32 C
Mysore
Tuesday, November 30, 2021
Home All News ಚಾಮುಂಡಿಬೆಟ್ಟದಲ್ಲಿ ಜಾತ್ರಾ ಸಂಭ್ರಮ…ಯದುವೀರ್ ರಿಂದ ಚಾಲನೆ…

ಚಾಮುಂಡಿಬೆಟ್ಟದಲ್ಲಿ ಜಾತ್ರಾ ಸಂಭ್ರಮ…ಯದುವೀರ್ ರಿಂದ ಚಾಲನೆ…

ಮೈಸೂರು ಇಂದು ಚಾಮುಂಡಿ ಬೆಟ್ಟದಲ್ಲಿ ಜಾತ್ರೆ ಸಂಭ್ರಮ ಮನೆ ಮಾಡಿತ್ತು.ಶ್ರೀ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವ ಸಾಂಪ್ರದಾಯಿಕವಾಗಿ ನೆರವೇರಿತು.ರಾಜವಂಶಸ್ಥ ಯದುವೀರ್ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.ನಾಡದೇವಿಯ ಉತ್ಸವ ಮೂರ್ತಿ ಮೆರವಣಿಗೆಯ ರಥ ಎಳೆಯುವ ಮೂಲಕ ಚಾಲನೆ ನೀಡಿದರು.ಕುಟುಂಬ ಸಮೇತ ಆಗಮಿಸಿ ಜಾತ್ರೆಯಲ್ಲಿ ಭಾಗವಹಿಸಿದರು.ಇಂದು ತಾಯಿ ಚಾಮುಂಡೇಶ್ವರಿಗೆ ಸಿಂಹವಾಹಿನಿ ಅಲಂಕಾರ ಮಾಡಲಾಗಿತ್ತು.
ದೇವಾಲಯದ ತುಂಬೆಲ್ಲ ಪುಷ್ಪಾಲಂಕಾರ, ಮುಂಜಾನೆಯಿಂದಲೇ ವಿವಿಧ ಅಭಿಷೇಕ, ಪೂಜಾ ಕೈಂಕರ್ಯಗಳು ನಡೆದವು.ರಾಜವಂಶಸ್ಥರಿಂದ ವಿಶೇಷ ಪೂಜೆ ಸಲ್ಲಿಕೆಯಾಯಿತು.
ಪ್ರತಿ ವರ್ಷ ದಸರಾ ಬಳಿಕ ಬೆಟ್ಟದ ಜಾತ್ರೆ ನಡೆಯೋದು ವಾಡಿಕೆ.
ಈ ಬಾರಿ ದೊಡ್ಡ ತೇರಿನ ಬದಲು ಚಿಕ್ಕ ತೇರಿನಲ್ಲಿ ರಥೋತ್ಸವ ನಡೆಸಲಾಯಿತು.
ಕರೊನಾ ಹಿನ್ನೆಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.
ಚಾಮುಂಡಿಬೆಟ್ಟದಲ್ಲಿ ಜನರಿಲ್ಲದೆ ಜಾತ್ರೆ ನೆರವೇರಿತು.ನಾಡದೇವಿಯ ಉತ್ಸವಮೂರ್ತಿಯನ್ನ ಹೊತ್ತು ಸಾಗಿದ ಮೆರವಣಿಗೆ ದೇವಾಲಯ ಒಂದು ಪ್ರದಕ್ಷಿಣೆ ಹಾಕಿತು.
ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್, ಶಾಸಕ ಎಲ್.ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ ಸೇರಿದಂತೆ ಪ್ರಮುಖರು ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು…

LEAVE A REPLY

Please enter your comment!
Please enter your name here

- Advertisment -

Most Popular

ಎಣ್ಣೆ ನಶೆ…ಬಸ್ಸಿನಲ್ಲಿ ಪೊಲೀಸಪ್ಪ ಫುಲ್ ಚಿತ್ತು…

ಕುಡಿದ ಮತ್ತಿನಲ್ಲಿ ಬಸ್ ಹತ್ತಿದ ಪೊಲೀಸಪ್ಪ ಫುಲ್ ಟೈಟಾಗಿ ವಾಲಾಡಿ ಬಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಬಸ್ಸಿನಲ್ಲೇ ಜಾರಿ ಬಿದ್ದ ಪೊಲೀಸಪ್ಪನ ಫೋಟೋ ಸಾಮಾಜಿಕ...

ಗ್ರಾಮಲೆಕ್ಕಾಧಿಕಾರಿಗಳ ಸಂಘದ ಹಂಗಾಮಿ ಜಿಲ್ಲಾಧ್ಯಕ್ಷರಾಗಿ ಎಂ.ನಾಗೇಶ್ ಕುಮಾರ್ ನೇಮಕ…

ಮೈಸೂರು ಜಿಲ್ಲೆ ಗ್ರಾಮಲೆಕ್ಕಾಧಿಕಾರಿಗಳ ಸಂಘಕ್ಕೆ ಹಂಗಾಮಿ ಅಧ್ಯಕ್ಷರಾಗಿ ಮೈಸೂರು ತಾಲೂಕು ಕಚೇರಿಯ ಗ್ರಾಮಲೆಕ್ಕಾಧಿಕಾರಿ ಎಂ.ನಾಗೇಶ್ ಕುಮಾರ್ ನೇಮಕವಾಗಿದ್ದಾರೆ.ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಬಿ.ದೊಡ್ಡಬಸಪ್ಪ ರೆಡ್ಡಿ...

ಜಮೀನಿನಲ್ಲಿ ಹಂದಿ ಕಳೇಬರ ಪತ್ತೆ…ಹುಲಿ ಬೇಟೆ ಶಂಕೆ…ಸ್ಥಳೀಯರಲ್ಲಿ ಆತಂಕ…

ಜಮೀನೊಂದರಲ್ಲಿ ಹಂದಿಯ ಕಳೇಬರ ಪತ್ತೆಯಾಗಿದೆ.ಹುಲಿ ಬೇಟೆಯಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.ಹಂದಿಯ ಕಳೇಬರದ ಬಳಿ ಹುಲಿಯ ಹೆಜ್ಜೆ ಗುರುತುಗಳು...

ಅಣ್ಣನಿಂದಲೇ ತಂಗಿ ಮೇಲೆ ಅತ್ಯಾಚಾರ…ಸಾಂಸ್ಕೃತಿಕ ನಗರಿಯಲ್ಲಿ ಮತ್ತೊಂದು ಹೇಯ ಕೃತ್ಯ…

ಸಾಂಸ್ಕೃತಿಕ ನಗರಿಯಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೇಯ ಕೃತ್ಯ ನಡೆದಿದೆ.ಸ್ವಂತ ತಂಗಿಯ ಮೇಲೇ ಅತ್ಯಾಚಾರವೆಸಗಿದ ಪಾಪಿ ಅಣ್ಣ ಪೊಲೀಸರ...

Recent Comments