ಮೈಸೂರು,ಜೂ6,Tv10 ಕನ್ನಡ
ಆಟೋದಲ್ಲಿ ಮರೆತು ಹೋಗಿದ್ದ ಬೆಲೆ ಬಾಳುವ ಮೊಬೈಲ್ ಅನ್ನು ವಾರಸುದಾರರಿಗೆ ಹಿಂದಿರುಗಿಸಿದ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.ಆಟೋ ಚಾಲಕನ ಪ್ರಾಮಾಣಿಕತೆಗೆ ಮೈಸೂರು ಪೊಲೀಸರು ಪ್ರಶಂಸನಾ ಪತ್ರ ವಿತರಿಸಿದ್ದಾರೆ.ಮೇಟಗಳ್ಳಿ ನಿವಾಸಿ ರಾಜು ಎಂಬುವರೇ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ.ಬೆಂಗಳೂರಿನಿಂದ ಮೈಸೂರಿಗೆ ಪ್ರವಾಸಕ್ಕಾಗಿ ಬಂದ ಶ್ಯಾಂ ಎಂಬುವರು ಜಗನ್ಮೋಹನ ಅರಮನೆಗೆ ರಾಜು ರವರ ಆಟೋದಲ್ಲಿ ತೆರಳಿದ್ದಾರೆ.ಈ ವೇಳೆ ಆಟೋದಲ್ಲಿ 60 ಸಾವಿರ ಮೌಲ್ಯದ ಮೊಬೈಲ್ ಮರೆತು ಹೋಗಿದ್ದಾರೆ.ಚಾಲಕ ರಾಜು ರವರು ಸಂಚಾರಿ ಪೊಲೀಸರ ನೆರವಿನಿಂದ ವಾರಸುದಾರ ಶ್ಯಾಂ ರವರಿಗೆ ಮೊಬೈಲ್ ಹಿಂದಿರುಗಿಸಿದ್ದಾರೆ.ಆಟೋ ಚಾಲಕನ ಪ್ರಾಮಾಣಿಕತೆಗೆ ಮೆಚ್ಚಿ ಡಿಸಿಪಿ ಗೀತಾ ಪ್ರಸನ್ನ ರವರು ಪ್ರಶಂಸನಾ ಪತ್ರ ವಿತರಿಸಿದ್ದಾರೆ…
