32 C
Mysore
Tuesday, October 19, 2021

ಮೊರಾರ್ಜಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೋವಿಡ್..!

ಚಾಮರಾಜನಗರ ಜಿಲ್ಲೆ‌ ಯಳಂದೂರಿನ ಆದರ್ಶ ಶಾಲೆಯ ಬಳಿಕ ಹನೂರಿನ ಮೊರಾರ್ಜಿ ವಸತಿ ಶಾಲೆಯ ಮೂವರು ವಿದ್ಯಾರ್ಥಿಗಳು ಕೊರೊನಾ ಸೋಂಕಿಗೆ ಒಳಗಾಗಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ‌.

ಹನೂರು ಪಟ್ಟಣದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಓರ್ವ ವಿದ್ಯಾರ್ಥಿನಿಗೆ ಕೋವಿಡ್ ದೃಢಪಟ್ಟಿದೆ. ಶಾಲೆಗಳು ಪ್ರಾರಂಭವಾಗುವ ಮುನ್ನ ಎಲ್ಲಾ ವಿದ್ಯಾರ್ಥಿಗಳ ಕೋವಿಡ್ ನೆಗೆಟಿವ್ ರಿಪೋರ್ಟ್ ಪಡೆದೇ ಶಾಲೆಗೆ ದಾಖಲು ಮಾಡಿಕೊಳ್ಳಲಾಗಿತ್ತು. ಆದರೆ ಕಳೆದ ಒಂದು ವಾರದ ಹಿಂದೆ ಕೆಲ ವಿದ್ಯಾರ್ಥಿಗಳಲ್ಲಿ ನೆಗಡಿ, ಕೆಮ್ಮು, ಶೀತ ಜ್ವರ ಕಂಡುಬಂದ ಹಿನ್ನೆಲೆ ಹನೂರು ಪಟ್ಟಣದ ಕೋವಿಡ್ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದ ಸ್ವ್ಯಾಬ್ ಮಾದರಿಯಲ್ಲಿ 3 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢಪಟ್ಟಿದೆ ಎಂದು ಬಿಇಒ ಸ್ವಾಮಿ ತಿಳಿಸಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಶಿಥಿಲಾವಸ್ಥೆಯಲ್ಲಿರುವ ಈ ಕಟ್ಟಡಕ್ಕೆ ಮುಕ್ತಿ ಸಿಗುವುದೇ…?

ಬೆಂಗಳೂರಿನಲ್ಲಿ ಕಟ್ಟಡ ಉರುಳಿ ಬಿದ್ದು ನಡೆದ ದುರಂತದಿಂದ ಮೈಸೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದೆ.ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸಮೀಕ್ಷೆ ನಡೆಸುತ್ತಿದೆ.ಅಪಾಯದ ಅಂಚಿನಲ್ಲಿರುವ ಕಟ್ಟಡಗಳನ್ನ ಗುರುತಿಸುತ್ತಿದೆ. ಈಗಾಗಲೇ 100...

ಚಾಮುಂಡಿಬೆಟ್ಟದಲ್ಲಿ ಜಾತ್ರಾ ಸಂಭ್ರಮ…ಯದುವೀರ್ ರಿಂದ ಚಾಲನೆ…

ಮೈಸೂರು ಇಂದು ಚಾಮುಂಡಿ ಬೆಟ್ಟದಲ್ಲಿ ಜಾತ್ರೆ ಸಂಭ್ರಮ ಮನೆ ಮಾಡಿತ್ತು.ಶ್ರೀ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ಸಾಂಪ್ರದಾಯಿಕವಾಗಿ ನೆರವೇರಿತು.ರಾಜವಂಶಸ್ಥ ಯದುವೀರ್ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.ನಾಡದೇವಿಯ...

ಮೈಸೂರು,ಅ.18:- ಪೊಲೀಸರು ಜನಸ್ನೇಹಿಗಳಷ್ಟೇ ಅಲ್ಲ, ಮನಸ್ಸಿನಲ್ಲಿರುವ ದುಗುಡ-ದುಮ್ಮಾನಗಳನ್ನು, ಸಮಸ್ಯೆಯನ್ನು ಪರಿಹರಿಸುತ್ತಾರೆ. ಅವರಿಗೂ ಮಾನವೀಯತೆ ಇದೆ. ಯಾರೂ ಅಪರಾಧ ಮಾಡಬಾರದು. ಅದಕ್ಕಾಗಿ ಜ್ಞಾನ ಸಂಗ್ರಹಿಸಿ ಮನಸ್ಸನ್ನು ತಿಳಿಗೊಳಿಸಿಕೊಳ್ಳಿ ಎಂದು ಠಾಣೆಯಲ್ಲಿಯೇ ಪುಸ್ತಕಗಳನ್ನೊದಗಿಸಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ...

ಮೈಸೂರು ವಿವಿಪುರಂ ಪೊಲೀಸ್ ಠಾಣೆಯಲ್ಲಿಯೇ ಸಣ್ಣದೊಂದು ಕಬೋರ್ಡ್ ಸಿದ್ಧಪಡಿಸಿ ಅಲ್ಲಿ ಇನ್ನೂರಕ್ಕಿಂತಲೂ ಹೆಚ್ಚು ಪುಸ್ತಕಗಳನ್ನಿರಿಸಿದ್ದಾರೆ. ಅವರು ಹೇಳೋದಿಷ್ಟೇ. ಪೊಲೀಸರೆಂದರೆ ಭಯಪಡಬೇಕಾಗಿಲ್ಲ. ಅವರು ಕೂಡ ನಿಮ್ಮಂತೆಯೇ...

18 ಅಡಿ ಎತ್ತರದ ಶ್ರೀ ಸುಭ್ರಹ್ಮಣ್ಯೇಶ್ವರ ಶಿಲಾಮೂರ್ತಿ ರೆಡಿ…ಯದುವೀರ್ ರಿಂದ ಪುಷ್ಪಾರ್ಚನೆ…

ಮೈಸೂರಿನ ನಂಜನಗೂಡು ತಾಲ್ಲೂಕಿನ ದೊಡ್ಡ ಕೌಲಂದೆ ಹೋಬಳಿ ಗಟ್ಟವಾಡಿ ಗ್ರಾಮದಲ್ಲಿ 36 ಅಡಿ ಎತ್ತರದಲ್ಲಿ 18 ಅಡಿಯ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಲು...

Recent Comments