32 C
Mysore
Wednesday, July 6, 2022
Home All News *ಹುಲ್ಲಹಳ್ಳಿ ಸ್ವಾಮಿ ಸಾವು ಕೊಲೆಯೋ...ಸಹಜವೋ...?ಒಂದೂವರೆ ತಿಂಗಳ ನಂತರ ದಾಖಲಾಯ್ತು FIR...!*

*ಹುಲ್ಲಹಳ್ಳಿ ಸ್ವಾಮಿ ಸಾವು ಕೊಲೆಯೋ…ಸಹಜವೋ…?ಒಂದೂವರೆ ತಿಂಗಳ ನಂತರ ದಾಖಲಾಯ್ತು FIR…!*

*ನಂಜನಗೂಡು,ಏ10,Tv10 ಕನ್ನಡ*
ಕೂಲಿ ಕಾರ್ಮಿಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಘಟನೆ ನಡೆದ ಒಂದೂವರೆ ತಿಂಗಳ ನಂತರFIR ದಾಖಲಾದ ಪ್ರಕರಣ ನಂಜನಗೂಡು ತಾಲೂಕು ಹುಲ್ಲಹಳ್ಳಿಯಲ್ಲಿ ನಡೆದಿದೆ.ಮಗನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪೋಷಕರು ಸಮಗ್ರ ತನಿಖೆ ನಡೆಸಿತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.ದೂರಿನ ಆಧಾರದಂತೆ ಹುಲ್ಲಹಳ್ಳಿ ಪೊಲೀಸರು ಗಣೇಶ್ ಹಾಗೂ ಸೀನ ಎಂಬುವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಎಸ್ಪಿ ಆರ್.ಚೇತನ್ ರವರು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.ಹುಲ್ಲಹಳ್ಳಿಯ ನಿವಾಸಿ ಸ್ವಾಮಿ ಫೆಬ್ರವರಿ 15 ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.ಸ್ನೇಹಿತರಾದ ಗಣೇಶ್ ಹಾಗೂ ಸೀನಾ ಎಂಬುವರ ಜೊತೆ ಫೆಬ್ರವರಿ 14 ರಂದು ಬೈಕ್ ನಲ್ಲಿ ತೆರಳಿದ್ದ ಸ್ವಾಮಿ ಮರುದಿನ ಶವವಾಗಿ ಪತ್ತೆಯಾಗಿದ್ದರು.ಗಣೇಶ್ ಹಾಗೂ ಸೀನಾ ವಿರುದ್ದ ದೂರು ನೀಡಲು ಪೋಷಕರು ಮುಂದಾಗಿದ್ದರು.ಆದರೆ ಗ್ರಾಮದ ಯಜಮಾನರಾದ ಶಿವಣ್ಣ ಹಾಗೂ ಶಿವಲಿಂಗನಾಯಕ ಮಾರಮ್ಮನ ಹಬ್ಬದ ನಂತರ ದೂರು ನೀಡೋಣವೆಂದು ಮನ ಒಲಿಸಿದ್ದರು. ಘಟನೆ ನಡೆದ ಒಂದೂವರೆ ತಿಂಗಳ ನಂತರ ಸ್ವಾಮಿ ತಾಯಿ ಚೋಳಮ್ಮ ಎಂಬುವರು ಹುಲ್ಲಹಳ್ಳಿ ಠಾಣೆಗೆ ಹಾಜರಾಗಿ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಗಣೇಶ್ ಹಾಗೂ ಸೀನ ವಿರುದ್ದ FIR ದಾಖಲಿಸಿದ್ದಾರೆ.ಇದೀಗ ಪೊಲೀಸರಿಗೆ ಈ ಪ್ರಕರಣ ಸವಾಲಾಗಿ ಪರಿಣಮಿಸಿದೆ.ಒಂದೂವರೆ ತಿಂಗಳ ನಂತರ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮೃತನ ಅಂತ್ಯಕ್ರಿಯೆ ನಡೆದುಹೋಗಿದೆ.ಶವವನ್ನ ಗ್ರಾಮಸ್ಥರ ಅಣತಿಯಂತೆ ಪೋಷಕರು ಸುಟ್ಟುಹಾಕಿದ್ದಾರೆ.ಯಾವುದೇ ಸಾಕ್ಷಾದಾರಗಳು ಇಲ್ಲದಿರುವುದರಿಂದ ಪೊಲೀಸರಿಗೆ ಈ ಪ್ರಕರಣ ಸವಾಲಾಗಿ ಪರಿಣಮಿಸಿದೆ.ಹೀಗಿದ್ದೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಆರ್.ಚೇತನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ…

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ… ತಿ.ನರಸೀಪುರ,ಜುಲೈ5,Tv10 ಕನ್ನಡಕಳೆದ ಮೂರು ದಿನಗಳಿಂದ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆಯಾಗಿದೆ.ತಾಲ್ಲೂಕಿನ ಮುತ್ತತ್ತಿ ಗ್ರಾಮದ ಬಳಿ ಬೋನಿಗೆ ಸಿಲುಕಿದೆ. ಮುತ್ತತ್ತಿ...

ಎಸಿಬಿ ಬಲೆಗೆ ಎಸ್ಸೈ,ಹೆಚ್.ಸಿ…ಲಂಚ ಪಡೆಯುವ ವೇಳೆ ಟ್ರಾಪ್…

ಎಸಿಬಿ ಬಲೆಗೆ ಎಸ್ಸೈ,ಹೆಚ್.ಸಿ…ಲಂಚ ಪಡೆಯುವ ವೇಳೆ ಟ್ರಾಪ್… ತಲಕಾಡು,ಜುಲೈ5,Tv10 ಕನ್ನಡಎಸಿಬಿ ಬಲೆಗೆ ತಲಕಾಡು ಸಬ್ ಇನ್ಸಪೆಕ್ಟರ್ ಹಾಗೂ ಹೆಡ್ ಕಾನ್ಸಟೇಬಲ್ ಬಿದ್ದಿದ್ದಾರೆ.ತಲಕಾಡು ಪಿಎಸ್ ಐ ಸಿದ್ದಯ್ಯ...

ಮಹಿಳೆ ಸಜೀವ ದಹನ…ಕೊಲೆ ಆರೋಪ…ಸೊಸೆ ಹಾಗೂ ಬೀಗರು ಪೊಲೀಸರ ವಶಕ್ಕೆ…

ಮಹಿಳೆ ಸಜೀವ ದಹನ…ಕೊಲೆ ಆರೋಪ…ಸೊಸೆ ಹಾಗೂ ಬೀಗರು ಪೊಲೀಸರ ವಶಕ್ಕೆ… ನಂಜನಗೂಡು,ಜುಲೈ5,Tv10 ಕನ್ನಡಮೂರು ತಿಂಗಳ ಹಿಂದಷ್ಟೆ ಮಗನನ್ನ ಕಳೆದುಕೊಂಡ ತಾಯಿ ಸಜೀವ ದಹನವಾಗಿದ್ದಾರೆ.ಮೃತಳ ತಾಯಿ ಕೊಲೆ...

ಮೈಸೂರು ಜಿಲ್ಲೆಯ ನಾಗನಹಳ್ಳಿಯಲ್ಲಿನ ಕೃಷಿ ತರಬೇತಿ ಕೇಂದ್ರ ಆವರಣದಲ್ಲಿ ಜಾಗೃತಕೋಶ ಮೈಸೂರು ವಿಭಾಗದ ಕಚೇರಿಯನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಉದ್ಘಾಟಿಸಿದರು.

ಮೈಸೂರು ಜಿಲ್ಲೆಯ ನಾಗನಹಳ್ಳಿಯಲ್ಲಿನ ಕೃಷಿ ತರಬೇತಿ ಕೇಂದ್ರ ಆವರಣದಲ್ಲಿ ಜಾಗೃತಕೋಶ ಮೈಸೂರು ವಿಭಾಗದ ಕಚೇರಿಯನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು...

Recent Comments