ಕುಡಿದ ಮತ್ತಿನಲ್ಲಿ ಬಸ್ ಹತ್ತಿದ ಪೊಲೀಸಪ್ಪ ಫುಲ್ ಟೈಟಾಗಿ ವಾಲಾಡಿ ಬಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಬಸ್ಸಿನಲ್ಲೇ ಜಾರಿ ಬಿದ್ದ ಪೊಲೀಸಪ್ಪನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ನಿನ್ನೆ ರಾತ್ರಿ ಈ ಘಟನೆ ನಡೆದಿದೆ.ಶಿವಮೊಗ್ಗದ ರಿಪ್ಪನಪೇಟೆ ಪೊಲೀಸ್ ಠಾಣೆಯ ಎ.ಎಸ್.ಐ. ಹಾಲಪ್ಪ ಎಣ್ಣೆ ನಶೆಗೆ ಟೈಟಾದವರು. ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ದಾವಣಗೆರೆ ರಿಪ್ಪನಪೇಟೆ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಎಎಸ್ಸೈ ಆಗಿರುವ ಹಾಲಪ್ಪ ಪ್ರತಿದಿನ ಶಿವಮೊಗ್ಗದಿಂದ ರಿಪ್ಪನಪೇಟೆ ಪಗರಾಯಾಣಿಸುತ್ತಿದ್ದಾರೆ.ನಿನ್ನೆ ಡ್ಯೂಟಿಗೆ ಹೊರಟಿದ್ದ ಹಾಲಪ್ಪ, ಫುಲ್ ಟೈಟಾಗಿ ಖಾಸಗಿ ಬಸ್ ಹತ್ತಿದ್ದಾರೆ. ಫುಲ್ ನಶೆಯಲ್ಲಿದ್ದ ಹಾಲಪ್ಪ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ಎ.ಎಸ್.ಐ. ವರ್ತನೆ ಕಂಡು ಪ್ರಯಾಣಿಕರು ಮೊಬೈಲ್ ನಲ್ಲಿ ಈ ಕ್ಲಿಕ್ಕಿಸಿಕೊಂಡಿದ್ದಾರೆ. ಜವಾಬ್ದಾರಿಯುತ ಅಧಿಕಾರಿಯೇ ಹೀಗೆ ವರ್ತಿಸಿದರೆ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರದ್ದು…