ಮೈಸ್ಮಾರ್ಟ್ ಫೋನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ರಾಜಶೇಖರ್ಸೂರು,ಜ.17.Tv10 kannada
ರಸ್ತೆಯಲ್ಲಿ ಬೆಲೆಬಾಳುವ ವಸ್ತುಗಳು ದೊರೆತರೆ ಖುಷಿಯಾಗಿ ಹೊಡೆದುಕೊಂಡು ಹೋಗುವವರೇ ಹೆಚ್ಚು ಮಂದಿ ಇದ್ದಾರೆ.ಇಂತಹವರ ಮಧ್ಯೆ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ರಸ್ತೆಯಲ್ಲಿ ಬಿದ್ದಿದ್ದ ಸ್ಮಾರ್ಟ್ ಫೋನ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ರಾಣೆ ಮದ್ರಾಸ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ರಾಜಶೇಖರ್ ಇಂತಹ ಪ್ರಾಮಾಣಿಕತೆ ಮೆರೆದವರು.ಈವತ್ತು ಬೆಳಿಗ್ಗೆ ತಮ್ಮ ಕೆಲಸದ ನಿಮಿತ್ತ ಹೊರಟಿದ್ದ ರಾಜಶೇಖರ್ ಗೆ ಎನ್.ಆರ್.ಮೊಹಲ್ಲಾದ ಪೆನ್ಷನ್ ಬ್ಲಾಕ್ ರಸ್ತೆಯಲ್ಲಿ ಸ್ಮಾರ್ಟ್ ಫೋನ್ ಸಿಕ್ಕಿದೆ.ತಮ್ಮ ಕಣ್ಣಿಗೆ ಬಿದ್ದ ಬೆಲೆಬಾಳುವ ಸ್ಮಾರ್ಟ್ ಫೋನ್ ನ್ನ ನೇರವಾಗಿ ಎನ್.ಆರ್.ಪೊಲೀಸ್ ಠಾಣೆಗೆ ತಲುಪಿಸಿದ್ದಾರೆ. ಪೊಲೀಸರು ಮಾಲೀಕರನ್ನ ಪತ್ತೆಹಚ್ಚಿದಾಗ ಮೊಬೈಲ್ ತ್ರಿಶೂಲ್ ರಾಜ್ ಎಂಬುವರಿಗೆ ಸೇರಿದ್ದು ಖಚಿತವಾಗಿದೆ. ನಂತರ ತ್ರಿಶೂಲ್ ರಾಜ್ ರನ್ನ ಠಾಣೆಗೆ ಕರೆಸಿದ ಎನ್.ಆರ್.ಠಾಣೆ ಸಬ್ ಇನ್ಸ್ಪೆಕ್ಟರ್ ಜೈಕೀರ್ತಿ ರವರು ಫೋನ್ ಹಿಂದಿರುಗಿಸಿದ್ದಾರೆ. ತಮ್ಮ ಮೊಬೈಲ್ ಅನ್ನು ಕಂಡು ಸಂತಸಪಟ್ಟ ತ್ರಿಶೂಲ್ ರಾಜ್ ರವರು ರಾಜಶೇಖರ್ ರವರ ಪ್ರಾಮಾಣಿಕತೆಯನ್ನ ಕೊಂಡಾಡಿದ್ದಾರೆ. ತಮ್ಮ ದೈನಂದಿನ ಕೆಲಸದ ಎಲ್ಲ ಮಾಹಿತಿಗಳು ಫೋನ್ ನಲ್ಲಿ ಇದ್ದವು ಕಳೆದುಕೊಂಡು ಕಂಗಲಾಗಿದ್ದೆ ಫೋನ್ ತಂದುಕೊಟ್ಟ ಪ್ರಾಮಾಣಿಕತೆ ಮೆರೆದ ರಾಜಶೇಖರ್ ರವರಿಗೆ ತ್ರಿಶೂಲ್ ಧನ್ಯವಾದಗಳನ್ನು ತಿಳಿಸಿದ್ದಾರೆ. ಪ್ರಾಮಾಣಿಕ ವಾಗಿ ನಡೆದುಕೊಂಡು ರಾಜಶೇಖರ್ ಅವರಿಗೆ ಎನ್ ಆರ್ ಪೊಲೀಸ್ ಠಾಣೆ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ…