TV10 Kannada Exclusive

ಶ್ರೀರಾಮ ಗೆಳೆಯರ ಬಳಗದಿಂದ ಪುನೀತ್ ರಾಜ್ ಕುಮಾರ್ ಜನ್ಮದಿನೋತ್ಸವ ಆಚರಣೆ…ಮಜ್ಜಿಗೆ,ಸಿಹಿ ವಿತರಣೆ…

ಮೈಸೂರು,ಮಾ17,Tv10 ಕನ್ನಡ ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಪವರ್ ಸ್ಟಾರ್ ಯುವರತ್ನ ಪುನೀತ್ ರಾಜಕುಮಾರ್ ರವರ ಜನ್ಮದಿನೋತ್ಸವದ ನೆನಪಿಗಾಗಿ ‘ಶ್ರೀರಾಮ ಗೆಳಯರ ಬಳಗದ’ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ಮತ್ತು ಸಿಹಿ ಕೊಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪುನೀತ್ ರಾಜಕುಮಾರ್ ರವರು ಮಾಡಿರುವ ಸೇವಾ ಕಾರ್ಯವು ಪ್ರತಿಯೊಬ್ಬರಿಗೂ ಪ್ರೇರಣೆಯಾಗಿರಲಿ ಎಂದು ಸ್ಮರಿಸಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀರಾಮ ಗೆಳಯರ ಬಳಗದ ಅಧ್ಯಕ್ಷರಾದ ಸಿ ಸಂದೀಪ್, ಅಂಬಳೆ ಶಿವಣ್ಣ, ಉಮಾಶಂಕರ್, ಧರ್ಮೇಂದ್ರ, ಬಸವರಾಜು,
Read More

ಕಳೆದುಹೋಗಿದ್ದ ಮೊಬೈಲ್ ವಾರಸುದಾರರಿಗೆ…ಮಾಲೀಕರನ್ನ ತಲುಪಿದ 37 ಮೊಬೈಲ್…

ಮೈಸೂರು,ಮಾ17,Tv10 ಕನ್ನಡ ಕಳೆದುಹೋಗಿದ್ದ 37 ಮೊಬೈಲ್ ಫೋನ್ ಗಳನ್ನು ದೇವರಾಜ ಠಾಣೆ ಪೊಲೀಸರು ಇಂದು ವಾರಸುದಾರರಿಗೆ ಮರಳಿಸಿದರು. ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಘು.ಕೆ.ಆರ್. ಉಪ ನಿರೀಕ್ಷಕರಾದ ಜಯಕೀರ್ತಿ,ಪ್ರಭು, ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಂಜುನಾಥ್, ಸುನೀಲ್, ಮಧುಕೇಶ್ ಮಹೇಶ್, ಶಶಿಕಿರಣ್ ರವರಿ CEIR Portal ಮೂಲಕ ಮೊಬೈಲ್ ಪೋನ್ಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ತಲುಪಿಸುವ ಕಾರ್ಯದಲ್ಲಿ ಭಾಗವಹಿಸಿದ್ದರು…
Read More

ಸಿಟಿ ಲೈಟ್ಸ್ ತಂಡದಿಂದ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬ ಆಚರಣೆ…

ಬೆಂಗಳೂರು,ಮಾ17,Tv10 ಕನ್ನಡ ಬೆಂಗಳೂರಿನ ಗುಬ್ಬಿ ವೀರಣ್ಣ ಕಲಾ ಮಂಟಪದಲ್ಲಿ ಸಿಟಿ ಲೈಟ್ಸ್ ಚಿತ್ರೀಕರಣ ನಡೆಯುವ ಸಂಧರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರವರ ಹುಟ್ಟು ಹಬ್ಬವನ್ನ ಆಚರಿಸಲಾಯಿತು. ಕೇಕ್ ಕಟ್ ಮಾಡುವ ಮೂಲಕ ತಂಡ ಸಂಭ್ರಮಿಸಿತು.ನಿರ್ದೇಶಕರು ಹಾಗೂ ನಟರಾದ ದುನಿಯಾ ವಿಜಿ ಹಾಗೂ ಅವರ ಪುತ್ರಿ ಮೋನಿಷಾ ರವರು ಹಾಗೂ ಚಿತ್ರತಂಡ ಸಾಥ್ ನೀಡಿತು…
Read More

ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ಯವರಿಂದ ಪಾದಯಾತ್ರೆ…ಉತ್ತಮ ಆರೋಗ್ಯಕ್ಕಾಗಿ ನಡಿಗೆ…

ಮೈಸೂರು,ಮಾ17,Tv10 ಕನ್ನಡ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಿಂದ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಗೆ ಇಂದು ಕಿರಿಯ ಸ್ವಾಮೀಜಿಗಳಾ ಶ್ರೀ ದತ್ತವಿಜಯಾನಂದ ಸ್ವಾಮೀಜಿಯವರು ಪಾದಯಾತ್ರೆ ಕೈಗೊಂಡರು.ವಿಶ್ವ ಶಾಂತಿ ಹಾಗೂ ನಮ್ಮ ನಡಿಗೆ ಆರೋಗ್ಯವಂತ ವಿಶ್ವದೆಡೆಗೆ ಎಂಬ ಘೋಷವಾಖ್ಯದಡಿಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಿಂದನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಗೆ ಇಂದು ಪಾದಯಾತ್ರೆ ಹಮ್ಮಿಕೊಂಡರು.ಇಂದು ಬೆಳಿಗ್ಗೆ 5.30ಕ್ಕೆ‌ ದತ್ತಪೀಠಾಧಿಪತಿ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕಿರಿಯ ಶ್ರೀಗಳಾದ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ
Read More

ದರ್ಮಾಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 75.44 ಲಕ್ಷ ಉಂಡೆನಾಮ…ಮಾಜಿ ಸಿಇಓ ನಾರಾಯಣ ನಾಯ್ಕ ವಿರುದ್ದ FIR…

ಹುಣಸೂರು,ಮಾ16,Tv10 ಕನ್ನಡ ಹುಣಸೂರು ತಸಲೂಕು ಧರ್ಮಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 75.44 ಲಕ್ಷ ಹಣ ದುರುಪಯೋಗವಾಗಿರುವುದು ಬೆಳಕಿಗೆ ಬಂದಿದೆ.ಮಾಜಿ ಕಾರ್ಯನಿರ್ವಹಣಾಧಿಕಾರಿ ನಾರಾಯಣ ನಾಯ್ಕ ವಿರುದ್ದ ಹಾಲಿ ಸಿಇಓ ಬೀರಪ್ಪ ರವರು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. 2022-23 ರ ಅವಧಿಯಲ್ಲಿ ಹಣ ದುರುಪಯೋಗವಾಗಿರುವುದು ಲೆಕ್ಕಪರಿಶೋಧನಾ ವೇಳೆ ತಿಳಿದುಬಂದಿದೆ.30-06-2023 ರಂದು ನಾರಾಯಣ ನಾಯ್ಕ ರವರು ನಿವೃತ್ತಿ ಹೊಂದಿದ್ದಾರೆ.ಸೂಕ್ತ ಲೆಕ್ಕಗಳನ್ನ ಪಾಲಿಸದೆ ಸಂಘಕ್ಕೆ 75,44,833/- ರೂಗಳನ್ನ ದುರುಪಯೋಗ
Read More

ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರಿಂದ ಪಾದಯಾತ್ರೆ…ಗಣಪತಿ ಸಚ್ಚಿದಾನಂದ ಆಶ್ರಮದಿಂದ… ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಗೆ…ವಿಶ್ವಶಾಂತಿಗಾಗಿ ನಡಿಗೆ ಮೂಲಕ ಜಾಗೃತಿ…

ಮೈಸೂರು,ಮಾ16,Tv10 ಕನ್ನಡ ವಿಶ್ವ ಶಾಂತಿ ಹಾಗೂ ನಮ್ಮ ನಡಿಗೆ ಆರೋಗ್ಯವಂತ ವಿಶ್ವದೆಡೆಗೆ ಎಂಬ ಘೋಷವಾಖ್ಯದಡಿಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಿಂದನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಗೆ ನಾಳೆ(ಮಾ.17) ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ‌.ಬೆಳಿಗ್ಗೆ 5.30ಕ್ಕೆ‌ದತ್ತಪೀಠಾಧಿಪತಿ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕಿರಿಯ ಶ್ರೀಗಳಾದ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಗೆ ಈ ಪಾದಯಾತ್ರೆ ಸಾಗಲಿದೆ.ಮನುಷ್ಯನ ಉತ್ತಮ ಆರೋಗ್ಯಕ್ಕೆ ಕಾಲ್ನಡಿಗೆ ಅತ್ಯುತ್ತಮ ವ್ಯಾಯಾಮ ಎಂಬ ಕುರಿತು ಜನ ಜಾಗೃತಿ ಮೂಡಿಸುವ
Read More

ನಡುರಸ್ತೆಯಲ್ಲಿ ಪತ್ನಿಯನ್ನ ಅರೆನಗ್ನಗೊಳಿಸಿ ಹಲ್ಲೆ…ಪತಿ,ಮಾವ ಸೇರಿದಂತೆ ಮೂವರ ವಿರುದ್ದ FIR…

ಮೈಸೂರು,ಮಾ16,Tv10 ಕನ್ನಡ ಪೊಲೀಸ್ ಠಾಣೆ ಹಾಗೂ ಕೌಟುಂಬಿಕ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನ ಹಿಂದಕ್ಕೆ ಪಡೆಯದ ಪತ್ನಿಯನ್ನ ಬಲವಂತವಾಗಿ ಕೂಡಿ ಹಾಕಿ,ನಡುರಸ್ತೆಯಲ್ಲಿ ಅರೆನಗ್ನಗೊಳಿಸಿ ಹಲ್ಲೆ ನಡೆಸಿ ಕಿರುಕುಳ ನೀಡಿದ ಪತಿ ಹಾಗೂ ಮಾವ ಮತ್ತು ಪತಿಯ ಅಣ್ಣನ ವಿರುದ್ದ ಪತ್ನಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪಲ್ಲವಿ (24) ಎಂಬುವರೇ ಕಿರುಕುಳಕ್ಕೆ ಒಳಗಾದ ಗೃಹಿಣಿ.ಪತಿ ಮಹೇಶ್,ಮಾವ ಮಲ್ಲಯ್ಯ ಹಾಗೂ ಪತಿ ಅಣ್ಣ ಶಿವು ವಿರುದ್ದ FIR ದಾಖಲಾಗಿದೆ. ಮಹೇಶ್ ವಿರುದ್ದ ಪಲ್ಲವಿ ಪೊಲೀಸ್
Read More

ಯುವಕ ಅನುಮಾನಾಸ್ಪದ ಸಾವು…ಉತ್ತಮ ಕ್ರಿಕೆಟ್ ಪ್ರದರ್ಶನ ನೀಡಿದ್ದೇ ಸಾವಿಗೆ ಕಾರಣವಾಯ್ತೇ…?

ಹೆಚ್.ಡಿ.ಕೋಟೆ,ಮಾ15,Tv10 ಕನ್ನಡ ಸೋಲುವ ಮ್ಯಾಚನ್ನ ಸಿಕ್ಸರ್ ಹೊಡೆದು ಗೆಲ್ಲಿಸಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆಹೆಚ್.ಡಿ.ಕೋಟೆ ತಾಲೂಕಿನ‌ ವಡ್ಡರಗುಡಿ ಗ್ರಾಮದಲ್ಲಿ ನಡೆದಿದೆ.ದಿವ್ಯಾ ಕುಮಾರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಟೆನ್ನಿಸ್ ಬಾಲ್ ಕ್ರಿಕೆಟರ್.ಕಳೆದ ತಿಂಗಳ 24 ರಂದು ಬೀಚನಹಳ್ಳಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆದಿತ್ತು.ನೇರಳೆ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ಆಯೋಜನೆ ಮಾಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿಜೆಪಿ ವಾರಿಯರ್ಸ್ ತಂಡದ ಪರ ದಿವ್ಯಾ ಕುಮಾರ್ ಪ್ರತಿನಿಧಿಸಿದ್ದ.ಡೆವಿಲ್ಸ್ ಸೂಪರ್ ಕಿಂಗ್ ತಂಡದ ವಿರುದ್ಧ ಪೈನಲ್ ಪಂದ್ಯಾವಳಿಯಲ್ಲಿ ಉತ್ತಮ‌ ಪ್ರದರ್ಶನ ನೀಡಿದ್ದ.4
Read More

ನೀರಿನಲ್ಲಿ ಮುಳುಗಿ ತಾತ ಮೊಮ್ಮೊಕ್ಕಳು ಸಾವು…

ಟಿ.ನರಸೀಪುರ,ಮಾ15,Tv10 ಕನ್ನಡ ನೀರಿನಲ್ಲಿ ಮುಳುಗಿ ತಾತ ಮೊಮ್ಮಕ್ಕಳು ಜಲ ಸಮಾಧಿಯಾದ ದುರ್ಘಟನೆಟಿ.ನರಸೀಪುರ ಪಟ್ಟಣದಲ್ಲಿ ನಡೆದಿದೆ.ತಿ. ನರಸೀಪುರ ಪಟ್ಟಣದ ನಿವಾಸಿಗಳಾ ಚೌಡಯ್ಯ (70), ಭರತ್ (13) ಧನುಷ್ (10) ಮೃತ ದುರ್ದೈವಿಗಳು.ಪಟ್ಟಣದ ಕಾವೇರಿ ನದಿ ಬಳಿಗೆ ತೆರಳಿದ್ದ ಇಬ್ಬರು ಮೊಮ್ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ.ನೀರಿನಲ್ಲಿ ಮುಳುಗಿದ ಮೊಮ್ಮಕ್ಕಳನ್ನು ರಕ್ಷಣೆಗೆ ಮುಂದಾದ ತಾತ ಚೌಡಯ್ಯ ರಕ್ಷಿಸಲಾಗದೆ ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ಟಿ.ನರಸೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಟಿ. ನರಸೀಪುರ ಸಾರ್ವಜನಿಕ
Read More

ಸರಗಳ್ಳನ ಕೈ ಚಳಕ…ಮಹಿಳೆಯ ಮಾಂಗಲ್ಯ ಸರ ಮಾಯ…ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಘಟನೆ…

ಮೈಸೂರು,ಮಾ15,Tv10 ಕನ್ನಡ ಬಸ್ ಹತ್ತುತ್ತಿದ್ದ ಮಹಿಳೆಯ ಚಿನ್ನದ ಸರ ಕಳ್ಳನ ಪಾಲಾದ ಘಟನೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ನಡೆದಿದೆ.ಶ್ರೀರಂಗಪಟ್ಟಣ ದಗಿರಿಕೊಪ್ಪಲಿನ ನಿವಾಸಿ ದೇವಮ್ಮ ಎಂಬುವರು ಚಿನ್ನದ ಸರ ಕಳೆದುಕೊಂಡವರು.ನಂಜನಗೂಡಿಗೆ ತೆರಳುವ ವೇಳೆ ರಶ್ ಇದ್ದ ಬಸ್ ಏರುವ ವೇಳೆ ಕಳ್ಳ ಕೈಚಳಕ ತೋರಿಸಿದ್ದಾನೆ.1.10 ಲಕ್ಷ ಮೌಲ್ಯದ 37 ಗ್ರಾಂ ತೂಕದ ಚಿನ್ನದ ಸರ ಕಳೆದುಕೊಂಡಿದ್ದಾರೆ.ಈ ಸಂಭಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…
Read More