ಮೈಸೂರು,ಜ.15.Tv10 kannada
ಮೈಸೂರಿನಲ್ಲಿ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ.ಮನೆ ಮನೆಗಳಲ್ಲೂ ಸಂಕ್ರಾಂತಿ ಸಡಗರ ಮನೆ ಮಾಡಿದೆ.ಗೋವುಗಳಿಗೆ ಪೂಜೆ ಸಲ್ಲಿಸಿ ಆಚರಿಸಲಾಗಿದೆ.ಶ್ರೀ ರಾಮಚಂದ್ರಾಪುರ ಮಠದ ಭಾರತೀಯ ಗೋ ಪರಿವಾರ ಮೈಸೂರು ವಲಯದ ವತಿಯಿಂದ ಗೋ ಪೂಜೆ ನೆರವೇರಿಸಲಾಯಿತು. ರಾಮಕೃಷ್ಣನಗರದಲ್ಲಿ
ಗೋವುಗಳನ್ನ ವಿವಿಧ ಬಣ್ಣಗಳಿಂದ ಸಿಂಗರಿಸಿದ ಗೋಪರಿವಾರದ ದಂಪತಿಗಳು ಪೂಜೆ ಸಲ್ಲಿಸಿದರು.ಇದೇ ಸಂಧರ್ಭದಲ್ಲಿ ಕಳೆದ ಏಳು ದಶಕಗಳಿಂದ ಗೋಪಾಲಕರಾಗಿ ಗೋ ಸೇವೆ ಸಲ್ಲಿಸುತ್ತಿರುವ ಕನ್ನೇಗೌಡ ಕೊಪ್ಪಲಿನ ರಂಗಪ್ಪರವರನ್ನು ಸನ್ಮಾನಿಸಲಾಯಿತು. ಎಲ್ಲವನ್ನು ನೀಡಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಗೋಪರಿವಾರದ ಮೈಸೂರು ಜಿಲ್ಲಾ ಶ್ರೀಸಂಯೋಜಕರಾದ ರಾಕೇಶ್ ಭಟ್, ಗೋಪಾಲಕ ರಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ರೇಣುಕಾ ರಾಜು, ಜೀವಧಾರ ಗಿರೀಶ್, ಗೋಪರಿವಾರದ ಸದಸ್ಯರಾದ ವಿಕ್ರಮ್ ಅಯ್ಯಂಗಾರ್, ಜಯಸಿಂಹ, ಸಂದೇಶ್ ಪವಾರ್, ಅಜಯ್ ಶಾಸ್ತ್ರಿ, ವರಲಕ್ಷ್ಮಿ ಅಜಯ್, ಟಿ.ಎಸ್.ಅರುಣ್, ದೀಪಕ್, ಹೇಮಾವತಿ ಹಾಜರಿದ್ದರು…