ಡೂಪ್ಲಿನ್ ಕಾಂಪ್ಲೆಕ್ಸ್ ಗೆ ಹೈ ಕೋರ್ಟ್ ಶಾಕ್…ಎಂಡಿಎ ತೆಕ್ಕೆಗೆ ಸೇರಲಿರುವ ವಾಣಿಜ್ಯ ಸಂಕೀರ್ಣ…ಸುಮಾರು 250 ಕೋಟಿ ಮೌಲ್ಯದ ಆಸ್ತಿ…ಅಲರ್ಟ್ ಆಗ್ತಾರ ಆಯುಕ್ತ ರಕ್ಷಿತ್…

ಡೂಪ್ಲಿನ್ ಕಾಂಪ್ಲೆಕ್ಸ್ ಗೆ ಹೈ ಕೋರ್ಟ್ ಶಾಕ್…ಎಂಡಿಎ ತೆಕ್ಕೆಗೆ ಸೇರಲಿರುವ ವಾಣಿಜ್ಯ ಸಂಕೀರ್ಣ…ಸುಮಾರು 250 ಕೋಟಿ ಮೌಲ್ಯದ ಆಸ್ತಿ…ಅಲರ್ಟ್ ಆಗ್ತಾರ ಆಯುಕ್ತ ರಕ್ಷಿತ್…

ಡೂಪ್ಲಿನ್ ಕಾಂಪ್ಲೆಕ್ಸ್ ಗೆ ಹೈ ಕೋರ್ಟ್ ಶಾಕ್…ಎಂಡಿಎ ತೆಕ್ಕೆಗೆ ಸೇರಲಿರುವ ವಾಣಿಜ್ಯ ಸಂಕೀರ್ಣ…ಸುಮಾರು 250 ಕೋಟಿ ಮೌಲ್ಯದ ಆಸ್ತಿ…ಅಲರ್ಟ್ ಆಗ್ತಾರ ಆಯುಕ್ತ ರಕ್ಷಿತ್…

ಮೈಸೂರು,ಫೆ17,Tv10 ಕನ್ನಡ

ಮೈಸೂರಿನ ಹೃದಯಭಾಗದಲ್ಲಿರುವ ಡೂಪ್ಲಿನ್ ಕಾಂಪ್ಲೆಕ್ಸ್ ನ ವರ್ತಕರಿಗೆ ಹೈಕೋರ್ಟ್ ಬಿಸಿ ಮುಟ್ಟಿಸಿದೆ.ಅನಧಿಕೃತವಾಗಿ ಸ್ವಾಧೀನದಲ್ಲಿರುವ ವರ್ತಕರನ್ನ ಖಾಲಿ ಮಾಡಿಸಿ ಆಸ್ತಿಯನ್ನ ತಮ್ಮ ವಶಕ್ಕೆ ಪಡೆಯುವಂತೆ ಹೈಕೋರ್ಟ್ ತೀರ್ಪು ನೀಡಿದೆ.ಮೂರು ತಿಂಗಳ ಹಿಂದೆ ಆದೇಶವಾಗಿದ್ದರೂ ಪ್ರಾಧಿಕಾರದ ಆಯುಕ್ತ ರಕ್ಷಿತ್ ರವರು ಕ್ರಮ ಕೈಗೊಳ್ಳುವ ಯಾವುದೇ ಆಸಕ್ತಿ ತೋರುತ್ತಿಲ್ಲದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಮೈಸೂರಿನ ಡಿ ದೇವರಾಜ ಅರಸ್ ರಸ್ತೆ ಹಾಗೂ ಶಿವರಾಂಪೇಟೆಯ ವಿನೋಬಾ ರಸ್ತೆ ಮತ್ತು ದೇವರಾಜ ಮಾರುಕಟ್ಟೆಯ ಚಿಕ್ಕಗಡಿಯಾರ ಮುಂಭಾಗವಿರುವ ಡೂಪ್ಲಿನ್ ಕಾಂಪ್ಲೆಕ್ಸ್ ಅಂದಿನ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ನಿರ್ಮಿಸಿದೆ.ಸುಮಾರು 40 ಕ್ಕೂ ಹೆಚ್ಚು ಮಳಿಗೆಗಳಿರುವ ವಾಣಿಜ್ಯ ಸಂಕೀರ್ಣ ಇದಾಗಿದೆ.ಬಹುತೇಕ ಎಲ್ಲಾ ಮಳಿಗೆಗಳಲ್ಲಿ ಸಧ್ಯ ವರ್ತಕರು ಸ್ವಾಧೀನದಲ್ಲಿದ್ದಾರೆ.ಬಾಡಿಗೆ ಹಾಗೂ ಮಾಲೀಕತ್ವದ ವಿಚಾರದಲ್ಲಿ ವರ್ತಕರು ಹಾಗೂ ಅಂದಿನ ಮುಡಾ ನಡುವೆ ಕಾನೂನು ಹೋರಾಟ ನಡೆಯುತ್ತಿದೆ.ವರ್ತಕರನ್ನ ಖಾಲಿ ಮಾಡಿಸುವ ಉದ್ದೇಶದಿಂದ ಪ್ರಾಧಿಕಾರ ನ್ಯಾಯಾಲಯದ ಮೊರೆ ಹೋಗಿ ಹಲವು ವರ್ಷಗಳೇ ಉರುಳಿದೆ.ತಾವೇ ಮಾಲೀಕರೆಂಬಂತೆ ವರ್ತಿಸಿದ ವರ್ತಕರು ಮುಡಾ ನಿರ್ಧಾರಕ್ಕೆ ಸಡ್ಡು ಹೊಡೆದು ಕಾನೂನು ಹೋರಾಟ ನಡೆಸುತ್ತಿದ್ದು ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.ಎರಡೂ ಬದಿಯಿಂದ ವಾದ ವಿವಾದಗಳನ್ನ ಆಲಿಸಿದ ನ್ಯಾಯಾಲಯ ಸಧ್ಯ ಮೈಸೂರು ಅಭಿವೃದ್ದಿ ಪ್ರಾಧಿಕಾರದ ಪರ ಬ್ಯಾಟ್ ಬೀಸಿದೆ.ಅನಧಿಕೃತವಾಗಿ ಸ್ವಾಧೀನದಲ್ಲಿರುವ ವರ್ತಕರನ್ನವಮೂರು ತಿಂಗಳ ಒಳಗಾಗಿ ತೆರುವುಗೊಳಿಸಿ ತಮ್ಮ ಸುಪರ್ಧಿಗೆ ಪಡೆಯುವಂತೆ ತೀರ್ಪು ನೀಡಿದೆ.ಫೆ.20 ಕ್ಕೆ ಮೂರು ತಿಂಗಳ ಗಡುವು ಪೂರ್ಣಗೊಳ್ಳಲಿದೆ.ಸುಮಾರು 250 ಕೋಟಿ ಮೌಲ್ಯದ ಆಸ್ತಿ ಎಂಡಿಎ ವಶಕ್ಕೆ ಪಡೆಯಬೇಕಿದೆ.ಆದ್ರೆ ಮೂರು ತಿಂಗಳು ಉರುಳಿದ್ರೂ ಪ್ರಾಧಿಕಾರ ತನ್ನ ವಶಕ್ಕೆ ಪಡೆಯುವ ಯಾವುದೇ ಆಸಕ್ತಿ ತೋರುತ್ತಿಲ್ಲ.ಹಲವಾರು ವರ್ಷಗಳ ಹೋರಾಟಕ್ಕೆ ಜಯ ದೊರೆತರೂ ಆಯುಕ್ತ ರಕ್ಷಿತ್ ರವರು ತಮ್ಮ ವಶಕ್ಕೆ ಪಡೆಯಲು ಮೀನಾಮೇಷ ಎಣಿಸುತ್ತಿರುವ ಮರ್ಮವಾದ್ರೂ ಏನು ಎಂಬ ಅನುಮಾನ ಮೂಡುತ್ತಿದೆ.ಎಂಡಿಎ ಪರ ವಾದ ಮಂಡಿಸಿದ ಹೈಕೋರ್ಟ್ ವಕೀಲರಾದ ಟಿ.ಪಿ.ವಿವೇಕಾನಂದ ರವರು ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದು ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.ಇನ್ನಾದ್ರೂ ಕೂಡಲೇ ಕೋಟ್ಯಾಂತರ ಬೆಲೆ ಬಾಳುವ ಆಸ್ತಿಯನ್ನ ಉಳಿಸಿಕೊಳ್ಳುವರೇ ರಕ್ಷಿತ್ ರವರು ಕಾದುನೋಡಬೇಕಿದೆ…

Spread the love

Related post

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ… ಮೈಸೂರು,ಅ12,Tv10 ಕನ್ನಡ ಮಹಿಳೆಯನ್ನ ಲಾಡ್ಜ್ ನಲ್ಲಿ ಭೀಕರವಾಗಿ ಕೊಂ* ಘಟನೆ ಮೈಸೂರಿ ನಲ್ಲಿ ನಡೆದಿದೆ.ಕೃತ್ಯವೆಸಗಿದ ನಂತರ ಪರಾರಿಯಾಗಿದ್ದ ಪ್ರಿಯತಮನನ್ನ 24…
ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ… ಮೈಸೂರು,ಅ4,Tv10 ಕನ್ನಡ ಮೈಸೂರಿನ ಗೋಕುಲಂನಲ್ಲಿ ಜನರ ತಂಡ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ…
ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ… ಮೈಸೂರು,ಸೆ30,Tv10 ಕನ್ನಡ ಹಣಕ್ಕಾಗಿ ಮಗನನ್ನೇ ಅಪಹರಿಸಿದ ತಂದೆ ಪತ್ನಿಗೆ 55 ಲಕ್ಷಕ್ಕೆ ಬೇಡಿಕೆ ಇಟ್ಟು…

Leave a Reply

Your email address will not be published. Required fields are marked *