32 C
Mysore
Tuesday, November 30, 2021
Home All News 18 ಅಡಿ ಎತ್ತರದ ಶ್ರೀ ಸುಭ್ರಹ್ಮಣ್ಯೇಶ್ವರ ಶಿಲಾಮೂರ್ತಿ ರೆಡಿ…ಯದುವೀರ್ ರಿಂದ ಪುಷ್ಪಾರ್ಚನೆ…

18 ಅಡಿ ಎತ್ತರದ ಶ್ರೀ ಸುಭ್ರಹ್ಮಣ್ಯೇಶ್ವರ ಶಿಲಾಮೂರ್ತಿ ರೆಡಿ…ಯದುವೀರ್ ರಿಂದ ಪುಷ್ಪಾರ್ಚನೆ…

ಮೈಸೂರಿನ ನಂಜನಗೂಡು ತಾಲ್ಲೂಕಿನ ದೊಡ್ಡ ಕೌಲಂದೆ ಹೋಬಳಿ ಗಟ್ಟವಾಡಿ ಗ್ರಾಮದಲ್ಲಿ 36 ಅಡಿ ಎತ್ತರದಲ್ಲಿ 18 ಅಡಿಯ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಲು ಕಾಮಗಾರಿ ಭರದಿಂದ ಸಾಗುತ್ತಿದೆ.ಶಿಲಾಮೂರ್ತಿ ಈಗಾಗಲೇ ಸಿದ್ದವಾಗಿದ್ದು ಇಂದು ನಂಜನಗೂಡು ತಲುಪಲಿದೆ. ಬೆಂಗಳೂರಿನಿಂದ ನಂಜನಗೂಡಿನತ್ತ ವಿಶೇಷ ವಾಹನದಲ್ಲಿ ಶಿಲಾಮೂರ್ತಿಯನ್ನ ಸಾಗಿಸಲಾಗುತ್ತಿದೆ. ಮೈಸೂರಿನ ಅರಮನೆ ಉತ್ತರ ದ್ವಾರದ ಕೋಟೆ ಅಂಜನೇಯಸ್ವಾಮಿ ಮುಂಭಾಗ 18 ಅಡಿ ಎತ್ತರದ ಬೃಹತ್ ಗಾತ್ರದ ಶ್ರೀ ಸುಬ್ರಹ್ಮಣ್ಯ ಮೂರ್ತಿಯನ್ನ ಬರಮಾಡಿಕೊಳ್ಳಲಾಗಿದೆ.ದೇಶದಲ್ಲೇ ಪ್ರಪ್ರಥಮ ಬೃಹತ್ ಮೂರ್ತಿ ಎಂದೇ ಹೇಳಲಾಗಿದ್ದು ಶೀಘ್ರದಲ್ಲೇ ವಿಗ್ರಹವನ್ನ ಸುಭ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.ಮೈಸೂರು ಮೂಲಕ ಹಾದು ಹೋದ ಬೃಹತ್ ವಿಗ್ರಹಕ್ಕೆ ರಾಜವಂಶಸ್ಥ ಯದುವೀರ್ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಬರಮಾಡಿಕೊಂಡಿದ್ದಾರೆ.ಗ್ರಾಮಗಳ ಅಭಿವೃದ್ದಿಗೆ ದೇವಾಲಯಗಳು ಪ್ರಾಮುಖ್ಯತೆ ಪಡೆಯುತ್ತವೆ ಎಂದು ಬಣ್ಣಿಸಿದ ಯದುವೀರ್ ಪುಷ್ಪಾರ್ಚನೆ ಸಲ್ಲಿಸಿ ಶುಭಕೋರಿದರು.
ಕಾರ್ಯಕ್ರಮದಲ್ಲಿ ನಂಜನಗೂಡಿನ ಕ್ಷೇತ್ರದ ಶಾಸಕರಾದ ಹರ್ಷವರ್ಧನ್, ಚಾಮರಾಜ ಕ್ಷೇತ್ರದ ಶಾಸಕರಾದ ಎಲ್ ನಾಗೇಂದ್ರ, ಮೈಸೂರಿನ ಮಹಾಪೌರರಾದ ಶ್ರೀಮತಿ ಸುನಂದಾ ಪಾಲನೇತ್ರ, ಸುಬ್ರಹ್ಮಣ್ಯ ಸ್ವಾಮಿಜೀಯವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ವಿ ರಾಜೀವ್, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಹೇಮಂತ್ ಕುಮಾರ್, ನಗರಪಾಲಿಕೆ ಸದಸ್ಯರಾದ ಮ. ವಿ.ರಾಮ್ ಪ್ರಸಾದ್, ಮೈಸೂರು ನಗರ ಬಿಜೆಪಿಯ ಅಧ್ಯಕ್ಷರಾದ ಶ್ರೀವತ್ಸ, ಪ್ರಧಾನ ಕಾರ್ಯದರ್ಶಿಗಳಾದ ಗಿರಿಧರ್ ಇತರ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು…

ಮಹಾರಾಜರಾದ ಶ್ರೀ ಯದುವೀರ್ ಅವರು ಮಾತನಾಡುತ್ತಾ ಸುಬ್ರಹ್ಮಣ್ಯ ಸ್ವಾಮಿಯ ಸುಂದರ ಮೂರ್ತಿಯು ಅರಮನೆ ಉತ್ತರ ದ್ವಾರದಿಂದ ಕೌಲಂದೆ ಗ್ರಾಮದಲ್ಲಿ ಪ್ರತಿಷ್ಠಾಪನೆ ಆಗಲು ಹೋಗುತ್ತಿರುವುದು ಸಂತೋಷ ತಂದಿದೆ, ಇಲ್ಲಿಂದ ಪ್ರಾರಂಭವಾದ ಎಲ್ಲ ಕಾರ್ಯಗಳು ಯಶಸ್ವಿಯಾಗುತ್ತದೆ, ಒಂದು ಗ್ರಾಮದಲ್ಲಿ ದೇವಸ್ಥಾನ ಇದ್ದರೆ ಹಿಂದಿನಿಂದಲೂ ಆ ದೇವಸ್ಥಾನದಿಂದ ಮುಖಾಂತರ ಊರಿನ ಅಭಿವೃದ್ಧಿಯ ಕಾರ್ಯಗಳು ನಡೆಯುತ್ತಾ ಬಂದಿದೆ ಎಂದು ತಿಳಿಸಿದರು

ಶಾಸಕರಾದ ಹರ್ಷವರ್ಧನ್ ಅವರು ಮಾತನಾಡುತ್ತ ನನ್ನ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ ಈ ಕ್ಷೇತ್ರದ ಅಭಿವೃದ್ಧಿಗೆ ನಾನು ಸದಾ ಜತೆಯಲ್ಲಿರುತ್ತೇನೆ ಎಂದು ತಿಳಿಸಿದರು

ಸುಬ್ರಹ್ಮಣ್ಯ ಸ್ವಾಮಿಜೀಯವರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ
ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಸಾರ್ವಜನಿಕರಿಗಾಗಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿದೆ ಉಚಿತವಾಗಿ ವೈದ್ಯಕೀಯ ಸೇವೆ ನಡೆಯುತ್ತಿದ್ದು ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಪ್ರತಿಭಾ ಪುರಸ್ಕಾರ, ಅನ್ನಸಂತಪರ್ಣೆ, ಗೋಶಾಲೆ ಇತ್ಯಾದಿ ಸೇವಾ ಕಾರ್ಯಗಳು ನಿರಂತರ ನಡೆಯುತ್ತಿರುತ್ತದೆ ಹಾಗೂ ಸ್ವಾಮಿಯ ವಿಗ್ರಹವನ್ನು ಶಿಲ್ಪಿಗಳಾದ ರಮಾನಾಥ್ ಮಾಡಿರುತ್ತಾರೆ ಎಂದು ದೇವಸ್ಥಾನ ದ ಮಂಡಳಿಯವರು ತಿಳಿಸಿದರು

LEAVE A REPLY

Please enter your comment!
Please enter your name here

- Advertisment -

Most Popular

ಎಣ್ಣೆ ನಶೆ…ಬಸ್ಸಿನಲ್ಲಿ ಪೊಲೀಸಪ್ಪ ಫುಲ್ ಚಿತ್ತು…

ಕುಡಿದ ಮತ್ತಿನಲ್ಲಿ ಬಸ್ ಹತ್ತಿದ ಪೊಲೀಸಪ್ಪ ಫುಲ್ ಟೈಟಾಗಿ ವಾಲಾಡಿ ಬಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಬಸ್ಸಿನಲ್ಲೇ ಜಾರಿ ಬಿದ್ದ ಪೊಲೀಸಪ್ಪನ ಫೋಟೋ ಸಾಮಾಜಿಕ...

ಗ್ರಾಮಲೆಕ್ಕಾಧಿಕಾರಿಗಳ ಸಂಘದ ಹಂಗಾಮಿ ಜಿಲ್ಲಾಧ್ಯಕ್ಷರಾಗಿ ಎಂ.ನಾಗೇಶ್ ಕುಮಾರ್ ನೇಮಕ…

ಮೈಸೂರು ಜಿಲ್ಲೆ ಗ್ರಾಮಲೆಕ್ಕಾಧಿಕಾರಿಗಳ ಸಂಘಕ್ಕೆ ಹಂಗಾಮಿ ಅಧ್ಯಕ್ಷರಾಗಿ ಮೈಸೂರು ತಾಲೂಕು ಕಚೇರಿಯ ಗ್ರಾಮಲೆಕ್ಕಾಧಿಕಾರಿ ಎಂ.ನಾಗೇಶ್ ಕುಮಾರ್ ನೇಮಕವಾಗಿದ್ದಾರೆ.ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಬಿ.ದೊಡ್ಡಬಸಪ್ಪ ರೆಡ್ಡಿ...

ಜಮೀನಿನಲ್ಲಿ ಹಂದಿ ಕಳೇಬರ ಪತ್ತೆ…ಹುಲಿ ಬೇಟೆ ಶಂಕೆ…ಸ್ಥಳೀಯರಲ್ಲಿ ಆತಂಕ…

ಜಮೀನೊಂದರಲ್ಲಿ ಹಂದಿಯ ಕಳೇಬರ ಪತ್ತೆಯಾಗಿದೆ.ಹುಲಿ ಬೇಟೆಯಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.ಹಂದಿಯ ಕಳೇಬರದ ಬಳಿ ಹುಲಿಯ ಹೆಜ್ಜೆ ಗುರುತುಗಳು...

ಅಣ್ಣನಿಂದಲೇ ತಂಗಿ ಮೇಲೆ ಅತ್ಯಾಚಾರ…ಸಾಂಸ್ಕೃತಿಕ ನಗರಿಯಲ್ಲಿ ಮತ್ತೊಂದು ಹೇಯ ಕೃತ್ಯ…

ಸಾಂಸ್ಕೃತಿಕ ನಗರಿಯಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೇಯ ಕೃತ್ಯ ನಡೆದಿದೆ.ಸ್ವಂತ ತಂಗಿಯ ಮೇಲೇ ಅತ್ಯಾಚಾರವೆಸಗಿದ ಪಾಪಿ ಅಣ್ಣ ಪೊಲೀಸರ...

Recent Comments