32 C
Mysore
Tuesday, November 30, 2021
Home All News ಮೈಸೂರು,ಅ.18:- ಪೊಲೀಸರು ಜನಸ್ನೇಹಿಗಳಷ್ಟೇ ಅಲ್ಲ, ಮನಸ್ಸಿನಲ್ಲಿರುವ ದುಗುಡ-ದುಮ್ಮಾನಗಳನ್ನು, ಸಮಸ್ಯೆಯನ್ನು ಪರಿಹರಿಸುತ್ತಾರೆ. ಅವರಿಗೂ ಮಾನವೀಯತೆ ಇದೆ. ಯಾರೂ...

ಮೈಸೂರು,ಅ.18:- ಪೊಲೀಸರು ಜನಸ್ನೇಹಿಗಳಷ್ಟೇ ಅಲ್ಲ, ಮನಸ್ಸಿನಲ್ಲಿರುವ ದುಗುಡ-ದುಮ್ಮಾನಗಳನ್ನು, ಸಮಸ್ಯೆಯನ್ನು ಪರಿಹರಿಸುತ್ತಾರೆ. ಅವರಿಗೂ ಮಾನವೀಯತೆ ಇದೆ. ಯಾರೂ ಅಪರಾಧ ಮಾಡಬಾರದು. ಅದಕ್ಕಾಗಿ ಜ್ಞಾನ ಸಂಗ್ರಹಿಸಿ ಮನಸ್ಸನ್ನು ತಿಳಿಗೊಳಿಸಿಕೊಳ್ಳಿ ಎಂದು ಠಾಣೆಯಲ್ಲಿಯೇ ಪುಸ್ತಕಗಳನ್ನೊದಗಿಸಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ವಿವಿಪುರಂ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ವೆಂಕಟೇಶ್.

ಮೈಸೂರು ವಿವಿಪುರಂ ಪೊಲೀಸ್ ಠಾಣೆಯಲ್ಲಿಯೇ ಸಣ್ಣದೊಂದು ಕಬೋರ್ಡ್ ಸಿದ್ಧಪಡಿಸಿ ಅಲ್ಲಿ ಇನ್ನೂರಕ್ಕಿಂತಲೂ ಹೆಚ್ಚು ಪುಸ್ತಕಗಳನ್ನಿರಿಸಿದ್ದಾರೆ. ಅವರು ಹೇಳೋದಿಷ್ಟೇ. ಪೊಲೀಸರೆಂದರೆ ಭಯಪಡಬೇಕಾಗಿಲ್ಲ. ಅವರು ಕೂಡ ನಿಮ್ಮಂತೆಯೇ ಮನುಷ್ಯರು. ಅವರಿಗೂ ಮಾನವೀಯತೆ ಇದೆ. ಸಮಾಜದಲ್ಲಿ ಎಲ್ಲರೂ ನೆಮ್ಮದಿಯಾಗಿ ಬದುಕಬೇಕು, ಯಾರೂ ಅಪರಾಧ ಮಾಡಬಾರದು ಎಂಬುದೇ ನಮ್ಮ ಉದ್ದೇಶ ಎಂದಿದ್ದಾರೆ.

ಪೊಲೀಸರು ಜನಸ್ನೇಹಿಯಾಗಿದ್ದಾರೆ. ಅಷ್ಟೇ ಅಲ್ಲ ನಾನು ವರ್ಗಾವಣೆಗೊಂಡು ಹೋದ ಕಡೆಯಲ್ಲೆಲ್ಲ ಸಣ್ಣದೊಂದು ಗ್ರಂಥಾಲಯ ರೀತಿ ಸಿದ್ಧಪಡಿಸಿ ಅಲ್ಲಿ ಸಾಕಷ್ಟು ಪುಸ್ತಕಗಳನ್ನು ಇರಿಸಿದ್ದೇನೆ. ರಾಮಾಯಣ, ಮಹಾಭಾರತ, ಭಗವದ್ಗೀತೆ, ಪುಣ್ಯ ಪುರುಷರ ಜೀವನ, ನೀತಿ ಕಥೆಗಳು, ಯಾವ ರೀತಿ ಬದುಕಬೇಕು ಎಂಬಿತ್ಯಾದಿ ಪುಸ್ತಕಗಳನ್ನು ಸಂಗ್ರಹಿಸಿಟ್ಟಿದ್ದು, ದೂರು ನೀಡಲು ಬರುವವರಿರಬಹುದು, ಅಥವಾ ಅಪರಾಧ ಮಾಡಿ ಸಿಕ್ಕಿ ಹಾಕಿಕೊಂಡವರಿರಬಹುದು ಅವರುಗಳು ಈ ಪುಸ್ತಕಗಳನ್ನು ಓದಿ ಅಲ್ಪಮಟ್ಟಿಗಾದರೂ ಮನಸ್ಸನ್ನು ಪ್ರಶಾಂತಗೊಳಿಸಿಕೊಳ್ಳಲಿ, ಜ್ಞಾನವನ್ನು ಪಡೆಯಲಿ ಎಂಬುದೇ ನನ್ನ ಉದ್ದೇಶವಾಗಿದೆ ಎಂದರು✍️ TV10Kannada💐

LEAVE A REPLY

Please enter your comment!
Please enter your name here

- Advertisment -

Most Popular

ಗ್ರಾಮಲೆಕ್ಕಾಧಿಕಾರಿಗಳ ಸಂಘದ ಹಂಗಾಮಿ ಜಿಲ್ಲಾಧ್ಯಕ್ಷರಾಗಿ ಎಂ.ನಾಗೇಶ್ ಕುಮಾರ್ ನೇಮಕ…

ಮೈಸೂರು ಜಿಲ್ಲೆ ಗ್ರಾಮಲೆಕ್ಕಾಧಿಕಾರಿಗಳ ಸಂಘಕ್ಕೆ ಹಂಗಾಮಿ ಅಧ್ಯಕ್ಷರಾಗಿ ಮೈಸೂರು ತಾಲೂಕು ಕಚೇರಿಯ ಗ್ರಾಮಲೆಕ್ಕಾಧಿಕಾರಿ ಎಂ.ನಾಗೇಶ್ ಕುಮಾರ್ ನೇಮಕವಾಗಿದ್ದಾರೆ.ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಬಿ.ದೊಡ್ಡಬಸಪ್ಪ ರೆಡ್ಡಿ...

ಜಮೀನಿನಲ್ಲಿ ಹಂದಿ ಕಳೇಬರ ಪತ್ತೆ…ಹುಲಿ ಬೇಟೆ ಶಂಕೆ…ಸ್ಥಳೀಯರಲ್ಲಿ ಆತಂಕ…

ಜಮೀನೊಂದರಲ್ಲಿ ಹಂದಿಯ ಕಳೇಬರ ಪತ್ತೆಯಾಗಿದೆ.ಹುಲಿ ಬೇಟೆಯಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.ಹಂದಿಯ ಕಳೇಬರದ ಬಳಿ ಹುಲಿಯ ಹೆಜ್ಜೆ ಗುರುತುಗಳು...

ಅಣ್ಣನಿಂದಲೇ ತಂಗಿ ಮೇಲೆ ಅತ್ಯಾಚಾರ…ಸಾಂಸ್ಕೃತಿಕ ನಗರಿಯಲ್ಲಿ ಮತ್ತೊಂದು ಹೇಯ ಕೃತ್ಯ…

ಸಾಂಸ್ಕೃತಿಕ ನಗರಿಯಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೇಯ ಕೃತ್ಯ ನಡೆದಿದೆ.ಸ್ವಂತ ತಂಗಿಯ ಮೇಲೇ ಅತ್ಯಾಚಾರವೆಸಗಿದ ಪಾಪಿ ಅಣ್ಣ ಪೊಲೀಸರ...

ಖಾಲಿ ಪತ್ರಕ್ಕೆ ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡ ಕಿಲಾಡಿಗಳು…ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಸಿನಮೀಯ ದೃಶ್ಯ…

ಆಸ್ತಿ ಕಬಳಿಸಲು ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಗುರುತನ್ನ ಪಡೆಯುವ ಸನ್ನಿವೇಶಗಳನ್ಮ ಸಿನಿಮಾಗಳಲ್ಲಿ ನೋಡಿದ್ದೇವೆ.ಆದ್ರೆ ನಿಜ ಜೀವನದಲ್ಲೂ ಅಂತಹ ಒಂದು ಪ್ರಕರಣ ನಡೆದಿರುವ ವೀಡಿಯೋ ಇದೀಗ...

Recent Comments