ರೆಸಾರ್ಟ್ಸ ನಲ್ಲಿ ತಂಗಿದ್ದ ಗ್ರಾ.ಪಂ.ಸದಸ್ಯ ಅನುಮಾನಾಸ್ಪದ ಸಾವು…
- Crime
- July 26, 2022
- No Comment
- 639
ಮೈಸೂರು,ಜುಲೈ26,Tv10 ಕನ್ನಡ
ಅಧ್ಯಕ್ಷರ ಚುನಾವಣೆ ಹಿನ್ನಲೆ ರೆಸಾರ್ಟ್ಸ್ ನಲ್ಲಿ ತಂಗಿದ್ದ ಗ್ರಾ.ಪಂ ಸದಸ್ಯ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.ಸತೀಶ್ (34) ಮೃತಪಟ್ಟ ಗ್ರಾಮಪಂಚಾಯ್ತಿ ಸದಸ್ಯ.
ಕೆ ಆರ್ ನಗರ ತಾಲ್ಲೂಕು ಹಳಿಯೂರು ಗ್ರಾ.ಪಂ ಸದಸ್ಯರಾಗಿರುವ ಸತೀಶ ನಿನ್ನೆ ಮೈಸೂರಿನ ಆರ್ ಟಿ ನಗರ ಸುಭೀಕ್ಷ ಗಾರ್ಡನ್‌ಗೆ ಬಂದಿದ್ದರು.
ಗ್ರಾ.ಪಂ ಅಧ್ಯಕ್ಷರ ಚುನಾವಣೆ ಹಿನ್ನೆಲೆ ರೆಸಾರ್ಟ್ ನಲ್ಲಿ 10ಕ್ಕೂ ಹೆಚ್ಚು ಸದಸ್ಯರು ತಂಗಿದ್ದರು.ನಾಳೆ ಹಳೆಯೂರು ಗ್ರಾ.ಪಂ ಅಧ್ಯಕ್ಷರ ಚುನಾವಣೆ ನಡೆಯಬೇಕಿತ್ತು.
ಜವರೇಗೌಡ ಕೊಪ್ಪಲಿನ ನಿವಾಸಿ ಸತೀಶ್
ರಾತ್ರಿ ಎದೆ ನೋವಿನಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…