32 C
Mysore
Wednesday, July 6, 2022
Home All News ಪ್ರತಿಭಟನೆ ನಡೆಸಿದ ವಕೀಲರಿಗೆ ಪ್ರತಾಪ್ ಸಿಂಹ ಪತ್ರದ ಮೂಲಕ ಸ್ಪಷ್ಟನೆ…

ಪ್ರತಿಭಟನೆ ನಡೆಸಿದ ವಕೀಲರಿಗೆ ಪ್ರತಾಪ್ ಸಿಂಹ ಪತ್ರದ ಮೂಲಕ ಸ್ಪಷ್ಟನೆ…

ಮೈಸೂರು,ಜೂ8,Tv10 ಕನ್ನಡ
ಸಿದ್ದರಾಮಯ್ಯ ಟೀಕಿಸುವ ಭರದಲ್ಲಿ ವಕೀಲರಿಗೆ ಪ್ರತಾಪಸಿಂರಿಂದ ಅವಮಾನ ಮಾಡಿದ್ದಾರೆಂಬ ಆರೋಪಕ್ಕೆ ಸಂಸದರು ಪತ್ರದ ಮೂಲಕ ವಕೀಲರಿಗೆ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಹೆಮ್ಮೆಯ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲ ಸಲ್ಲದ ಆರೋಪ ಮಾಡುತ್ತಿರುತ್ತಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಕರ್ನಾಟಕದಿಂದ 19 ಲಕ್ಷ ಕೋಟಿ ಹಣವನ್ನು ತೆರಿಗೆ ರೂಪದಲ್ಲಿ ಲೂಟಿ ಮಾಡಿದೆ.
ಈ ರೀತಿ ತಮ್ಮ ಟ್ವಿಟರ್ ಖಾತೆಯಲ್ಲಿ ಆರೋಪಿಸಿದ್ದರು.
ಇದ್ದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಕೆ.ಜಿ ಗೆ 32 ರೂಪಾಯಿ ಕೊಟ್ಟು ಅಕ್ಕಿಯನ್ನು ಖರೀದಿಸಿ ರಾಜ್ಯ ಸರ್ಕಾರಕ್ಕೆ 3 ರೂಗೆ ನೀಡುತ್ತದೆ.
ಅದರಲ್ಲಿ 2 ರೂ ಕಡಿಮೆ ಮಾಡಿ ನಾನು 1 ರೂ ಕೆ.ಜಿ ಗೆ ಅಕ್ಕಿ ಕೊಟ್ಟೆ ಎಂದು ಸಿದ್ದರಾಮಯ್ಯ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು.
ಆದರೆ ಕೇಂದ್ರ ಸರ್ಕಾರ ಭರಿಸುವ 29 ರೂ ಬಗ್ಗೆ ಎಂದೂ ಮಾತನಾಡಲಿಲ್ಲ.
ಜಗತ್ತಿನಾದ್ಯಂತ ಇರುವ ರಾಜತಾಂತ್ರಿಕ ಕಚೇರಿಗಳು, 15 ಲಕ್ಷ ಸೈನಿಕರು, 50 ಲಕ್ಷ ಕ್ಕಿಂತ ಹೆಚ್ಚು ಕೇಂದ್ರ ಸರ್ಕಾರದ ಉದ್ಯೋಗಿಗಳು ಇವರಿಗೆ ಸಂಬಳ ಎಲ್ಲಿಂದ ಕೊಡಬೇಕು?.
ಪ್ರತಿವರ್ಷ ಖರೀದಿಸುವ ಶಸ್ತ್ರಾಸ್ತ್ರಗಳಿಗೆ ಕೋವೀಡ್ ಸಂದರ್ಭದಲ್ಲಿ ಕೊಟ್ಟ ಉಚಿತ ಲಸಿಕೆಗಳಿಗೆ
ಕಳೆದ ಎರಡು ವರ್ಷಗಳಿಂದ ಪ್ರಧಾನ ಮಂತ್ರಿ ಅನ್ನ ಕಲ್ಯಾಣ ಯೋಜನೆಯಡಿ ನೀಡುತ್ತಿರುವ ಉಚಿತ ಪಡಿತರ ಇವುಗಳಿಗೆ ದುಡ್ಡು ಎಲ್ಲಿಂದ ಬರಬೇಕು.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಒಂದಕ್ಕೆ ವರ್ಷಕ್ಕೆ 50 ರಿಂದ 60 ಸಾವಿರ ಕೋಟಿ ಖರ್ಚಾಗುತ್ತದೆ.
ಹೈವೆ-ರೈಲ್ವೆ, ಸ್ಮಾರ್ಟ್ ಸಿಟಿ, ಅಮೃತ್‌ ಯೋಜನೆಯಿಂದ 15ನೇ ಹಣಕಾಸು ಆಯೋಗದವರೆಗೂ
42 ಕೇಂದ್ರ ಪುರಸ್ಕೃತ ಯೋಜನೆಗಳ ಮೂಲಕ ಲಕ್ಷಾಂತರ ಕೋಟಿ ರೂ ಗಳನ್ನು ಕೇಂದ್ರ ಸರ್ಕಾರ ವಾಪಸ್ಸು ರಾಜ್ಯಗಳಿಗೆ ನೀಡುತ್ತದೆ.
ತಾಲ್ಲೂಕು ಕೋರ್ಟ್ ನಲ್ಲಿ ವಕೀಲಗಿರಿ ಮಾಡುತ್ತಿದ್ದ ಸಿದ್ದರಾಮಯ್ಯ
13 ಬಜೆಟ್ ಮಂಡಿಸಿದ್ದರೂ ಅರ್ಥ ವ್ಯವಸ್ಥೆಯ ಕನಿಷ್ಟ ಜ್ಞಾನವು ಇಲ್ಲದಂತೆ ಮಾತನಾಡುತ್ತಿದ್ದಾರೆ.
ಇದನ್ನು ನಾನು ಟೀಕೆ ಮಾಡಿದ್ದೇನೆ.
ವಕೀಲ ವೃತ್ತಿಯ ಬಗ್ಗೆ ಹಗುರವಾಗಿ ಮಾತನಾಡಿರುವುದಲ್ಲ.
ಆದರೂ ನನ್ನ ವಾದಕ್ಕೆ ಉತ್ತರಿಸಲಾಗದೆ ಕಾಂಗ್ರೆಸ್ಸಿನ ಕೆಲವರು ವಕೀಲರಿಗೆ ಅವಮಾನ ಮಾಡಲಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
ಆದರೆ ನಾನು ವಕೀಲರ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದೇನೆ.
ಮೈಸೂರು ವಕೀಲರ ಸಂಘ ಯಾವುದೇ ಪ್ರಸ್ತಾವವನ್ನು ನನ್ನ ಮುಂದಿಟ್ಟಾಗಲೂ ಸ್ಪಂದಿಸಿದ್ದೇನೆ.
ಕಾಂಗ್ರೆಸ್ಸಿಗರ ಅಪಪ್ರಚಾರಕ್ಕೆ ವಕೀಲ ಬಂಧುಗಳು ಕಿವಿಕೊಡಬಾರದೆಂದು ವಿನಂತಿಸುತ್ತೇನೆ
ಪತ್ರದ ಮೂಲಕ ಸಂಸದ ಪ್ರತಾಪಸಿಂಹ ಸ್ಪಷ್ಟನೆ ನೀಡಿದ್ದಾರೆ..

LEAVE A REPLY

Please enter your comment!
Please enter your name here

- Advertisment -

Most Popular

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ…

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ… ತಿ.ನರಸೀಪುರ,ಜುಲೈ5,Tv10 ಕನ್ನಡಕಳೆದ ಮೂರು ದಿನಗಳಿಂದ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆ ಸೆರೆಯಾಗಿದೆ.ತಾಲ್ಲೂಕಿನ ಮುತ್ತತ್ತಿ ಗ್ರಾಮದ ಬಳಿ ಬೋನಿಗೆ ಸಿಲುಕಿದೆ. ಮುತ್ತತ್ತಿ...

ಎಸಿಬಿ ಬಲೆಗೆ ಎಸ್ಸೈ,ಹೆಚ್.ಸಿ…ಲಂಚ ಪಡೆಯುವ ವೇಳೆ ಟ್ರಾಪ್…

ಎಸಿಬಿ ಬಲೆಗೆ ಎಸ್ಸೈ,ಹೆಚ್.ಸಿ…ಲಂಚ ಪಡೆಯುವ ವೇಳೆ ಟ್ರಾಪ್… ತಲಕಾಡು,ಜುಲೈ5,Tv10 ಕನ್ನಡಎಸಿಬಿ ಬಲೆಗೆ ತಲಕಾಡು ಸಬ್ ಇನ್ಸಪೆಕ್ಟರ್ ಹಾಗೂ ಹೆಡ್ ಕಾನ್ಸಟೇಬಲ್ ಬಿದ್ದಿದ್ದಾರೆ.ತಲಕಾಡು ಪಿಎಸ್ ಐ ಸಿದ್ದಯ್ಯ...

ಮಹಿಳೆ ಸಜೀವ ದಹನ…ಕೊಲೆ ಆರೋಪ…ಸೊಸೆ ಹಾಗೂ ಬೀಗರು ಪೊಲೀಸರ ವಶಕ್ಕೆ…

ಮಹಿಳೆ ಸಜೀವ ದಹನ…ಕೊಲೆ ಆರೋಪ…ಸೊಸೆ ಹಾಗೂ ಬೀಗರು ಪೊಲೀಸರ ವಶಕ್ಕೆ… ನಂಜನಗೂಡು,ಜುಲೈ5,Tv10 ಕನ್ನಡಮೂರು ತಿಂಗಳ ಹಿಂದಷ್ಟೆ ಮಗನನ್ನ ಕಳೆದುಕೊಂಡ ತಾಯಿ ಸಜೀವ ದಹನವಾಗಿದ್ದಾರೆ.ಮೃತಳ ತಾಯಿ ಕೊಲೆ...

ಮೈಸೂರು ಜಿಲ್ಲೆಯ ನಾಗನಹಳ್ಳಿಯಲ್ಲಿನ ಕೃಷಿ ತರಬೇತಿ ಕೇಂದ್ರ ಆವರಣದಲ್ಲಿ ಜಾಗೃತಕೋಶ ಮೈಸೂರು ವಿಭಾಗದ ಕಚೇರಿಯನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ಉದ್ಘಾಟಿಸಿದರು.

ಮೈಸೂರು ಜಿಲ್ಲೆಯ ನಾಗನಹಳ್ಳಿಯಲ್ಲಿನ ಕೃಷಿ ತರಬೇತಿ ಕೇಂದ್ರ ಆವರಣದಲ್ಲಿ ಜಾಗೃತಕೋಶ ಮೈಸೂರು ವಿಭಾಗದ ಕಚೇರಿಯನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು...

Recent Comments