ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ…

ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ…

ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ…

ನಂಜನಗೂಡು,ಮಾ8,Tv10 ಕನ್ನಡ

ನಂಜನಗೂಡು ಕಪಿಲಾ ನದಿ ಪಾತ್ರದ ಭಾರಿ ಮರಗಳ ಮಾರಣಹೋಮವಾಗಿದೆ.ಶ್ರೀಕಂಠೇಶ್ವರನ ದೇವಾಲಯ ಸಮೀಪ ಹದಿನಾರುಕಾಲು ಮಂಟಪದ ಬಳಿ ಬೆಳೆದಿದ್ದ ಬೃಹತ್ ಗಾತ್ರದ ಮರಗಳು ದುಷ್ಕರ್ಮಿಗಳ ಸಂಚಿಗೆ ಬಲಿಯಾಗಿದೆ.ಹಾಡುಹಗಲೇ ರಾಜಾರೋಷವಾಗಿ ಅನುಮತಿ ಇಲ್ಲದೆ ಮರಗಳನ್ನ ಕಡಿದು ಧರೆಗೆ ಉರುಳಿಸಲಾಗಿದೆ.ಅರಣ್ಯ ಇಲಾಖೆ ಸಿಬ್ಬಂದಿಗಳು ಧಾವಿಸುತ್ತಿದ್ದಂತೆಯೇ ಖದೀಮರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಸುಮಾರು ಹತ್ತಕ್ಕೂ ಹೆಚ್ಚು ಮರಗಳ ಹನನವಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸಂಬಂಧಿಕ ಹೆಜ್ಜಿಗೆ ರಾಮಯ್ಯ ಕುಟುಂಬದವರು ಮರಗಳನ್ನ ಕಟ್ ಮಾಡಿದ್ದಾರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.ಹೆಜ್ಜಿಗೆ ರಾಮಯ್ಯ ಮಗ ಕೃಷ್ಟ ಸಧ್ಯ ಶ್ರೀಕಂಠೇಶ್ವರ ದೇವಾಲಯ ಆಡಳಿತ ಮಂಡಳಿಯ ಧರ್ಮದರ್ಶಿ.ಈತನ ಕೃಪಾಕಟಾಕ್ಷದಿಂದ ಮರಗಳ ಮಾರಣಹೋಮ ನಡೆದಿದೆ ಎನ್ನಲಾಗಿದೆ.ಬೃಹತ್ ಮರಗಳು ಧರೆಗೆ ಉರುಳಿಸಿದ್ದರೂ ತಹಸೀಲ್ದಾರ್ ಸ್ಥಳಕ್ಕೆ ಬಂದಿಲ್ಲ.ಜೊತೆಗೆ ಇದುವರೆಗೆ ಯಾವುದೇ ದೂರು ಸಹ ದಾಖಲಾಗದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.ಕೂಡಲೇ ತಾಲೂಕು ಆಡಳಿತ ಎಚ್ಚೆತ್ತು ಮರಗಳಿಗೆ ಕೊಡಲಿ ಹಾಕಿದ ದುಷ್ಕರ್ಮಿಗಳ ಹೆಡೆಮುರಿ ಕಟ್ಟಬೇಕಿದೆ.ಇಲ್ಲದಿದ್ದಲ್ಲಿ ಕಿಡಿಗೇಡಿಗಳ ಸಂಚಿಗೆ ಮತ್ತಷ್ಟು ಮರಗಳು ಬಲಿಯಾಗಲಿವೆ…

Spread the love

Related post

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…
ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ… ಚಾಮರಾಜನಗರ,ಜು28,Tv10 ಕನ್ನಡ ಕಾಡುಹಂದಿ ಬೇಟೆ ಮಾಡಿದ ಆರೋಪದ ಹಿನ್ನಲೆ ಓರ್ವ ಆರೋಪಿಯನ್ನ ಬಂಧಿಸಲಾಗಿದೆ.ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ ಘಟನೆ ನಡೆದಿದೆ.ಕೊಡಗು ಜಿಲ್ಲೆ…

Leave a Reply

Your email address will not be published. Required fields are marked *