32 C
Mysore
Tuesday, May 17, 2022
Home All News ಚಿಕ್ಕಪ್ಪನ ಜೊತೆ ಪತ್ನಿಯ ಅಕ್ರಮ ಸಂಭಂಧ…ಮಗನನ್ನು ಕೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪತಿ…

ಚಿಕ್ಕಪ್ಪನ ಜೊತೆ ಪತ್ನಿಯ ಅಕ್ರಮ ಸಂಭಂಧ…ಮಗನನ್ನು ಕೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪತಿ…

ಬೆಂಡಿಗನವಿಲೆ,ಜ.15.Tv10 Kannada
ಎಲ್.ಐ.ಸಿ.ಏಜೆಂಟ್ ಆಗಿರುವ ಚಿಕ್ಕಪ್ಪನ ಜೊತೆ ಅಕ್ರಮ ಸಂಭಂಧ ಇರಿಸಿಕೊಂಡಿದ್ದ ಪತ್ನಿಯ ವರ್ತನೆಗೆ ಬೇಸತ್ತ ಪತಿರಾಯ ತನ್ನ ಮಗನನ್ನ ಕೊಂದು ತಾನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬಿಂಡಿಗನವಿಲೆ ಹೋಬಳಿಯ ಪುಟ್ಟೇಕೊಪ್ಪಲು ಗ್ರಾಮದಲ್ಲಿ ನಡೆದಿದೆ.ಡೆತ್ ನೋಟ್ ಬರೆದು ಮಗನಿಂದ ಸಂಭಂಧಿಕರಿಗೆಲ್ಲ ಮೊಬೈಲ್ ನಲ್ಲಿ ಗುಡ್ ನೈಟ್ ಹೇಳಿಸಿ ತನ್ನ ಕಾಲುಗಳನ್ನ ಕಟ್ಟಿಕೊಂಡು ಕೆರೆಗೆ ಹಾರಿದ್ದಾನೆ.ಗಂಗಾಧರ್(34) ಹಾಗೂ ಇವರ ಪುತ್ರ ಜಸ್ವೀತ್(6) ಮೃತ ದುರ್ದೈವಿಗಳು.ಘಟನೆಗೆ ಕಾರಣಳಾದ ಪತ್ನಿ ಸಿಂಧು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.ಚಿಕ್ಕಪ್ಪ ನಂಜುಂಡೇಗೌಡ ನಾಪತ್ತೆಯಾಗಿದ್ದಾನೆ.

8 ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಗಂಗಾಧರ್ ಹಾಗೂ ಸಿಂಧುಗೆ 6 ವರ್ಷದ ಜಸ್ವೀತ್ ಎಂಬ ಪುತ್ರ ಇದ್ದ.ಕೆಲವು ವರ್ಷಗಳಿಂದ ಎಲ್.ಐ.ಸಿ.ಏಜೆಂಟ್ ಆಗಿರುವ ತನ್ನ ಚಿಕ್ಕಪ್ಪ ಜಿ.ಸಿ.ನಂಜುಂಡೇಗೌಡನ ಜೊತೆ ಸಿಂಧು ಅಕ್ರಮ ಸಂಭಂಧ ಬೆಳೆಸಿದ್ದಳು.ಈ ವಿಚಾರ ಪತಿ ಗಂಗಾಧರ್ ಗಮನಕ್ಕೆ ಬಂದು ಸಂಸಾರದಲ್ಲಿ ಗಲಾಟೆ ಆಗಿದೆ.ನಂಜುಂಡೇಗೌಡನ ಸಹವಾಸ ಬಿಡುವಂತೆ ಹಲವಾರು ಬಾರಿ ಬುದ್ದಿವಾದ ಹೇಳಿದ್ದಾನೆ.ಅಲ್ಲದೆ ಗ್ರಾಮದಲ್ಲಿ ಈ ಕುರಿತಂತೆ ರಾಜಿ ಪಂಚಾಯ್ತಿಯೂ ನಡೆದಿದೆ.ಇಷ್ಟೆಲ್ಲಾ ಬೆಳವಣಿಗೆ ಆದರೂ ಸಿಂಧು ವರ್ತನೆಯಲ್ಲಿ ಬದಲಾವಣೆ ಆಗಲಿಲ್ಲ.ಇದರಿಂದ ನೊಂದ ಗಂಗಾಧರ್ ತನ್ನ ಪುತ್ರ ಜಸ್ವೀತ್ ಜೊತೆ ಗುರುವಾರ ರಾತ್ರಿ ಬೈಕ್ ನಲ್ಲಿ ತೆರಳಿದ್ದಾನೆ.ಗ್ರಾಮದ ಕೆರೆ ಬಳಿ ನಿಂತು ಪುತ್ರನ ಜೊತೆ ಮಾತನಾಡಿಸಿ ಮೊಬೈಲ್ ಮೂಲಕ ಎಲ್ಲಾ ತನ್ನ ಸಂಭಂಧಿಕರಿಗೆ ಗುಡ್ ನೈಟ್ ಹೇಳಿಸಿ ಗುಡ್ ಬೈ ಹೇಳಿಸಿದ್ದಾನೆ.ನಂತರ ನೋಟ್ ಪುಸ್ತಕದ ಹಾಳೆಯಲ್ಲಿ ಡೆತ್ ನೋಟ್ ಬರೆದು ಬೆಂಗಳೂರಿನಲ್ಲಿರುವ ತನ್ನ ಸಹೋದರ ಮಂಜುನಾಥ್ ಗೆ ವಾಟ್ಸಾಪ್ ಮೂಲಕ ರವಾನಿಸಿದ್ದಾನೆ.ನಂತರ ಜಸ್ವೀತ್ ನನ್ನು ಕೆರೆಯಲ್ಲಿ ಮುಳುಗಿಸಿ ಕೊಂದು ತಾನೂ ತನ್ನ ಕಾಲುಗಳನ್ನ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮರುದಿನ ಕೆರೆ ಬಳಿ ಗಂಗಾಧರ್ ಬೈಕ್ ನಿಂತಿದ್ದ ವಿಚಾರ ಗ್ರಾಮಸ್ಥರಿಗೆ ತಿಳಿದಿದ್ದು ಪೊಲೀಸರ ಗಮನಕ್ಕೆ ತಂದಿದ್ದಾರೆ.ಕೆರೆಯಲ್ಲಿ ಶೋಧನೆ ಮಾಡಿದಾಗ ಗಂಗಾಧರ್ ಹಾಗೂ ಜಸ್ವೀತ್ ಮೃತದೇಹಗಳ ಪತ್ತೆಯಾಗಿದೆ.ಈ ಮಾಹಿತಿ ಅರಿತ ಸಿಂಧು ಸ್ಥಳಕ್ಕೆ ಆಗಮಿಸಿ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.ಗ್ರಾಮಸ್ಥರು ಸಿಂಧುವನ್ನ ರಕ್ಷಿಸಿದ್ದಾರೆ.ಬೆಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿಂದು ಅರೆಸ್ಟ್ ಆಗಿದ್ದಾಳೆ.ನಂಜುಂಡೇಗೌಡ ನಾಪತ್ತೆಯಾಗಿದ್ದಾನೆ…

LEAVE A REPLY

Please enter your comment!
Please enter your name here

- Advertisment -

Most Popular

ಪ್ರಿಯಕರನ ಖುಷಿಪಡಿಸಲು ಅಪ್ರಾಪ್ತ ಮಗಳನ್ನೇ ಮಂಚಕ್ಕೆ ಕಳಿಸಿದ ಪಾಪಿ ತಾಯಿ…

Tv10 ಕನ್ನಡಪ್ರಿಯಕರನನ್ನ ಖುಷಿಪಡಿಸಲು ಪಾಪಿತಾಯಿ ಮಗಳನ್ನೇ ಒಪ್ಪಿಸಿದ ಘಟನೆ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ.ತಾಯಿಯ ನೀಚ ಕೃತ್ಯದಿಂದಾಗಿ ಅಪ್ರಾಪ್ತ ಮಗಳೀಗ ಗಂಡು ಮಗುವಿನ ತಾಯಿ.ಮುತ್ತುಕುಮಾರ್ ಎಂಬಾತನ...

ಮಗಳ ಭವಿಷ್ಯಕ್ಕಾಗಿ ಮುತ್ತು ಆದ ಪೆಚ್ಚಿಯಮ್ಮಾಳ್…

Tv10 ಕನ್ನಡಮಕ್ಕಳಿಗಾಗಿ ಹೆತ್ತತಾಯಿ ಎಂತಹ ತ್ಯಾಗಕ್ಕಾದರೂ ಸಿದ್ದ ಎಂಬುದಕ್ಕೆ ತಮಿಳುನಾಡಿನ ಪೆಚ್ಚಿಯಮ್ಮಾಳ್ ತಾಜಾ ಉದಾಹರಣೆ.ತಂದೆಯ ಕೊರತೆ ನೀಗಿಸಲು ಸುಮಾರು 20 ವರ್ಷಗಳಿಂದ ಗಂಡು ವೇಷ...

1/- ಗೆ ಒಂದು ಕಪ್ ಟೀ ಮೈಸೂರಿನಲ್ಲಿ…ಎಲ್ಲಿ ಗೊತ್ತಾ…?

ಮೈಸೂರು,ಮೇ14,Tv10 ಕನ್ನಡಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಂದು ರೂಪಾಯಿಗೆ ಒಂದು ಕಪ್ ತಾಜಾ ಬಿಸಿ ಬಿಸಿ ಟೀ ಲಭ್ಯ…! ಅಚ್ಚರಿ ಎನಿಸಿದ್ರೂ ಇದು ನಿಜ.ಮೈಸೂರಿನ ಕುವೆಂಪುನಗರದ...

ಕುಡುಕ ಮಗನಿಗೆ ಮದುವೆ ಮಾಡಲು ಒಪ್ಪದ ಪೋಷಕರು…ಟಾಯ್ಲೆಟ್ ಕ್ಲೀನಿಂಗ್ ಆಸಿಡ್ ಕುಡಿದು ಪೀವೋಟ್ ಆತ್ಮಹತ್ಯೆ…

ಮೈಸೂರು,ಮೇ 12,Tv10 ಕನ್ನಡಕುಡಿತದ ಚಟಕ್ಕೆ ದಾಸನಾದ ಪುತ್ರನಿಗೆ ಪೋಷಕರು ಮದುವೆ ಮಾಡಲು ನಿರಾಕರಿಸಿದ ಹಿನ್ನಲೆ ಟಾಯ್ಲೆಲೆಟ್ ಕ್ಲೀನಿಂಗ್ ಆಸಿಡ್ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ...

Recent Comments