ಲಿ ಮಠದ ಭಕ್ತರು ಬೋಗಾದಿಯ ಹವೀಕ ಭವನದಲ್ಲಿ ಸಾಮೂಹಿಕ ಉಪಾಕರ್ಮವನ್ನು ಹಮ್ಮಿಕೊಂಡಿದ್ದರು.
ಡಾ।ಸುರೇಶ್ ಹೆಗಡೆ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೋಮ, ಮಹಾತರ್ಪಣ, ಪಿತೃ ತರ್ಪಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಯುಜುರ್ವೇದದ ಪ್ರಕಾರ ಯಜ್ಞೋಪವೀತ ಧಾರಣೆ ನಡೆಯಿತು.
ಹವೀಕ ಸಂಘದ ಅಧ್ಯಕ್ಷರಾದ ಎಲ್.ಎನ್.ಹೆಗಡೆ, ಹವ್ಯಕ ಪರಿಷತ್ ಅಧ್ಯಕ್ಷರಾದ ಜಿ.ಆರ್.ಮೋಹನ್, ಸಮಾಜದ ಮುಖಂಡರಾದ ಅರುಣಾಚಲ, ರಾಕೇಶ್ ಭಟ್, ಚಿನ್ಮಯ್ ಹೆಗಡೆ ಸೇರಿದಂತೆ ಹಿರಿಯರು, ಗೃಹಸ್ಥರು ಹಾಗೂ ಬ್ರಹ್ಮಚಾರಿಗಳು ಯಜ್ಞೋಪವೀತ ಧಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…

LEAVE A REPLY

Please enter your comment!
Please enter your name here

- Advertisment -

Most Popular

ಮೊರಾರ್ಜಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್..! ಚಾಮರಾಜನಗರ ಜಿಲ್ಲೆ‌ ಯಳಂದೂರಿನ ಆದರ್ಶ ಶಾಲೆಯ ಬಳಿಕ ಹನೂರಿನ ಮೊರಾರ್ಜಿ ವಸತಿ ಶಾಲೆಯ...

ಇಂದು ಅರಮನೆಗೆ ಎಂಟ್ರಿ ನೀಡಲಿರುವ ಗಜಪಡೆ…

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಅಂಬಾವಿಲಾಸ ಅರಮನೆಯಂಗಳಕ್ಕೆ ಇಂದು ಗಜಪಡೆ ಪ್ರವೇಶ ಪಡೆಯಲಿದೆ.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಪ್ರವೇಶಿಸಲಿವೆ.ಮೈಸೂರಿನ ಅಶೋಕಪುರಂನ...

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ…ಗಜಪಯಣ ಆರಂಭ…

ವಿಶ್ವವಿಖ್ಯಾತ ಜಂಬೂಸವಾರಿಯ ಗಜ ಪಯಣ ಆರಂಭವಾಗಿದೆ.ನಾಗರಹೊಳೆ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ.ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ಮೈಸೂರಿನತ್ತ ಪ್ರಯಾಣ ಬೆಳಸಲಿದೆ.ಗಜಪಡೆಗೆ ಸಾಂಪ್ರದಾಯಿಕ ಪೂಜೆ...

ನೆಲಸಮಗೊಂಡ ಶಕ್ತಿ ಮಹಾದೇವಿ ದೇವಾಲಯಕ್ಕೆ ಪ್ರತಾಪ್ ಸಿಂಹ ಭೇಟಿ…ಗ್ರಾಮಸ್ಥರಿಗೆ ಸಂಸದರ ಅಭಯ…

ಇತ್ತೀಚೆಗೆ ನೆಲಸಮಗೊಂಡ ನಂಜನಗೂಡಿನ ಹುಚ್ಚಗಣಿ ಗ್ರಾಮದ ಶಕ್ತಿ ಮಹಾದೇವಿ ದೇವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವಾಲಯ ನೆಲಸಮಗೊಳಿಸಿರುವ ಸ್ಥಳಕ್ಕೆ ಭೇಟಿ...

Recent Comments