32 C
Mysore
Tuesday, May 17, 2022
Home All News ವಿಧಾನ ಪರಿಷತ್ ಚುನಾವಣೆ…ವಾಟಾಳ್ ನಾಗರಾಜ್ ನಾಮಪತ್ರ ಸಲ್ಲಿಕೆ…

ವಿಧಾನ ಪರಿಷತ್ ಚುನಾವಣೆ…ವಾಟಾಳ್ ನಾಗರಾಜ್ ನಾಮಪತ್ರ ಸಲ್ಲಿಕೆ…

ವಿಧಾನಪರಿಷತ್ ಚುನಾವಣೆ ಹಿನ್ನಲೆ ಮೈಸೂರು-ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿಯಾಗಿ ವಾಟಾಳ್ ನಾಗರಾಜ್ ಇಂದು ನಾಮಪತ್ರ ಸಲ್ಲಿಸಿದರು.
ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ಸ್ಪರ್ಧೆ ಮಾಡುತ್ತಿದ್ದಾರೆ.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ವಾಟಾಳ್ ನಾಗರಾಜ್ ನಾನು ಪಕ್ಷಾಂತರಿಯಲ್ಲ.ನಾನು ಪಕ್ಷಾಂತರಿಯಾಗಿದ್ದರೆ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದಾಗಿತ್ತು.ನನ್ನದೇ ಆದ ತತ್ವ ಸಿದ್ದಾಂತಗಳ ಮೇಲೆ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ.ನಾನು ರಿಯಲ್ ಎಸ್ಟೇಟ್ ಮಾಡಿಲ್ಲ.ಲೂಟಿ ಮಾಡಿಲ್ಲ, ಕಂಟ್ರಾಕ್ಟರ್ ಕೆಲಸ ಮಾಡಿಲ್ಲ.
ಗ್ರಾಮ ಪಂಚಾಯತಿ ಸದಸ್ಯರಿಗೆ ನ್ಯಾಯ ದೊರಕಿಸಿಕೊಡಬೇಕೆಂಬ ಮಹದಾಸೆಯಿಂದ ಸ್ಪರ್ಧೆಗೆ ಮುಂದಾಗಿದ್ದೇನೆ.
ವಿಧಾನ ಪರಿಷತ್ ಎಂದರೆ ಚಿಂತಕರ ಚಾವಡಿಯಿದ್ದಂತೆ.
ಆದರೆ ಈಗಿನ ಚುನಾವಣೆಯನ್ನು ಗಮನಿಸಿದರೆ ಬೇಸರವಾಗುತ್ತದೆ.
ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆ ವ್ಯವಸ್ಥೆಯನ್ನು ಹಾಳು ಮಾಡಿವೆ.ರಾಜಕೀಯ ಪಕ್ಷಗಳು ಇಡೀ ರಾಜ್ಯದಲ್ಲಿ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದನ್ನು ಗಮನಿಸಿದರೆ ಇದು ಗೋಚರವಾಗುತ್ತಿದೆ.
ಇದು ಕಡ್ಲೆಪುರಿ ವ್ಯಾಪಾರವಲ್ಲ, ಮಸಾಲಾ ದೋಸೆ ತಿಂದಂತಲ್ಲ.ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಂಕಿ ಬೀಳಬಾರದು.ಗ್ರಾಮ ಪಂಚಾಯತಿ ಸದಸ್ಯರು ಆಸೆ ಆಮಿಷಗಳಿಗೆ ಬಲಿಯಾಗಬೇಡಿ.
ನನಗೆ ಒಂದು ಮತ ನೀಡಿ ಬೆಂಬಲಿಸಿ.
ಒಂದೇ ಮತ ಹಾಕಬೇಡಿ‌.ಇಬ್ಬರು ಗೆಲ್ಲಬೇಕಿದೆ, ಒಂದು, ಎರಡು, ಮೂರು, ನಾಲ್ಕನೇ ಪ್ರಾಶಸ್ತ್ಯದ ಮತಗಳಿಗೂ ಮಹತ್ವವಿದೆ.ಈ ಅವಕಾಶವನ್ನು ಕಳೆದುಕೊಳ್ಳಬೇಡಿ.
ನಾನು ಪ್ರಾಮಾಣಿಕನಾಗಿದ್ದೇನೆ, ಪ್ರಾಮಾಣಿಕ ಜವಾಬ್ದಾರಿಯಿಂದಲೇ ಸ್ಪರ್ಧೆಗಿಳಿದಿದ್ದೇನೆ.ಕಳೆದ ಬಾರಿಯ ಚುನಾವಣೆಯಲ್ಲಿ ಸೋತಿದ್ದರೂ ವಿಚಲಿತನಾಗಿಲ್ಲ.ಈ ಬಾರಿ ನನಗೆ ಗೆಲ್ಲುವ ವಿಶ್ವಾಸವಿದೆ.ಗೆಲ್ಲುವ ಭರವಸೆಯಿಂದಲೇ ಕಣಕ್ಕಿಳಿದಿದ್ದೇನೆ ಎಂದು
ನಾಮಪತ್ರ ಸಲ್ಲಿಸಿದ ಬಳಿಕ ವಾಟಾಳ್ ನಾಗರಾಜ್ ಹೇಳಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಪ್ರಿಯಕರನ ಖುಷಿಪಡಿಸಲು ಅಪ್ರಾಪ್ತ ಮಗಳನ್ನೇ ಮಂಚಕ್ಕೆ ಕಳಿಸಿದ ಪಾಪಿ ತಾಯಿ…

Tv10 ಕನ್ನಡಪ್ರಿಯಕರನನ್ನ ಖುಷಿಪಡಿಸಲು ಪಾಪಿತಾಯಿ ಮಗಳನ್ನೇ ಒಪ್ಪಿಸಿದ ಘಟನೆ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ.ತಾಯಿಯ ನೀಚ ಕೃತ್ಯದಿಂದಾಗಿ ಅಪ್ರಾಪ್ತ ಮಗಳೀಗ ಗಂಡು ಮಗುವಿನ ತಾಯಿ.ಮುತ್ತುಕುಮಾರ್ ಎಂಬಾತನ...

ಮಗಳ ಭವಿಷ್ಯಕ್ಕಾಗಿ ಮುತ್ತು ಆದ ಪೆಚ್ಚಿಯಮ್ಮಾಳ್…

Tv10 ಕನ್ನಡಮಕ್ಕಳಿಗಾಗಿ ಹೆತ್ತತಾಯಿ ಎಂತಹ ತ್ಯಾಗಕ್ಕಾದರೂ ಸಿದ್ದ ಎಂಬುದಕ್ಕೆ ತಮಿಳುನಾಡಿನ ಪೆಚ್ಚಿಯಮ್ಮಾಳ್ ತಾಜಾ ಉದಾಹರಣೆ.ತಂದೆಯ ಕೊರತೆ ನೀಗಿಸಲು ಸುಮಾರು 20 ವರ್ಷಗಳಿಂದ ಗಂಡು ವೇಷ...

1/- ಗೆ ಒಂದು ಕಪ್ ಟೀ ಮೈಸೂರಿನಲ್ಲಿ…ಎಲ್ಲಿ ಗೊತ್ತಾ…?

ಮೈಸೂರು,ಮೇ14,Tv10 ಕನ್ನಡಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಂದು ರೂಪಾಯಿಗೆ ಒಂದು ಕಪ್ ತಾಜಾ ಬಿಸಿ ಬಿಸಿ ಟೀ ಲಭ್ಯ…! ಅಚ್ಚರಿ ಎನಿಸಿದ್ರೂ ಇದು ನಿಜ.ಮೈಸೂರಿನ ಕುವೆಂಪುನಗರದ...

ಕುಡುಕ ಮಗನಿಗೆ ಮದುವೆ ಮಾಡಲು ಒಪ್ಪದ ಪೋಷಕರು…ಟಾಯ್ಲೆಟ್ ಕ್ಲೀನಿಂಗ್ ಆಸಿಡ್ ಕುಡಿದು ಪೀವೋಟ್ ಆತ್ಮಹತ್ಯೆ…

ಮೈಸೂರು,ಮೇ 12,Tv10 ಕನ್ನಡಕುಡಿತದ ಚಟಕ್ಕೆ ದಾಸನಾದ ಪುತ್ರನಿಗೆ ಪೋಷಕರು ಮದುವೆ ಮಾಡಲು ನಿರಾಕರಿಸಿದ ಹಿನ್ನಲೆ ಟಾಯ್ಲೆಲೆಟ್ ಕ್ಲೀನಿಂಗ್ ಆಸಿಡ್ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ...

Recent Comments