BEO ಮತ್ತು SUPERIDENT ಎಸಿಬಿ ಬಲೆಗೆ…ಲಂಚ ಸ್ವೀಕರಿಸುತ್ತಿದ್ದಾಗ ದಾಳಿ…
ಹೆಚ್.ಡಿ.ಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತ್ ಹಾಗೂ ಅಧೀಕ್ಷಕ ಶಂಕರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.ಹೆಚ್.ಡಿ.ಕೋಟೆಯ ತಮ್ಮ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಶಿಕ್ಷಕರೊಬ್ಬರ ನಿವೃತ್ತ ವೇತನಕ್ಕೆ ಸಂಭಂಧಿಸಿದ ದಾಖಲೆಗಳನ್ನ ಮಹಾಲೆಕ್ಕಾಧಿಕಾರಿಗಳ ಕಚೇರಿಗೆ ತಲುಪಿಸಲು ಲಂಚದ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು ಎಸಿಬಿ ಟ್ರಾಪ್ ಗೆ ಸಿಲುಕಿದ್ದಾರೆ.ದಾಖಲೆಗಳನ್ನ ರವಾನಿಸಲು ನಂಜನಗೂಡಿನ ರಾಂಪುರ ಗ್ರಾಮದ ನಿವೃತ್ತ ಶಿಕ್ಷಕರ ಬಳಿ 9 ಸಾವಿರ ಬೇಡಿಕೆ ಇಟ್ಟಿದ್ದರು.ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ನಿವೃತ್ತ ಶಿಕ್ಷಕರು ಎಸಿಬಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.ದೂರಿನ ಅನ್ವಯ ಎಸಿಬಿ ದಕ್ಷಿಣ ವಲಯ ಅಧೀಕ್ಷಕರಾದ ಸಜೀತ್ ರವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ತಮ್ಮಯ್ಯ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಮೈಸೂರಿನ ಎಸಿಬಿ ಅಧಿಕಾರಿಗಳು ಬಿಇಓ ಚಂದ್ರಕಾಂತ್ ಹಾಗೂ ಅಧೀಕ್ಷಕ ಶಂಕರ್ ರನ್ನ ಟ್ರಾಪ್ ಮಾಡಿದ್ದಾರೆ.5 ಸಾವಿರ ಲಂಚ ಸ್ವೀಕರಿಸುತ್ತಿದ್ದ ಚಂದ್ರಕಾಂತ್ ಹಾಗೂ 2 ಸಾವಿರ ಲಂಚ ಸ್ವೀಕರಿಸುತ್ತಿದ್ದ ಶಂಕರ್ ಇಬ್ಬರೂ ಸಹ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.ಆರೋಪಿಗಳನ್ನ ದಸ್ತಗಿರಿ ಮಾಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ…