ಡ್ರಗ್ಸ್ ಮುಕ್ತ ಮೈಸೂರು…ವಿಮುಕ್ತಿ ಯೋಜನೆಗೆ ಚಾಲನೆ…ವಾಟ್ಸಾಪ್ ನಂ.ಬಿಡುಗಡೆ… ಮೇಟಗಳ್ಳಿ ಠಾಣೆಯಿಂದ ಜಾಗೃತಿ…ಶಾಲಾ ಕಾಲೇಜುಗಳಲ್ಲಿ ಅರಿವು…

ಡ್ರಗ್ಸ್ ಮುಕ್ತ ಮೈಸೂರು…ವಿಮುಕ್ತಿ ಯೋಜನೆಗೆ ಚಾಲನೆ…ವಾಟ್ಸಾಪ್ ನಂ.ಬಿಡುಗಡೆ… ಮೇಟಗಳ್ಳಿ ಠಾಣೆಯಿಂದ ಜಾಗೃತಿ…ಶಾಲಾ ಕಾಲೇಜುಗಳಲ್ಲಿ ಅರಿವು…

ಡ್ರಗ್ಸ್ ಮುಕ್ತ ಮೈಸೂರು…ವಿಮುಕ್ತಿ ಯೋಜನೆಗೆ ಚಾಲನೆ…ವಾಟ್ಸಾಪ್ ನಂ.ಬಿಡುಗಡೆ… ಮೇಟಗಳ್ಳಿ ಠಾಣೆಯಿಂದ ಜಾಗೃತಿ…ಶಾಲಾ ಕಾಲೇಜುಗಳಲ್ಲಿ ಅರಿವು…

ಮೈಸೂರು,ಫೆ10,Tv10 ಕನ್ನಡ

ಡ್ರಗ್ಸ್ ಮಾಫಿಯಾ ವಿರುದ್ದ ಮೈಸೂರು ಖಾಕಿ ಪಡೆ ಸಮರ ಸಾರಿದೆ.ಒಂದೆಡೆ ಶಂಕಿತ ಪ್ರದೇಶಗಳಲ್ಲಿ ದಾಳಿ ನಡೆಸುತ್ತಿದೆ.ಠಾಣೆಗಳಲ್ಲಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ಕಿರುಕುಳ ನೀಡುವ ವ್ಯಸನಿಗಳ ವಿರುದ್ದ ಪ್ರಕರಣ ದಾಖಲಿಸಲಾಗುತ್ತಿದೆ.ಮತ್ತೊಂದೆಡೆ ಯುವ ಜನತೆಗೆ ಡ್ರಗ್ಸ್ ನಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದೆ.ವಿಶೇಷವಾಗಿ ಯುವ ಜನತೆಯನ್ನ ಕೇಂದ್ರವನ್ನಾಗಿಟ್ಟುಕೊಂಡು ಜಾಗೃತಿ ಮೂಡಿಸಲಾಗುತ್ತಿದೆ.ಡ್ರಗ್ಸ್ ಹಾವಳಿ ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ನೂತನ ಯೋಜನೆ ಜಾರಿಯಾಗಿದೆ.ವಿಮುಕ್ತಿ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಜಾರಿಗೊಳಿಸಿ ವಾಟ್ಸಾಪ್ ನಂ.ಬಿಡುಗಡೆ ಮಾಡಲಾಗಿದೆ.ಮೈಸೂರು ಕೆ ಆರ್ ಎಸ್ ರಸ್ತೆಯಲ್ಲಿರುವ ಪರಿವರ್ತನ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳಿಗೆ ಪ್ರತ್ಯೇಕ ವಾಟ್ಸ್ ಆಪ್ ನಂಬರ್ ನೀಡಿ ಮಾಹಿತಿ ನೀಡುವಂತೆ ಮನವಿ ಮಾಡಲಾಯಿತು. ವಿಮುಕ್ತಿ ಎಂದು ಹೆಸರಿನಲ್ಲಿ ಕಾರ್ಯಾಚರಣೆ ನಡೆಯಲಿದ್ದು ಮಾಹಿತಿದಾರರ ಹೆಸರನ್ನ ಗೌಪ್ಯವಾಗಿ ಕಾಪಾಡುವ ಭರವಸೆ ನೀಡಲಾಯಿತು.ಮೈಸೂರು ನಗರದಲ್ಲಿ ಮಾದಕ ವಸ್ತುಗಳ ಬಳಕೆ ಅಥವಾ ಮಾರಾಟದ ಬಗ್ಗೆ ಕಂಡುಬಂದಲ್ಲಿ ವಾಟ್ಸಾಪ್ ನಂಬರ್ ಗೆ ಕರೆ ಮಾಡಿ ತಿಳಿಸುವಂತೆ ಮನವಿ ಮಾಡಲಾಯಿತು.ಸುರಕ್ಷಿತ ಮಕ್ಕಳ ಭವಿಷ್ಯಕ್ಕೆ ಹಾಗೂ ನೆಮ್ಮದಿಯ ಶಾಂತಿಯುತ ಮೈಸೂರಿಗೆ ಕೈ ಜೋಡಿಸುವಂತೆ ವಿಜಯನಗರ ವಿಭಾಗದ ಎಸಿಪಿ ರವಿಪ್ರಸಾದ್ ರವರು ಕರೆ ನೀಡಿದರು.ಈ ವೇಳೆ ಮೇಟಗಳ್ಳಿ ಠಾಣೆ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಸಬ್ ಇನ್ಸ್ಪೆಕ್ಟರ್ ಗೌತಮ್ ಗೌಡ, ವಿಧ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಹಾಜರಿದ್ದರು.ಮುಂದಿನ ದಿನಗಳಲ್ಲಿ ಮೈಸೂರು ನಗರದ ವಿವಿದ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ‌ ಆಯೋಜಿಸಿ ಅರಿವು ಮೂಡಿಸಲು ಸಜ್ಜಾಗಿದ್ದಾರೆ…

ವಿಮುಕ್ತಿ ಯೋಜನೆ ವಾಟ್ಸಾಪ್ ನಂ. 8277948080

Spread the love

Related post

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ… ಮೈಸೂರು,ಅ12,Tv10 ಕನ್ನಡ ಮಹಿಳೆಯನ್ನ ಲಾಡ್ಜ್ ನಲ್ಲಿ ಭೀಕರವಾಗಿ ಕೊಂ* ಘಟನೆ ಮೈಸೂರಿ ನಲ್ಲಿ ನಡೆದಿದೆ.ಕೃತ್ಯವೆಸಗಿದ ನಂತರ ಪರಾರಿಯಾಗಿದ್ದ ಪ್ರಿಯತಮನನ್ನ 24…
ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ… ಮೈಸೂರು,ಅ4,Tv10 ಕನ್ನಡ ಮೈಸೂರಿನ ಗೋಕುಲಂನಲ್ಲಿ ಜನರ ತಂಡ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ…
ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ… ಮೈಸೂರು,ಸೆ30,Tv10 ಕನ್ನಡ ಹಣಕ್ಕಾಗಿ ಮಗನನ್ನೇ ಅಪಹರಿಸಿದ ತಂದೆ ಪತ್ನಿಗೆ 55 ಲಕ್ಷಕ್ಕೆ ಬೇಡಿಕೆ ಇಟ್ಟು…

Leave a Reply

Your email address will not be published. Required fields are marked *