32 C
Mysore
Monday, January 17, 2022
Home All News ಕೆ.ಆರ್.ಎಸ್.ಪೊಲೀಸರ ಕಾರ್ಯಾಚರಣೆ…ಎಂ.ಎಸ್.ಐ.ಎಲ್ ನಲ್ಲಿ ಕಳುವು ಮಾಡಿದ್ದ ಮೂವರು ಆರೋಪಿಗಳ ಬಂಧನ…

ಕೆ.ಆರ್.ಎಸ್.ಪೊಲೀಸರ ಕಾರ್ಯಾಚರಣೆ…ಎಂ.ಎಸ್.ಐ.ಎಲ್ ನಲ್ಲಿ ಕಳುವು ಮಾಡಿದ್ದ ಮೂವರು ಆರೋಪಿಗಳ ಬಂಧನ…

ಕೆ.ಆರ್.ಎಸ್.ಠಾಣಾ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮೂವರು ಕಳ್ಳರ ಬಂಧನವಾಗಿದೆ.ಎಂ.ಎಸ್.ಐ.ಎಲ್ ಮಧ್ಯದ ಮಳಿಗೆಯ ಹಿಂಬದಿ ಗೋಡೆ ಕೊರೆದು ಕಳುವು ಮಾಡಿದ್ದ ಮೂವರು ಆರೋಪಿಗಳು ಇದೀಗ ಪೊಲೀಸರ ಅತಿಥಿಗಳು.ಹೊಂಗಳ್ಳಿ ಗ್ರಾಮದ ಶ್ರೀಧರ,ಸಿದ್ದ ಹಾಗೂ ಸಂತೋಷ್ ಬಂಧಿತ ಆರೋಪಿಗಳು.

ನವೆಂಬರ್ 7 ರಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಕೆ.ಆರ್.ಸಾಗರ-ಬೃಂದಾವನ ಮುಖ್ಯ ರಸ್ತೆಯಲ್ಲಿರುವ ಎಂಎಸ್ ಐಎಲ್ ಮಳಿಗೆಯಲ್ಲಿ ಕೃತ್ಯವೆಸಗಿದ್ದರು.ಹಿಂಬದಿಯ ಗೋಡೆ ಕೊರೆದು 3 ಸಾವಿರ ನಗದು ಹಾಗೂ 22,778/- ರೂ ಮೌಲ್ಯದ ಮಧ್ಯದ ಬಾಟಲಿಗಳನ್ನ ಕಳ್ಳತನ ಮಾಡಿದ್ದರು.ಡಿ.ವೈ.ಎಸ್ಪಿ ಸಂದೇಶ್ ಕುಮಾರ್ ಹಾಗೂ ಶ್ರೀರಂಗಪಟ್ಟಣ ವೃತ್ತ ನಿರೀಕ್ಷಕ ಯೋಗೇಶ್ ಮಾರ್ಗದರ್ಶನದಲ್ಲಿ ಕೆ.ಆರ್.ಎಸ್.ಠಾಣೆಯ ಪಿಎಸ್ಸೈ ಲಿಂಗರಾಜು ಹಾಗೂ ಸಿಬ್ಬಂದಿಗಳಾದ ಲಕ್ಷ್ಮಿಪುತ್ರ,ತೌಸೀಫ್,ಯದುರಾಜ್,ಡ್ರೈವರ್ ಸಂತೋಷ್ ಕುಮಾರ್ ರವರನ್ನೊಳಗೊಂಡ ತಂಡ ಆರೋಪಿಗಳ ಸೆರೆಗೆ ಜಾಲ ಬೀಸಿತ್ತು.ಇಂದು ದೊರೆತ ಖಚಿತ ಮಾಹಿತಿ ಆಧಾರದ ಮೇಲೆ ಆರೋಪಿಗಳನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹಾರೆ, ಕಂಬಳಿ ಹಾಗೂ 2 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ…

LEAVE A REPLY

Please enter your comment!
Please enter your name here

- Advertisment -

Most Popular

ನೀರಿನ ಶುಲ್ಕ ಬಾಕಿಗೆ ಬಡ್ಡಿ ವಿಧಿಸಿರುವ ಪಾಲಿಕೆ…ಕೈ ಬಿಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ…

ಮೈಸೂರು,ಜ.17.Tv10 kannadaಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನೀರಿನ ಶುಲ್ಕ ಹೆಚ್ಚಳ ಹಾಗೂ ಬಾಕಿ ಮೊತ್ತಕ್ಕೆ ಬಡ್ಡಿ ವಿಧಿಸಿರುವ ವಿಚಾರಕ್ಕೆ ಸಂಸದ ಪ್ರತಾಪ್ ಸಿಂಹ ಕಳವಳ...

ಸ್ಮಾರ್ಟ್ ಫೋನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಾಜಶೇಖರ್…

ಮೈಸ್ಮಾರ್ಟ್ ಫೋನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಾಜಶೇಖರ್ಸೂರು,ಜ.17.Tv10 kannadaರಸ್ತೆಯಲ್ಲಿ ಬೆಲೆಬಾಳುವ ವಸ್ತುಗಳು ದೊರೆತರೆ ಖುಷಿಯಾಗಿ ಹೊಡೆದುಕೊಂಡು ಹೋಗುವವರೇ ಹೆಚ್ಚು ಮಂದಿ ಇದ್ದಾರೆ.ಇಂತಹವರ ಮಧ್ಯೆ ಖಾಸಗಿ...

ನಿವೇಶನ ಖಾತೆ ಬದಲಾವಣೆ ವಿಚಾರದಲ್ಲಿ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಬನ್ನೂರು,ಜ.16. Tv10 Kannadaಪತಿಯ ಹೆಸರಿನಲ್ಲಿದ್ದ ಖಾಲಿನಿವೇಶನ ಪತ್ನಿ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡುವ ವಿಚಾರದಲ್ಲಿ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಟಿ.ನರಸೀಪುರ...

ಚಿಕ್ಕಪ್ಪನ ಜೊತೆ ಪತ್ನಿಯ ಅಕ್ರಮ ಸಂಭಂಧ…ಮಗನನ್ನು ಕೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪತಿ…

ಬೆಂಡಿಗನವಿಲೆ,ಜ.15.Tv10 Kannadaಎಲ್.ಐ.ಸಿ.ಏಜೆಂಟ್ ಆಗಿರುವ ಚಿಕ್ಕಪ್ಪನ ಜೊತೆ ಅಕ್ರಮ ಸಂಭಂಧ ಇರಿಸಿಕೊಂಡಿದ್ದ ಪತ್ನಿಯ ವರ್ತನೆಗೆ ಬೇಸತ್ತ ಪತಿರಾಯ ತನ್ನ ಮಗನನ್ನ ಕೊಂದು ತಾನೂ ಕೆರೆಗೆ ಹಾರಿ...

Recent Comments