32 C
Mysore
Wednesday, September 22, 2021
Home All News ಲಂಚ ಆರೋಪ ಸಾಬೀತು…ಆರೋಪಿಗೆ 4 ವರ್ಷ ಸಾದಾ ಶಿಕ್ಷೆ ಪ್ರಕಟ…ಎಸಿಬಿ ಯಲ್ಲಿ ಮೊದಲ ಪ್ರಕರಣ…

ಲಂಚ ಆರೋಪ ಸಾಬೀತು…ಆರೋಪಿಗೆ 4 ವರ್ಷ ಸಾದಾ ಶಿಕ್ಷೆ ಪ್ರಕಟ…ಎಸಿಬಿ ಯಲ್ಲಿ ಮೊದಲ ಪ್ರಕರಣ…

ಎಸಿಬಿ ಗೆ ದೂರು ಕೊಟ್ಟರೆ ಶಿಕ್ಷೆ ಆಗಲ್ಲ ಎಂಬ ಅಪವಾದವನ್ನ ಮೈಸೂರು ನ್ಯಾಯಾಲಯ ಸುಳ್ಳು ಮಾಡಿದೆ.ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಆರೋಪಿಯ ಮೇಲಿನ ಸಾಕ್ಷಾದಾರಗಳು ಸಾಬೀತಾದ ಹಿನ್ನಲೆ ಮೈಸೂರು ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.ಮೈಸೂರು ಎಸಿಬಿ ಠಾಣೆಯಲ್ಲಿ ದಾಖಲಾದ ಲಂಚದ ಪ್ರಕರಣಗಳ ಪೈಕಿ ಶಿಕ್ಷೆ ಪ್ರಕಟವಾದ ಮೊದಲನೇ ಪ್ರಕರಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ನಂಜನಗೂಡು ತಾಲೂಕು ಗೊಳೂರು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಡನ್ ಗಣಪತಿ ಜಕಾತಿ ಶಿಕ್ಷೆಗೆ ಒಳಗಾದ ಅಪರಾಧಿಯಾಗಿದ್ದಾರೆ.2016 ರಲ್ಲಿ ಇವರ ವಿರುದ್ದ ಲಂಚದ ಆರೋಪ ದೂರು ದಾಖಲಾಗಿತ್ತು.ಕಂಪ್ಯೂಟರ್ ಹಾಗೂ ಯುಪಿಎಸ್ ರಿಪೇರಿ ಮಾಡಿದ ವಿಚಾರದಲ್ಲಿ ರಾಂಪ್ರಸಾದ್ ಎಂಬುವರಿಗೆ ಚೆಕ್ ನೀಡಲು ಗಣಪತಿ ಜಕಾತಿ 2 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ರಾಂಪ್ರಸಾದ್ ರವರು ವಾರ್ಡನ್ ಗಣಪತಿ ಜಕಾತಿ ಹಾಗೂ ಪ್ರಿನ್ಸಿಪಲ್ ಮಂಜಯ್ಯ ವಿರುದ್ದ ಮೈಸೂರು ಎಸಿಬಿ ಗೆ ದೂರು ನೀಡಿದ್ದರು.ಆಗಿನ ಡಿವೈಎಸ್ಪಿ ಗಜೇಂದ್ರ ಪ್ರಸಾದ್,ನಿರೀಕ್ಷಕರಾದ ಅನಿಲ್ ಕುಮಾರ್ ಹಾಗೂ ವಿನಯ್ ರವರು ತನಿಖೆ ನಡೆಸಿ ಮೈಸೂರು ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.ಸರ್ಕಾರಿ ಅಭಿಯೋಜಕರಾದ ಕಲಿಯಂಡ ಮುತ್ತಮ್ಮ ಪೂಣಚ್ಚ ರವರು ವಾದ ಮಂಡಿಸಿದ್ದರು.ಆರೋಪಿಗಳ ವಿರುದ್ದ ದಾಖಲಾದ ಆರೋಪ ಸಾಬೀತಾದ ಹಿನ್ನಲೆ ಮೈಸೂರಿನ ಮೂರನೇ ಅಧಿಕ ಸತ್ರ ಮತ್ತು ವಿಶೇಷ ನ್ಯಾಯಾಲಯ,ಲೋಕಾಯುಕ್ತ ಮತ್ತು ಎಸಿಬಿ ಯ ನ್ಯಾಯಾಧೀಶರಾದ ಹೆರಾಲ್ಡ್ ರುಡಾಲ್ಫ್ ಮೆಂಡೋಂಕಾ ರವರು ಶಿಕ್ಷೆ ಪ್ರಕಟಿಸಿದ್ದಾರೆ.

ಆರೋಪಿ ಗಣಪತಿ ಜಕಾತಿ ರವರಿಗೆ 4 ವರ್ಷ ಸಾದಾ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದ್ದಾರೆ.ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಸಾದಾ ಶಿಕ್ಷೆ ವಿಧಿಸಿದ್ದಾರೆ.ಪ್ರಿನ್ಸಿಪಲ್ ಮಂಜಯ್ಯ ವಿರುದ್ದ ಆರೋಪ ಸಾಬೀತಾಗದ ಹಿನ್ನಲೆ ಖುಲಾಸೆಯಾಗಿದ್ದಾರೆ.ಮೈಸೂರು ಎಸಿಬಿ ಯಲ್ಲಿ ದಾಖಲಾದ ಪ್ರಕರಣಗಳ ಪೈಕಿ ಇದು ಮೊದಲನೇ ಪ್ರಕರಣದಲ್ಲಿ ಆರೋಪಿ ಶಿಕ್ಷೆಗೆ ಒಳಗಾಗಿರುವುದು ಗಮನೀಯ…

LEAVE A REPLY

Please enter your comment!
Please enter your name here

- Advertisment -

Most Popular

ಮೊರಾರ್ಜಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್..! ಚಾಮರಾಜನಗರ ಜಿಲ್ಲೆ‌ ಯಳಂದೂರಿನ ಆದರ್ಶ ಶಾಲೆಯ ಬಳಿಕ ಹನೂರಿನ ಮೊರಾರ್ಜಿ ವಸತಿ ಶಾಲೆಯ...

ಇಂದು ಅರಮನೆಗೆ ಎಂಟ್ರಿ ನೀಡಲಿರುವ ಗಜಪಡೆ…

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನಲೆಅಂಬಾವಿಲಾಸ ಅರಮನೆಯಂಗಳಕ್ಕೆ ಇಂದು ಗಜಪಡೆ ಪ್ರವೇಶ ಪಡೆಯಲಿದೆ.ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಪ್ರವೇಶಿಸಲಿವೆ.ಮೈಸೂರಿನ ಅಶೋಕಪುರಂನ...

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ…ಗಜಪಯಣ ಆರಂಭ…

ವಿಶ್ವವಿಖ್ಯಾತ ಜಂಬೂಸವಾರಿಯ ಗಜ ಪಯಣ ಆರಂಭವಾಗಿದೆ.ನಾಗರಹೊಳೆ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ.ಅಭಿಮನ್ಯು ನೇತೃತ್ವದ 8 ಆನೆಗಳ ತಂಡ ಮೈಸೂರಿನತ್ತ ಪ್ರಯಾಣ ಬೆಳಸಲಿದೆ.ಗಜಪಡೆಗೆ ಸಾಂಪ್ರದಾಯಿಕ ಪೂಜೆ...

ನೆಲಸಮಗೊಂಡ ಶಕ್ತಿ ಮಹಾದೇವಿ ದೇವಾಲಯಕ್ಕೆ ಪ್ರತಾಪ್ ಸಿಂಹ ಭೇಟಿ…ಗ್ರಾಮಸ್ಥರಿಗೆ ಸಂಸದರ ಅಭಯ…

ಇತ್ತೀಚೆಗೆ ನೆಲಸಮಗೊಂಡ ನಂಜನಗೂಡಿನ ಹುಚ್ಚಗಣಿ ಗ್ರಾಮದ ಶಕ್ತಿ ಮಹಾದೇವಿ ದೇವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವಾಲಯ ನೆಲಸಮಗೊಳಿಸಿರುವ ಸ್ಥಳಕ್ಕೆ ಭೇಟಿ...

Recent Comments