ಮೈಸೂರು,ಜೂ8,Tv10 ಕನ್ನಡ
ಮೈಸೂರಿನ ಶ್ರೀರಾಂಪುರದಲ್ಲಿರುವ ಶಾಲೆಯ ಸಿಸ್ಟರ್ ಒಬ್ಬರಿಗೆ ಜೀವ ಬೆದರಿಕೆ ಇದೆ ಎಂಬ ಸೆಲ್ಪೀ ವಿಡಿಯೋಗೆ ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.ವೈರಲ್ ಮಾಡಿರುವ ಸಿಸ್ಟರ್ ಸಧ್ಯ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ.ಕೆಲವು ದಿನಗಳಿಂದ ಈಕೆ ಇತರ ಸಿಬ್ಬಂದಿಗಳ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದು ಈ ಬಗ್ಗೆ ಅವರ ತಂದೆಯವರಿಗೆ ಮಾಹಿತಿ ನೀಡಲಾಗಿತ್ತು.ತಂದೆ ಜೋಶ ಎಂಬುವರು ಶಾಲೆಗೆ ಬಂದು ಕರೆದೊಯ್ದಿದ್ದಾರೆಂದು ಸ್ಪಷ್ಟನೆ ನೀಡಿದ್ದಾರೆ.ಈಕೆ ಮಾಡಿದ ಆರೋಪಗಳಲ್ಲಿ ಹುರುಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಈ ವಿಚಾರದಲ್ಲಿ ಯಾರೂ ಸಹ ಆತಂಕ ಪಡುವ ಅಗತ್ಯವಿಲ್ಲವೆಂದು ಮನವಿ ಮಾಡಿದ್ದಾರೆ.
MDCCA ತಂಡದ ವತಿಯಿಂದ ನಿನ್ನೆ ಬೆಳಿಗ್ಗೆ 6.30ಕ್ಕೆ ಭೇಟಿ ಕೊಟ್ಟು ಸಂಪೂರ್ಣ ಮಾಹಿತಿ ಕಲೆ ಹಾಕಿರುವುದಾಗಿ ತಿಳಿಸಿದ್ದಾರೆ.
Convent sister ಗಳು ಸಹ ಒಳ್ಳೆಯ ರೀತಿಯಲ್ಲಿ ನಮ್ಮ MDCCA ತಂಡದೊಂದಿಗೆ ಸಹಕರಿಸಿ ನಡೆದಂತ ಎಲ್ಲಾ ವಿಚಾರದ ವಿವರಗಳನ್ನು ನೀಡಿದ್ದಾರೆಂದು ತಿಳಿಸಿದ್ದಾರೆ.
ಈ ಭೇಟಿಯಲ್ಲಿ MDCCA ಅಧ್ಯಕ್ಷರು ಜೆ. ಸ್ಟೀಫನ್ ಸುಜೀತ್, ಉಪಾಧ್ಯಕ್ಷರು ಎಲ್ವಿನ್, ಕಾರ್ಯದರ್ಶಿ ಅಬ್ರೋಸ್ ಜಾರ್ಜ್, ಖಜಾಂಚಿ ಜೋನ್ಸನ್ ಬೆನ್ನ, ಸಮಿತಿ ಸದಸ್ಯರು ಮೈಕಲ್, ಮಾರಿಯಾ ಫ್ರಾನ್ಸಿಸ್, ಸಿಲ್ವೇಸ್ಟರ್ ಜೇಮ್ಸ್ ಉಪಸ್ಥಿತರಿದ್ದರೆಂದು ತಿಳಿಸಿದ್ದಾರೆ…