32 C
Mysore
Monday, January 17, 2022
Home All News ಆಸ್ತಿ ವೈಷಮ್ಯ… ಗುಂಡು ಹಾರಿಸಿ ಕೊಲೆಗೆ ಯತ್ನ…

ಆಸ್ತಿ ವೈಷಮ್ಯ… ಗುಂಡು ಹಾರಿಸಿ ಕೊಲೆಗೆ ಯತ್ನ…

ಜಮೀನು ವಿವಾದ ಹಿನ್ನೆಲೆಯಲ್ಲಿ ಸಂಭಂಧಿಕರ ನಡುವೆ ವೈಷಮ್ಯ ಬೆಳೆದಿದ್ದು ಸೋದರ ಸಂಬಂಧಿಯೇ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಸಕಲೇಶಪುರ ತಾಲೂಕು ಉಚ್ಚಂಗಿ ಗ್ರಾಮದಲ್ಲಿ ನಡೆದಿದೆ.ಘಟನೆಯಲ್ಲಿ ಕೃತಿಕ್ ಎಂಬುವರು ಗಂಭೀರ ಗಾಯಗೊಂಡು ಹಾಸನ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಸಂಜೆ ೬.೩೦ ರ ಸುಮಾರಿಗೆ ತಮ್ಮ ಕಾರಿನಲ್ಲಿ ಕೆಲಸದ ನಿಮಿತ್ತ ಚಂಗಡಿಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು. ನಾಗನಹಳ್ಳಿಯಿಂದ ಸ್ವಲ್ಪ ಮುಂದೆ ತೆರಳುತ್ತಿದ್ದಾಗ ಇವರ ದೊಡ್ಡಪ್ಪನ
ಮಗ ರವಿಕುಮಾರ್, ಅವರ ಸಹೋದರರಾದ ವೇದಮೂರ್ತಿ, ಸುರೇಶ ಹಾಗೂ ರವಿಕುಮಾರ್ ಮಗ ಚಿರಾಗ್ ಎಂಬುವರು ಆಲ್ಟೋ ಕಾರಿನಲ್ಲಿ ಬಂದು ಕೃತಿಕ್ ಕಾರಿಗೆ ಹಾಕಿದ್ದಾರೆ.
ಅದೇ ವೇಳೆ ಚಿರಾಗ್ ಓಡಿಸುತ್ತಿದ್ದ ಕಾರಿನಲ್ಲಿದ್ದ ರವಿಕುಮಾರ ಏಕಾಏಕಿ ಕೃತಿಕ್ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ಬಲಗೈನ ತೋಳಿಗೆ ತಗುಲಿ ಗಂಭೀರ ಗಾಯಗೊಂಡಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಹಿಂದೆ ಕೃತಿಕ್ ತಂದೆ ಹಾಗೂ ರವಿಕುಮಾರ ಮತ್ತು ವೇದಮೂರ್ತಿ ಕುಟುಂಬಗಳ ನಡುವೆ ಜಮೀನಿನ ವಿಚಾರದಲ್ಲಿ ಜಗಳ ನಡೆದು ಪ್ರಕರಣ ಕೋರ್ಟ್ ಮೆಟ್ಟಿಲೇರಿ ಸಕಲೇಶಪುರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ದುರುದ್ದೇಶದಿಂದಲೇ ಕೃತಿಕ್ ಅವರನ್ನು ಕೊಲೆ ಮಾಡಲು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಯಸಳೂರು ಪೊಲೀಸರು ಪ್ರಕರಣ ದಾಖಲಾಗಿದೆ…

LEAVE A REPLY

Please enter your comment!
Please enter your name here

- Advertisment -

Most Popular

ನೀರಿನ ಶುಲ್ಕ ಬಾಕಿಗೆ ಬಡ್ಡಿ ವಿಧಿಸಿರುವ ಪಾಲಿಕೆ…ಕೈ ಬಿಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ…

ಮೈಸೂರು,ಜ.17.Tv10 kannadaಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನೀರಿನ ಶುಲ್ಕ ಹೆಚ್ಚಳ ಹಾಗೂ ಬಾಕಿ ಮೊತ್ತಕ್ಕೆ ಬಡ್ಡಿ ವಿಧಿಸಿರುವ ವಿಚಾರಕ್ಕೆ ಸಂಸದ ಪ್ರತಾಪ್ ಸಿಂಹ ಕಳವಳ...

ಸ್ಮಾರ್ಟ್ ಫೋನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಾಜಶೇಖರ್…

ಮೈಸ್ಮಾರ್ಟ್ ಫೋನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಾಜಶೇಖರ್ಸೂರು,ಜ.17.Tv10 kannadaರಸ್ತೆಯಲ್ಲಿ ಬೆಲೆಬಾಳುವ ವಸ್ತುಗಳು ದೊರೆತರೆ ಖುಷಿಯಾಗಿ ಹೊಡೆದುಕೊಂಡು ಹೋಗುವವರೇ ಹೆಚ್ಚು ಮಂದಿ ಇದ್ದಾರೆ.ಇಂತಹವರ ಮಧ್ಯೆ ಖಾಸಗಿ...

ನಿವೇಶನ ಖಾತೆ ಬದಲಾವಣೆ ವಿಚಾರದಲ್ಲಿ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಬನ್ನೂರು,ಜ.16. Tv10 Kannadaಪತಿಯ ಹೆಸರಿನಲ್ಲಿದ್ದ ಖಾಲಿನಿವೇಶನ ಪತ್ನಿ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡುವ ವಿಚಾರದಲ್ಲಿ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಟಿ.ನರಸೀಪುರ...

ಚಿಕ್ಕಪ್ಪನ ಜೊತೆ ಪತ್ನಿಯ ಅಕ್ರಮ ಸಂಭಂಧ…ಮಗನನ್ನು ಕೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪತಿ…

ಬೆಂಡಿಗನವಿಲೆ,ಜ.15.Tv10 Kannadaಎಲ್.ಐ.ಸಿ.ಏಜೆಂಟ್ ಆಗಿರುವ ಚಿಕ್ಕಪ್ಪನ ಜೊತೆ ಅಕ್ರಮ ಸಂಭಂಧ ಇರಿಸಿಕೊಂಡಿದ್ದ ಪತ್ನಿಯ ವರ್ತನೆಗೆ ಬೇಸತ್ತ ಪತಿರಾಯ ತನ್ನ ಮಗನನ್ನ ಕೊಂದು ತಾನೂ ಕೆರೆಗೆ ಹಾರಿ...

Recent Comments