ಪಿರಿಯಾಪಟ್ಟಣ,ಜೂ4,Tv10 ಕನ್ನಡ
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರದ ಕಿತ್ತೂರು ಗ್ರಾಮದಲ್ಲಿ ನಡೆದಿದೆ.ವರದಕ್ಷಿಣೆ ಕಿರುಕುಳ ಆರೋಪ ಹೊತ್ತು ಗೃಹಿಣಿಯ ಸಾವಿಗೆ ಕಾರಣರಾದ ಪತಿ,ಅತ್ತೆ,ಮಾವ,ನಾದಿನಿ ನಾಪತ್ತೆಯಾಗಿದ್ದಾರೆ.
ಶ್ವೇತ ವರದಕ್ಷಿಣೆ ದಾಹಕ್ಕೆ ಬಲಿಯಾದ ಗೃಹಿಣಿ.

ಕೆಲ್ಲೂರು ಗ್ರಾಮದ ಶ್ವೇತಳನ್ನ ಕಿತ್ತೂರು ಗ್ರಾಮದ ಬಸವರಾಜ್.ಆ.ಪ್ರದೀಪ್ ಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು.ಮದುವೆ ಸಮಯದಲ್ಲಿ 100 ಗ್ರಾಂ ಚಿನ್ನ ಒಂದು ಲಕ್ಷ ನಗದು ವರದಕ್ಷಿಣೆಯಾಗಿ ನೀಡಲಾಗಿತ್ತು.ಒಂದೆರಡು ತಿಂಗಳು ಪತಿ ಜೊತೆ ಶ್ವೇತ ಅನ್ಯೋನ್ಯ ಸಂಸಾರ ನಡೆಸಿದ್ದಾರೆ.ನಂತರ ಪತಿ ಬಸವರಾಜ್,ಅತ್ತೆ ಸರೋಜಮ್ಮ, ಹಾಗೂ ನಾದಿನಿ ಲತಾ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ.ಈ ಹಿಂದೆ 3 ತಿಂಗಳ ಗರ್ಭಿಣಿಯಾಗಿದ್ದ ಶ್ವೇತ ವರದಕ್ಷಿಣೆ ಕಿರುಕುಳ ತಾಳದೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದಾರೆ.ಈ ವೇಳೆ ಹಿರಿಯರು ರಾಜಿ ಸಂಧಾನ ಮಾಡಿದ್ದಾರೆ.ಹೀಗಿದ್ದೂ ಪತಿ ಮನೆಯಲ್ಲಿ ವರದಕ್ಷಿಣೆಗಾಗಿ ಮತ್ತೆ ಕಿರುಕುಳ ನೀಡಿದ್ದಾರೆ.ಇದರಿಂದ ಮನನೊಂದ ಶ್ವೇತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಶ್ವೇತ ಸಾವಿಗೆ ಕಾರಣರಾದ ಪತಿ ಬಸವರಾಜ್,ಅತ್ತೆ ಸರೋಜಮ್ಮ ಹಾಗೂ ನಾದಿನಿ ಲತಾ ವಿರುದ್ದ ಕ್ರಮ ಕೈಗೊಳ್ಳುವಂತೆ ಲತಾ ಪೋಷಕರು ಬೆಟ್ಟದಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.ಆರೋಪಿಗಳು ನಾಪತ್ತೆಯಾಗಿದ್ದಾರೆ…
