ಮೈಸೂರು,ಜ.17.Tv10 kannada
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನೀರಿನ ಶುಲ್ಕ ಹೆಚ್ಚಳ ಹಾಗೂ ಬಾಕಿ ಮೊತ್ತಕ್ಕೆ ಬಡ್ಡಿ ವಿಧಿಸಿರುವ ವಿಚಾರಕ್ಕೆ ಸಂಸದ ಪ್ರತಾಪ್ ಸಿಂಹ ಕಳವಳ ವ್ಯಕ್ತಪಡಿಸಿದ್ದಾರೆ.
ನೀರಿನ ಶುಲ್ಕದ ಬಾಕಿ ಮೊತ್ತಕ್ಕೆ ಪಾಲಿಕೆ ಬಡ್ಡಿ ವಿಧಿಸುತ್ತಿದೆ.140 ಕೋಟಿಯಷ್ಟು ಬಾಕಿ ಶುಲ್ಕಕ್ಕೆ ಸುಮಾರು 73ಕೋಟಿ ಬಡ್ಡಿ ವಿಧಿಸಲಾಗಿದೆ.ಇದರಿಂದ ಜನಸಾಮಾನ್ಯರಿಗೆ ಬರೆ ಎಳೆದಂತಾಗುತ್ತದೆ.
ಅದಕ್ಕಾಗಿ ಅಸಲು ಬಾಕಿಯನ್ನು ಮಾತ್ರ ವಸೂಲಿ ಮಾಡಿ ಅಂತ ಮನವಿ ಮಾಡಿದ್ದೇನೆ.
ಅಸಲು ಬಡ್ಡಿ ಎರಡನ್ನೂ ಪಾವತಿಸಲು ಜನರಿಗೆ ಕಷ್ಟ ಆಗುತ್ತೆ.ಬಡ್ಡಿ ಕಡಿತ ಮಾಡಿದರೆ ಜನ ಅಸಲನ್ನಾದರೂ ಕಟ್ಟುತ್ತಾರೆ.ಈ ವಿಚಾರವನ್ನ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದು
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ…