ACB ಬಲೆಗೆ DHO ಕಚೇರಿ FDA…3 ಸಾವಿರ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಪ್ರಥಮ ದರ್ಜೆ ಸಹಾಯಕ…
- CrimeTV10 Kannada Exclusive
- July 26, 2022
- No Comment
- 707
ಚಾಮರಾಜನಗರ,ಜುಲೈ26,Tv10 ಕನ್ನಡ
ಚಾಮರಾಜ ನಗರ ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯ ಪ್ರಥಮ ದರ್ಜೆಯ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾರೆ.ವ್ಯಕ್ತಿಯೊಬ್ಬರ ಕೆಲಸ ಮಾಡಿಕೊಡಲು 3 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.FDA ಮಹೇಶ ಎಸಿಬಿ ಬಲೆಗೆ ಬಿದ್ದ ಸಿಬ್ಬಂದಿ.ವ್ಯಕ್ತಿಯೊಬ್ಬರ ಕೆಲಸದ ಬಗ್ಗೆ ಆದೇಶ ಮಾಡಲು ಹಾಗೂ ಅವರ ಮೂರು ತಿಂಗಳ ಸಂಬಳ ಕೊಡಲು 3 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು.ಇದರಿಂದ ಬೇಸತ್ತ ವ್ಯಕ್ತಿ ಚಾಮರಾಜನಗರ ಎಸಿಬಿ ಪೊಲೀಸರ ಮೊರೆ ಹೋಗಿದ್ದರು.ಎಸ್ಪಿ ವಿ.ಜೆ.ಸಜಿತ್ ರವರ ಮಾರ್ಗದರ್ಶನದಲ್ಲಿ ಚಾಮರಾಜನಗರ ಡಿವೈಎಸ್ಪಿ ಸದಾನಂದ ತಿಪ್ಪಣ್ಣ ಹಾಗೂ ತಂಡ ಟ್ರಾಪ್ ಮಾಡಿ ಎಫ್.ಡಿ.ಎ.ಮಹೇಶ್ ರನ್ನ ಬಲೆಗೆ ಸಿಲುಕಿಸಿದೆ.ತಮ್ಮ ಕಚೇರಿಯಲ್ಲೇ 3 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಸದಾನಂದ ತಿಪ್ಪಣ್ಣ ರವರ ತಂಡ ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಲಂಚದ ಹಣದ ಸಮೇತ ಆರೋಪಿ ಮಹೇಶ್ ರನ್ನ ದಸ್ತಗಿರಿ ಮಾಡಲಾಗಿದೆ…