32 C
Mysore
Tuesday, May 17, 2022
Home All News ನಿವೇಶನ ಖಾತೆ ಬದಲಾವಣೆ ವಿಚಾರದಲ್ಲಿ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ನಿವೇಶನ ಖಾತೆ ಬದಲಾವಣೆ ವಿಚಾರದಲ್ಲಿ ಗಲಾಟೆ…ಓರ್ವನ ಕೊಲೆಯಲ್ಲಿ ಅಂತ್ಯ…

ಬನ್ನೂರು,ಜ.16. Tv10 Kannada
ಪತಿಯ ಹೆಸರಿನಲ್ಲಿದ್ದ ಖಾಲಿನಿವೇಶನ ಪತ್ನಿ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡುವ ವಿಚಾರದಲ್ಲಿ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಟಿ.ನರಸೀಪುರ ತಾಲೂಕು ಬನ್ನೂರಿನ ವ್ಯಾಸರಾಜಪುರ ಗ್ರಾಮದಲ್ಲಿ ನಡೆದಿದೆ.ಚಿನ್ನಸ್ವಾಮಿ(46) ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ಆರೋಪಿ ಪ್ರತಾಪ್.ಆ.ಗಿಲ್ಲಿಸಿದ್ದನಾಯಕ(34) ಪರಾರಿ.ವ್ಯಾಸರಾಜಪುರದಲ್ಲಿರುವ ಖಾಲಿ ನಿವೇಶನವೊಂದು ಮನಸಿದ್ದನಾಯಕ ಎಂಬುವರ ಹೆಸರಿನಲ್ಲಿದೆ.ಕೆಲವು ವರ್ಷಗಳ ಹಿಂದೆ ಮನಸಿದ್ದನಾಯಕ ತೀರಿಕೊಂಡಿದ್ದು ಖಾಲಿ‌ನಿವೇಶನವನ್ನ ಪತ್ನಿ ಚಿಕ್ಕಣ್ಣಮ್ನ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.ಇದಕ್ಕಾಗಿ ನಾಲ್ಕು ತಿಂಗಳ ಹಿಂದೆ ಮಾಜಿ ಛೇರ್ಮನ್ ನಾಗರಾಜು ರವರಿಗೆ ಚಿಕ್ಕಣ್ಣಮ್ಮ 10 ಸಾವಿರ ಕೊಟ್ಟಿದ್ದಾರೆ.ಹಣ ಕೊಟ್ಟಿದ್ದರೂ ನಿವೇಶನ ತಮ್ಮ ಹೆಸರಿಗೆ ಬದಲಾಯಿಸುವಲ್ಲಿ ನಾಗರಾಜ್ ವಿಫಲರಾಗಿದ್ದಾರೆ.ಈ ವಿಚಾರದಲ್ಲಿ ಚಿಕ್ಕಣ್ಣಮ್ಮ ಮಗ ಚಿನ್ನಸ್ವಾಮಿ ತಮ್ಮ ಮನೆ ಮುಂದೆ ನಿಂತು ನಾಗರಾಜ್ ಗೆ ಬೈಯುತ್ತಿರುತ್ತಾರೆ.ಇದನ್ನ ಕೇಳಿಸಿಕೊಂಡ ಪ್ರತಾಪ್ ನಮ್ಮ ಚಿಕ್ಕಪ್ಪನಿಗೆ ಬೈಯುತ್ತೀಯ ಎಂದು ಜಗಳ ತೆಗೆದಿದ್ದಾನೆ.ಮರದ ತುಂಡಿನಿಂದ ಚಿನ್ನಸ್ವಾಮಿ ತಲೆಗೆ ಹೊಡೆದಿದ್ದಾನೆ.ಪ್ರಜ್ಞೆ ತಪ್ಪಿದ ಚಿನ್ನಸ್ವಾಮಿಯನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಚಿನ್ನಸ್ವಾಮಿ ಮೃತಪಟ್ಟಿದ್ದಾರೆ.ಕೊಲೆ ಮಾಡಿದ ಪ್ರತಾಪ್ ತಲೆ ಮರೆಸಿಕೊಂಡಿದ್ದಾನೆ.ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

LEAVE A REPLY

Please enter your comment!
Please enter your name here

- Advertisment -

Most Popular

ಪ್ರಿಯಕರನ ಖುಷಿಪಡಿಸಲು ಅಪ್ರಾಪ್ತ ಮಗಳನ್ನೇ ಮಂಚಕ್ಕೆ ಕಳಿಸಿದ ಪಾಪಿ ತಾಯಿ…

Tv10 ಕನ್ನಡಪ್ರಿಯಕರನನ್ನ ಖುಷಿಪಡಿಸಲು ಪಾಪಿತಾಯಿ ಮಗಳನ್ನೇ ಒಪ್ಪಿಸಿದ ಘಟನೆ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ.ತಾಯಿಯ ನೀಚ ಕೃತ್ಯದಿಂದಾಗಿ ಅಪ್ರಾಪ್ತ ಮಗಳೀಗ ಗಂಡು ಮಗುವಿನ ತಾಯಿ.ಮುತ್ತುಕುಮಾರ್ ಎಂಬಾತನ...

ಮಗಳ ಭವಿಷ್ಯಕ್ಕಾಗಿ ಮುತ್ತು ಆದ ಪೆಚ್ಚಿಯಮ್ಮಾಳ್…

Tv10 ಕನ್ನಡಮಕ್ಕಳಿಗಾಗಿ ಹೆತ್ತತಾಯಿ ಎಂತಹ ತ್ಯಾಗಕ್ಕಾದರೂ ಸಿದ್ದ ಎಂಬುದಕ್ಕೆ ತಮಿಳುನಾಡಿನ ಪೆಚ್ಚಿಯಮ್ಮಾಳ್ ತಾಜಾ ಉದಾಹರಣೆ.ತಂದೆಯ ಕೊರತೆ ನೀಗಿಸಲು ಸುಮಾರು 20 ವರ್ಷಗಳಿಂದ ಗಂಡು ವೇಷ...

1/- ಗೆ ಒಂದು ಕಪ್ ಟೀ ಮೈಸೂರಿನಲ್ಲಿ…ಎಲ್ಲಿ ಗೊತ್ತಾ…?

ಮೈಸೂರು,ಮೇ14,Tv10 ಕನ್ನಡಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಂದು ರೂಪಾಯಿಗೆ ಒಂದು ಕಪ್ ತಾಜಾ ಬಿಸಿ ಬಿಸಿ ಟೀ ಲಭ್ಯ…! ಅಚ್ಚರಿ ಎನಿಸಿದ್ರೂ ಇದು ನಿಜ.ಮೈಸೂರಿನ ಕುವೆಂಪುನಗರದ...

ಕುಡುಕ ಮಗನಿಗೆ ಮದುವೆ ಮಾಡಲು ಒಪ್ಪದ ಪೋಷಕರು…ಟಾಯ್ಲೆಟ್ ಕ್ಲೀನಿಂಗ್ ಆಸಿಡ್ ಕುಡಿದು ಪೀವೋಟ್ ಆತ್ಮಹತ್ಯೆ…

ಮೈಸೂರು,ಮೇ 12,Tv10 ಕನ್ನಡಕುಡಿತದ ಚಟಕ್ಕೆ ದಾಸನಾದ ಪುತ್ರನಿಗೆ ಪೋಷಕರು ಮದುವೆ ಮಾಡಲು ನಿರಾಕರಿಸಿದ ಹಿನ್ನಲೆ ಟಾಯ್ಲೆಲೆಟ್ ಕ್ಲೀನಿಂಗ್ ಆಸಿಡ್ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ...

Recent Comments