TV10 Kannada Exclusive

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ…ಓರ್ವನ ಬಂಧನ…ವಾಣಿಜ್ಯ ಹಾಗೂ ಗೃಹಬಳಕೆಯ 119 ಸಿಲಿಂಡರ್ ಸೀಜ್…

ಮೈಸೂರು,ನ21,Tv10 ಕನ್ನಡ ಸಿಸಿಬಿ ಹಾಗೂ ಸರಸ್ವತಿಪುರಂ ಠಾಣೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ನಡೆಸುತ್ತಿದ್ದ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ ನಡೆಸಿ ಓರ್ವನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಂಟಿ ಕಾರ್ಯಾಚರಣೆಯಲ್ಲಿ ವಾಣಿಜ್ಯ ಹಾಗೂ ವಿವಿದ ಕಂಪನಿಯ ಗೃಹಬಳಕೆ ಸೇರಿದಂತೆ 119 ಸಿಲಿಂಡರ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.ಮೈಸೂರಿನ ರಾಜರಾಜೇಶ್ವರಿ ನಗರ ಬೆಮಲ್ ಲೇಔಟ್ 2 ನೇ ಹಂತದಲ್ಲಿರುವ ಸರ್ವೆ ನಂ 241/2 ರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗ್ಯಾಸ್ ರೀಫಿಲ್ಲಿಂಗ್ ದಂಧೆಗೆ ಬ್ರೇಕ್
Read More

ಲೋಕಾ ಬಲೆಗೆ ಬಿದ್ದ ಬಿಲ್ ಕಲೆಕ್ಟರ್…ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಲಾಕ್…

ಮೈಸೂರು,ನ21,Tv10 ಕನ್ನಡ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿಲ್ ಕಲೆಕ್ಟರ್ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.ಮೈಸೂರಿನ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ.ಹೂಟಗಳ್ಳಿ ನಗರಸಭೆಯ ಬಿಲ್ ಕಲೆಕ್ಟರ್ ದಿನೇಶ್ ಲೋಕಾಯುಕ್ತ ಬಲೆಗೆ ಬಿದಗದವರು.ಭೈರಪ್ಪ ಎನ್ನುವವರಿಂದ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.ಮಧ್ಯವರ್ತಿ ಕಡೆಯಿಂದ ಜಮೀನನ್ನು ಲೇಔಟ್ ಆಗಿ ಪರಿವರ್ತಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ನಗರಸಭೆಯ ಹೊರಗಡೆ ಲಂಚ ಪಡೆಯುವ ವೇಳೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ.ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ…
Read More

ಕಾಡು ತೊರೆದು ನಾಡಿಗೆ ಬಂದ್ರೂ ಮೂಲ ಆದಿವಾಸಿಗಳಿಗೆ ಸಿಗದ ಸರ್ಕಾರಿ ಸೌಲಭ್ಯ…21 ಕುಟುಂಬ ಹೈರಾಣು…

ನಂಜನಗೂಡು,ನ20,Tv10 ಕನ್ನಡ ಕಾಡುತೊರೆದು ನಾಡಿಗೆ ಬಂದು ನೆಲೆಸಿದರೂ ಮೂಲ ಆದಿವಾಸಿ ಜನರಿಗೆ ಬವಣೆ ತಪ್ಪಿಲ್ಲ.ಸರ್ಕಾರಿ ಸೌಲಭ್ಯಗಳಿಂದ ವಂಚಿತಾರದ ಸುಮಾರು 21 ಕುಟುಂಬ ಹೈರಾಣರಾಗಿದ್ದಾರೆ.ಪರಿಶಿಷ್ಟ ಪಂಗಡ ಅಧಿಕಾರಿಗಳ ನಿರ್ಲಕ್ಷತನಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ.ನಂಜನಗೂಡು ತಾಲೂಕಿನ ಹುರ ಹಾಗೂ ಕಪ್ಪುಸೋಗೆ ಗ್ರಾಮದಲ್ಲಿ ಸುಮಾರು 21 ಕಾಡುಕುರುಬ ಸೋಲಿಗ ಜನಾಂಗದ ಕುಟುಂಬಗಳು ನೆಲೆಸಿವೆ.ಕೆಲವು ದಶಕಗಳ ಹಿಂದೆ ಸರ್ಕಾರ ನೀಡಿದ ಕರೆ ಮೇಲೆ ಕಾಡುತೊರೆದ ಈ ಕುಟುಂಬಗಳು ನಾಡು ಸೇರಿವೆ.ವರುಷಗಳೇ ಉರುಳಿದರೂ ಈ ಕುಟುಂಬಗಳು ಸರ್ಕಾರದ
Read More

ಮಹಿಳೆ ಕೊಂದ ಸ್ಥಳದಲ್ಲೇ ಹಸು ಬಲಿ ಪಡೆದ ಹುಲಿ…ಅರಣ್ಯಾಧಿಕಾರಿಗಳ ವಿರುದ್ದ ಸ್ಥಳೀಯರ ಆಕ್ರೋಷ…

ನಂಜನಗೂಡು,ನ20,Tv10 ಕನ್ನಡ ಕಳೆದ ವರ್ಷ ಮಹಿಳೆಯನ್ನ ಕೊಂದಿದ್ದ ಸ್ಥಳದಲ್ಲೇ ಹುಲಿರಾಯ ಹಸುವೊಂದನ್ನ ಬಲಿ ಪಡೆದಿದ್ದಾನೆ.ಹುಲಿ ಕಾಟದಿಂದ ಮುಕ್ತಿ ಸಿಗದ ಹಿನ್ನಲೆ ಸ್ಥಳೀಯರು ಅರಣ್ಯಾಧಿಕಾರಿಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ನಿಮ್ಮಿಂದ ಕಾಡಿಗಟ್ಟಲು ಸಾಧ್ಯವಿಲ್ಲವೆಂದ್ರೆ ನಾವೇ ಅಟ್ಟುತ್ತೇವೆ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನಾಗಣಾಪುರದಲ್ಲಿ ಘಟನೆ ನಡೆದಿದೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವಲಯ ವ್ಯಾಪ್ತಿಯ ನಾಗಣಾಪುರದಲ್ಲಿಪದೇ ಪದೇ ಹುಲಿ ಕಾಣಿಸಿಕೊಳ್ಳುತ್ತಿದೆ.ಕಳೆದ ವರ್ಷ ಇದೆ ಸ್ಥಳದಲ್ಲಿ ಹುಲಿ ಮಹಿಳೆಯನ್ನು ಕೊಂದಿತ್ತು.ಇದೀಗಾ
Read More

ಹುಣಸೂರು ಟೌನ್ ಪೊಲೀಸರ ಕಾರ್ಯಾಚರಣೆ…ಮನೆಗಳವು ಆರೋಪಿ ಬಂಧನ…18 ಕಳವು ಪ್ರಕರಣ ಪತ್ತೆ…ನಗದು ಸೇರಿದಂತೆ 5.5 ಲಕ್ಷ ಮೌಲ್ಯದ ಪದಾರ್ಥಗಳು ವಶ…

ಹುಣಸೂರು,ನ20,Tv10 ಕನ್ನಡ ಹುಣಸೂರು ಟೌನ್ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮನೆಗಳವು ಆರೋಪಿ ಬಂಧನವಾಗಿದೆ.ಬಂಧಿತನಿಂದ 1.72 ಲಕ್ಷ ನಗದು ಸೇರಿದಂತೆ 5.5 ಲಕ್ಷ ಮೌಲ್ಯದ ಪದಾರ್ಥಗಳನ್ನ ವಶಪಡಿಸಿಕೊಳ್ಳಲಾಗಿದೆ.ಮೈಸೂರಿನ ಬೆಲವತ್ತ ಗ್ರಾಮದ ಸೈಯದ್ ಉಸ್ಮಾನ್(35) ಬಂಧಿತ ಆರೋಪಿ.ಹುಣಸೂರಿನ ಬಜಾರ್ ರಸ್ತೆ,ಜೆ.ಎಲ್.ಬಿ.ರಸ್ತೆ,ಹಳೇ ಸೇತುವೆ ರಸ್ತೆಯ ಮೆಡಿಕಲ್ ಶಾಪ್ ಗಳಲ್ಲಿ ಕನ್ನ ಕಳುವು ಪ್ರಕರಣಗಳು ನಡೆದಿತ್ತು.ಈ ಸಂಭಂಧ ಖದೀಮನ ಬಂಧನಕ್ಕೆ ಹುಣಸೂರು ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಜಾಲ ಬೀಸಿದ್ದರು.ಖತರ್ನಾಕ್ ಕಳ್ಳ ಪೊಲೀಸರು ಹಣೆದ
Read More

ರಸ್ತೆ ಬದಿ ವ್ಯಾಪಾರಸ್ಥರಿಂದ ಕಿರಿಕಿರಿ ತಪ್ಪಿಸಿ…ದಸರಾ ವಸ್ತುಪ್ರದರ್ಶನ ಅಧ್ಯಕ್ಷರಿಗೆ ಗ್ರಾಹಕ ಪಂಚಾಯತ್ ನಿಂದ ಮನವಿ…

ಮೈಸೂರು,ನ19,Tv10 ಕನ್ನಡ ದಸರಾ ವಸ್ತುಪ್ರದರ್ಶನದಲ್ಲಿ ಅನಧಿಕೃತ ರಸ್ತೆಬದಿ ವ್ಯಾಪಾರಸ್ಥರಿಂದ ಪ್ರವಾಸಿಗರಿಗೆ ಹಾಗೂ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಕಿರುಕುಳ, ತಪ್ಪಿಸಬೇಕೆಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ರವರಿಗೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನಿಂದ ಇಂದು ಮನವಿ ನೀಡಲಾಯಿತು. ದಸರಾ ವಸ್ತುಪ್ರದರ್ಶನಕ್ಕೆ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ, ಮಳಿಗೆಗಳ ವ್ಯಾಪಾರಸ್ಥರು ಕೂಡ ಲಕ್ಷಾಂತರ ಹಣ ವ್ಯಯಿಸಿ 3 ತಿಂಗಳು ವ್ಯಾಪಾರಕ್ಕೆಂದು ಶ್ರಮ ವಹಿಸುತ್ತಾರೆ, ಆದರೆ ಕರ್ನಾಟಕ ವಸ್ತುಪ್ರದರ್ಶನದ ಕಾರ್ಯನಿರ್ವಾಹಣಾಧಿಕಾರಿ
Read More

ದೆವರಾಜು ಗೆ ಲೋಕಾಯುಕ್ತ ಮತ್ತೆ ನೋಟೀಸ್…ಮುಡಾ ಮಾಜಿ ಅಧ್ಯಕ್ಷ ಡಿ.ಧೃವಕುಮಾರ್ ಗೂ ನೋಟೀಸ್…

ಮೈಸೂರು,ನ19,Tv10 ಕನ್ನಡ ಸಿಎಂ ಸಿದ್ದರಾಮಯ್ಯ ಅಕ್ರಮವಾಗಿ ಮುಡಾದಿಂದ ಬದಲಿ ನಿವೇಶನ ಪಡೆದ ಆರೋಪದ ಹಿನ್ನಲೆ ಲೋಕಾಯುಕ್ತ ತೆನಿಖೆಮಹತ್ವದ ಘಟ್ಟ ತಲುಪಿದೆ.ಮತ್ತೆ ಎ4 ದೇವರಾಜುಗೆ ಲೋಕಾಯುಕ್ತ ನೋಟಿಸ್ ನೀಡಿದ್ದಾರೆ.ನಾಳೆ 20/11/2024ರಂದು ಲೋಕಾಯುಕ್ತ ಕಚೇರಿಗೆ ಆಗಮಿಸವಂತೆ ನೋಟಿಸ್ ನೀಡಲಾಗಿದೆ.ದೇವರಾಜು ಸ‌.ನಂ 464ರ ಜಮೀನು ಮಾಲೀಕ.ಈಹಿಂದೆ ಪೂರ್ತಿ ದಿನ ದೇವರಾಜು ವಿಚಾರಣೆ ಮಾಡಿದ್ದ ಲೋಕಾಯುಕ್ತಇದೀಗ ಮತ್ತೊಮ್ಮೆ ಎರಡನೇ ಬಾರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದೆ.ಹಿಂದಿನ ಮುಡಾ ಆಯುಕ್ತ ಕಾಂತರಾಜು ಹಾಗೂ ಮಾಜಿ ಅಧ್ಯಕ್ಷ ಡಿ
Read More

ಮೊದಲ ಪತ್ನಿ ಇದ್ದರೂ ಲೇಡೀಸ್ ಪಿಜಿ ಓನರ್ ನ ಬಲೆಗೆ ಬೀಳಿಸಿದ…ಗರ್ಭಿಣಿ ಮಾಡಿ 9 ಲಕ್ಷಕ್ಕೆ ಉಂಡನಾಮ…ಉಂಡೂ ಹೋದ ಕೊಂಡೂ

ಮೈಸೂರು,ನ19,Tv10 ಕನ್ನಡ ಮೊದಲನೇ ಹೆಂಡತಿ ಜೊತೆ ಸಂಸಾರ ನಡೆಸುತ್ತಿದ್ದರೂ ಲೇಡೀಸ್ ಪಿಜಿ ಓನರ್ ಜೊತೆ ಪ್ರೀತಿಸುವ ನಾಟಕವಾಡಿ ಮದುವೆ ಮಾಡಿಕೊಂಡ ಭೂಪ ಆಕೆಯನ್ನ ಗರ್ಭಿಣಿ ಮಾಡಿ ಸುಮಾರು 9 ಲಕ್ಷ ಹಣಕ್ಕೆ ಉಂಡೆನಾಮ ಇಟ್ಟು ವಂಚಿಸಿದ ಪ್ರಕರಣವೊಂದು ಮೈಸೂರಿನ ವಿವಿ ಮೊಹಲ್ಲಾದಲ್ಲಿ ಬೆಳಕಿಗೆ ಬಂದಿದೆ.ಈ ಸಂಭಂಧ ವಂಚನೆಗೆ ಇಳಗಾದ ಗೃಹಿಣಿ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪತಿ,ಅತ್ತೆ,ಮಾವನ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರು ನಿವಾಸಿ ಭರತ್ ಗೌಡ ಹಾಗೂ ಈತನ ತಂದೆ
Read More

ಶಾಸಕ ಶ್ರೀವತ್ಸ್ ನೂತನ ಕಚೇರಿ ಉದ್ಘಾಟನೆ…ಅಗಸ್ತ್ಯ ಕ್ರಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ ಶುಭಹಾರೈಕೆ…

ಮೈಸೂರು,ನ18,Tv10 ಕನ್ನಡ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್ ಶ್ರೀವತ್ಸ ರವರ ನೂತನ ಶಾಸಕರ ಕಚೇರಿ ಕರ್ತವ್ಯ ಭವನ ಉದ್ಘಾಟನೆ ಅಗ್ರಹಾರದಲ್ಲಿ ನೆರವೇರಿತು.ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಆಡಳಿತ ಮಂಡಳಿ ಸದಸ್ಯರು ಶ್ರೀನಿವಾಸನ ಭಾವಚಿತ್ರ ನೀಡಿ ಶುಭಕೋರಿದುರು. ಅಗಸ್ತ್ಯ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಂ ಡಿ ಗೋಪಿನಾಥ್,ಉಪಾಧ್ಯಕ್ಷರಾದ ಎಂ ಎನ್ ಸೌಮ್ಯ ಹಾಗೂ ಖಜಾಂಚಿ ಕೆ ನಾಗರಾಜ ನಿರ್ದೇಶಕ ಮಂಡಲಿ ಸದಸ್ಯರಾದ ಸಿ ವಿ ಪಾರ್ಥಸಾರಥಿ, ಹೆಚ್
Read More

ದಂಪತಿ ನಡುವೆ ಜಗಳ…ಪತ್ನಿ ಸಾವಿನಲ್ಲಿ ಅಂತ್ಯ…

ಮೈಸೂರು,ನ18,Tv10 ಕನ್ನಡ ಪ್ರೀತಿಸ ಮದುವೆಯಾದ ದಂಪತಿ ಮಧ್ಯೆ ಶುರುವಾದ ಜಗಳ ಪತ್ನಿ ಸಾವಿನಲ್ಲಿ ಅಂತ್ಯವಾದ ಘಟನೆ ಮೈಸೂರಿನ ಹಳೆ ಕೆಸರೆಯಲ್ಲಿ ನಡೆದಿದೆ.ಪತ್ನಿಕೋಮಲ (25) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಎರಡು ವರ್ಷದ ಹಿಂದೆ ರಾಜು ಎಂಬಾತನನ್ನ ಕೋಮಲ ಪ್ರೀತಿಸಿ ಮದುವೆಯಾಗಿದ್ದರು.ನಿನ್ನೆ ತಡ ರಾತ್ರಿ ಗಂಡ ಹೆಂಡತಿ ನಡುವೆ ಗಲಾಟೆ ಆಗಿದೆ.ಮನನೊಂದ ಕೋಮಲ ಆತ್ಮಹತ್ಯೆಗೆ ಶರಣಾಗಿದ್ದಾರೆ.ಸ್ಥಳಕ್ಕೆ ಎನ್.ಆರ್. ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ…
Read More