32 C
Mysore
Monday, January 17, 2022
Home All News ಕೊಡಗು ಜಿಲ್ಲೆಯ 30 ಸಾವಿರ ರೈತರಿಗೆ 583 ಕೋಟಿ ಸಾಲ ವಿತರಣೆ: ಸಚಿವ ಎಸ್.ಟಿ.ಸೋಮಶೇಖರ್

ಕೊಡಗು ಜಿಲ್ಲೆಯ 30 ಸಾವಿರ ರೈತರಿಗೆ 583 ಕೋಟಿ ಸಾಲ ವಿತರಣೆ: ಸಚಿವ ಎಸ್.ಟಿ.ಸೋಮಶೇಖರ್

ಮಡಿಕೇರಿ, ನವೆಂಬರ್ 22, ಸೋಮವಾರ

ವಿಧಾನಪರಿಷತ್ ನಲ್ಲಿ ಜನರ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಡುವ, ಜನರ ಭಾವನೆಗಳಿಗೆ ಸ್ಪಂದಿಸುವ ಸುಜಾ ಕುಶಾಲಪ್ಪ ಅವರನ್ನು ಆಯ್ಕೆ ಮಾಡಿದರೆ ನೂರಕ್ಕೆ ನೂರರಷ್ಟು ಸ್ಥಳೀಯ ಸಮಸ್ಯೆಗಳು ಬಗೆಹರಿಯಲಿದೆ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಮಡಿಕೇರಿಯಲ್ಲಿ ಆಯೋಜಿಸಿದ್ದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಸಚಿವರು, ವಿಧಾನಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈಶ್ವರಪ್ಪ, ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಪ್ರಚಾರ ಮಾಡಿದ 9 ಜಿಲ್ಲೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈತರ ಅನುಕೂಲಕ್ಕಾಗಿ ಸಹಕಾರಿ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಕೊಡಗು ಜಿಲ್ಲೆಯಲ್ಲಿ 30 ಸಾವಿರಕ್ಕೂ ಹೆಚ್ಚು ರೈತರಿಗೆ ಅಲ್ಪಾವಧಿ, ದೀರ್ಘಾವಧಿ ಸಾಲ ಸೇರಿದಂತೆ ಸುಮಾರು 583 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ ಎಂದು ಹೇಳಿದರು.

21 ಡಿಸಿಸಿ ಬ್ಯಾಂಕ್ ಗಳ ಪೈಕಿ ಸಾಲ ವಿತರಣೆ, ಸಾಲ ಮರುಪಾವತಿ, ಕಟ್ಟಡ ನಿರ್ಮಾಣ ವಿಷಯದಲ್ಲಿ ಮುಂದೆ ಇರುವುದು ಕೊಡಗು ಡಿಸಿಸಿ ಬ್ಯಾಂಕ್ ಎಂದರು.

ಗ್ರಾಪಂ, ತಾಪಂ, ಜಿಪಂ ಸದಸ್ಯರಿಗೆ ಅನುಕೂಲ ಮಾಡಿಕೊಡಲು ನಮ್ಮ ಸರ್ಕಾರ ಡಿಲಿಮಿಟೇಶನ್ ಮಾಡಿದೆ. ಇದರಿಂದ ಎಲ್ಲಾ ಸದಸ್ಯರುಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here

- Advertisment -

Most Popular

ನೀರಿನ ಶುಲ್ಕ ಬಾಕಿಗೆ ಬಡ್ಡಿ ವಿಧಿಸಿರುವ ಪಾಲಿಕೆ…ಕೈ ಬಿಡುವಂತೆ ಸಂಸದ ಪ್ರತಾಪ್ ಸಿಂಹ ಮನವಿ…

ಮೈಸೂರು,ಜ.17.Tv10 kannadaಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನೀರಿನ ಶುಲ್ಕ ಹೆಚ್ಚಳ ಹಾಗೂ ಬಾಕಿ ಮೊತ್ತಕ್ಕೆ ಬಡ್ಡಿ ವಿಧಿಸಿರುವ ವಿಚಾರಕ್ಕೆ ಸಂಸದ ಪ್ರತಾಪ್ ಸಿಂಹ ಕಳವಳ...

ಸ್ಮಾರ್ಟ್ ಫೋನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಾಜಶೇಖರ್…

ಮೈಸ್ಮಾರ್ಟ್ ಫೋನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಾಜಶೇಖರ್ಸೂರು,ಜ.17.Tv10 kannadaರಸ್ತೆಯಲ್ಲಿ ಬೆಲೆಬಾಳುವ ವಸ್ತುಗಳು ದೊರೆತರೆ ಖುಷಿಯಾಗಿ ಹೊಡೆದುಕೊಂಡು ಹೋಗುವವರೇ ಹೆಚ್ಚು ಮಂದಿ ಇದ್ದಾರೆ.ಇಂತಹವರ ಮಧ್ಯೆ ಖಾಸಗಿ...

ನಿವೇಶನ ಖಾತೆ ಬದಲಾವಣೆ ವಿಚಾರದಲ್ಲಿ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಬನ್ನೂರು,ಜ.16. Tv10 Kannadaಪತಿಯ ಹೆಸರಿನಲ್ಲಿದ್ದ ಖಾಲಿನಿವೇಶನ ಪತ್ನಿ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡುವ ವಿಚಾರದಲ್ಲಿ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಟಿ.ನರಸೀಪುರ...

ಚಿಕ್ಕಪ್ಪನ ಜೊತೆ ಪತ್ನಿಯ ಅಕ್ರಮ ಸಂಭಂಧ…ಮಗನನ್ನು ಕೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪತಿ…

ಬೆಂಡಿಗನವಿಲೆ,ಜ.15.Tv10 Kannadaಎಲ್.ಐ.ಸಿ.ಏಜೆಂಟ್ ಆಗಿರುವ ಚಿಕ್ಕಪ್ಪನ ಜೊತೆ ಅಕ್ರಮ ಸಂಭಂಧ ಇರಿಸಿಕೊಂಡಿದ್ದ ಪತ್ನಿಯ ವರ್ತನೆಗೆ ಬೇಸತ್ತ ಪತಿರಾಯ ತನ್ನ ಮಗನನ್ನ ಕೊಂದು ತಾನೂ ಕೆರೆಗೆ ಹಾರಿ...

Recent Comments