*ನಂಜನಗೂಡು,ಏ10,Tv10 ಕನ್ನಡ*
ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಶುರುವಾದ ಗಲಾಟೆ ತಮ್ಮನ ಕೊಲೆಯಲ್ಲಿ ಅಂತ್ಯವಾದ ಘಟನೆ ನಂಜನಗೂಡು ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗೋವಿಂದ(35) ಕೊಲೆಯಾದದುರ್ದೈವಿ.ಹತ್ಯೆ ಮಾಡಿದ ಅಣ್ಣ ರಂಗಸ್ವಾಮಿ ನಾಪತ್ತೆ.ಜಾಗದ ವಿಚಾರದಲ್ಲಿ ಅಣ್ಣತಮ್ಮಂದಿರ ನಡುವೆ ಗಲಾಟೆ ನಡೆಯುತ್ತಿತ್ತು.ಆಗಾಗ ನಡೆಯುತ್ತಿದ್ದ ಗಲಾಟೆಯನ್ನ ಗ್ರಾಮಸ್ಥರು ಮಧ್ಯಪ್ರವೇಶಿಸಿ ಶಮನಗೊಳಿಸುತ್ತಿದ್ದರು.ನಿನ್ನೆಯೂ ಸಹ ಇದೇ ವಿಚಾರದಲ್ಲಿ ಗಲಾಟೆ ನಡೆದಿದೆ.ಗ್ರಾಮಸ್ಥರು ಇಬ್ಬರನ್ನೂ ಸಮಾಧಾನ ಪಡಿಸಿದ್ದಾರೆ.ಮನೆ ಮುಂದೆ ಇದ್ದ ಶೌಚಾಲಯದ ಬಾಗಿಲು ಬೀಗ ಮುರಿದಿದ್ದಾನೆಂದು ಕ್ಯಾತೆ ತೆಗೆದ ಅಣ್ಣ ರಂಗಸ್ವಾಮಿ ತಡರಾತ್ರಿ ಮಲಗಿದ್ದ ತಮ್ಮ ಗೋವಿಂದ ನಾಯಕನ ಮೇಲೆ ಮೊಚ್ಚಿನಿಂದ ಹಲ್ಲೆ ನಡೆಸಿದ್ದಾನೆ.ರಕ್ತದ ಮಡುವಿನಲ್ಲಿದ್ದ ಗೋವಂದನಾಯ್ಕನನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸಿದ್ದಾರೆ.ಗೋವಿಂದ ನಾಯ್ಕ ಮೃತಪಟ್ಟಿದ್ದಾನೆ.ಕೃತ್ಯವೆಸಗಿದ ರಂಗಸ್ವಾಮಿ ಪರಾರಿಯಾಗಿದ್ದಾನೆ.ಘಟನೆ ನಡೆದ ಸ್ಥಳಕ್ಕೆ ದೊಡ್ಡಕವಲಂದೆ ಠಾಣೆ ಪಿಎಸ್ಸೈ ಮಹೇಂದ್ರ ಭೇಟಿ ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ರಂಗಸ್ವಾಮಿ ಬಂಧನಕ್ಕೆ ಜಾಲ ಬೀಸಿದ್ದಾರೆ…