32 C
Mysore
Wednesday, July 6, 2022
Home All News ದ್ವಿಚಕ್ರ ವಾಹನ ಕಳ್ಳನ ಬಂಧನ…6.25 ಲಕ್ಷ ಮೌಲ್ಯದ 29 ಮೊಪೆಡ್ ವಶ…ಟಿವಿಎಸ್ XL ಗಳೇ ಖದೀಮನ...

ದ್ವಿಚಕ್ರ ವಾಹನ ಕಳ್ಳನ ಬಂಧನ…6.25 ಲಕ್ಷ ಮೌಲ್ಯದ 29 ಮೊಪೆಡ್ ವಶ…ಟಿವಿಎಸ್ XL ಗಳೇ ಖದೀಮನ ಟಾರ್ಗೆಟ್…

ನಂಜನಗೂಡು,ಜೂ3,Tv10 ಕನ್ನಡ
ಟಿ.ವಿ.ಎಸ್ XL ಮೊಪೆಡ್ ಗಳನ್ನೇ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಖದೀಮನನ್ನ ಬಂಧಿಸುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನಿಂದ 6.25. ಲಕ್ಷ ಮೌಲ್ಯದ 29 ಟಿ.ವಿ.ಎಸ್ XL ಮೊಪೆಡ್ ಗಳನ್ನ ವಶಪಡಿಸಿಕೊಂಡಿದ್ದಾರೆ. ನಂಜನಗೂಡಿನ ಕಂದೇಗಾಲ ಗ್ರಾಮದ ಸಿದ್ದರಾಜು ಬಂಧಿತ ಆರೋಪಿ.ನಕಲಿ ಕೀ ಬಳಸಿ ಮೊಪೆಡ್ ಗಳನ್ನ ಕದ್ದು ಪುಡಿಗಾಸಿಗೆ ಮಾರುತ್ತಿದ್ದ ಸಿದ್ದರಾಜು ಪೊಲೀಸರ ಅತಿಥಿಯಾಗಿದ್ದಾನೆ.ಗುಂಡ್ಲುಪೇಟೆ,ಚಾಮರಾಜನಗರ ಹಾಗೂ ನಂಜನಗೂಡು ವ್ಯಾಪ್ತಿಯಲ್ಲಿ ಮೊಪೆಡ್ ಗಳನ್ನ ಕಳುವು ಮಾಡಿದ್ದಾನೆ.ಈತನ ಗುರಿ ಕೇವಲ TVS XL ಗಳೆ ಆಗಿರುವುದು ವಿಶೇಷ.ಮೈಸೂರು ಜಿಲ್ಲಾ ಎಸ್ಪಿ ಆರ್.ಚೇತನ್ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ಗೋವಿಂದರಾಜ್ ಹಾಗೂ ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ್ ತಳವಾರ್ ನೇತೃತ್ವದಲ್ಲಿ ಎಸ್ಸೈ ಚೆಲುವಯ್ಯ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ…

LEAVE A REPLY

Please enter your comment!
Please enter your name here

- Advertisment -

Most Popular

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ…

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ… ತಿ.ನರಸೀಪುರ,ಜುಲೈ5,Tv10 ಕನ್ನಡಕಳೆದ ಮೂರು ದಿನಗಳಿಂದ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆಯಾಗಿದೆ.ತಾಲ್ಲೂಕಿನ ಮುತ್ತತ್ತಿ ಗ್ರಾಮದ ಬಳಿ ಬೋನಿಗೆ ಸಿಲುಕಿದೆ. ಮುತ್ತತ್ತಿ...

ಎಸಿಬಿ ಬಲೆಗೆ ಎಸ್ಸೈ,ಹೆಚ್.ಸಿ…ಲಂಚ ಪಡೆಯುವ ವೇಳೆ ಟ್ರಾಪ್…

ಎಸಿಬಿ ಬಲೆಗೆ ಎಸ್ಸೈ,ಹೆಚ್.ಸಿ…ಲಂಚ ಪಡೆಯುವ ವೇಳೆ ಟ್ರಾಪ್… ತಲಕಾಡು,ಜುಲೈ5,Tv10 ಕನ್ನಡಎಸಿಬಿ ಬಲೆಗೆ ತಲಕಾಡು ಸಬ್ ಇನ್ಸಪೆಕ್ಟರ್ ಹಾಗೂ ಹೆಡ್ ಕಾನ್ಸಟೇಬಲ್ ಬಿದ್ದಿದ್ದಾರೆ.ತಲಕಾಡು ಪಿಎಸ್ ಐ ಸಿದ್ದಯ್ಯ...

ಮಹಿಳೆ ಸಜೀವ ದಹನ…ಕೊಲೆ ಆರೋಪ…ಸೊಸೆ ಹಾಗೂ ಬೀಗರು ಪೊಲೀಸರ ವಶಕ್ಕೆ…

ಮಹಿಳೆ ಸಜೀವ ದಹನ…ಕೊಲೆ ಆರೋಪ…ಸೊಸೆ ಹಾಗೂ ಬೀಗರು ಪೊಲೀಸರ ವಶಕ್ಕೆ… ನಂಜನಗೂಡು,ಜುಲೈ5,Tv10 ಕನ್ನಡಮೂರು ತಿಂಗಳ ಹಿಂದಷ್ಟೆ ಮಗನನ್ನ ಕಳೆದುಕೊಂಡ ತಾಯಿ ಸಜೀವ ದಹನವಾಗಿದ್ದಾರೆ.ಮೃತಳ ತಾಯಿ ಕೊಲೆ...

ಮೈಸೂರು ಜಿಲ್ಲೆಯ ನಾಗನಹಳ್ಳಿಯಲ್ಲಿನ ಕೃಷಿ ತರಬೇತಿ ಕೇಂದ್ರ ಆವರಣದಲ್ಲಿ ಜಾಗೃತಕೋಶ ಮೈಸೂರು ವಿಭಾಗದ ಕಚೇರಿಯನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಉದ್ಘಾಟಿಸಿದರು.

ಮೈಸೂರು ಜಿಲ್ಲೆಯ ನಾಗನಹಳ್ಳಿಯಲ್ಲಿನ ಕೃಷಿ ತರಬೇತಿ ಕೇಂದ್ರ ಆವರಣದಲ್ಲಿ ಜಾಗೃತಕೋಶ ಮೈಸೂರು ವಿಭಾಗದ ಕಚೇರಿಯನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು...

Recent Comments