ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು: ಸಿ.ಆರ್.ದಿನೇಶ್.

ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು: ಸಿ.ಆರ್.ದಿನೇಶ್.

ಕೆ.ಆರ್. ಪೇಟೆ: ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಅದರಿಂದಾಗಿಯೇ ಹದಿನೆಂಟು ವಯಸ್ಸಿನಿಂದ ಎಲ್ಲರೂ ಮತ ಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ. ಹಾಗಾಗಿ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದು ಬಲ್ಲೇನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ ಆರ್ ದಿನೇಶ್ ವಿದ್ಯಾರ್ಥಿಗಳಿಗೆ ತಿಳಿಸಿದರು.

ಇಂದು ಕಾಲೇಜಿನಲ್ಲಿ ಸ್ವೀಪ್ ನ ಅಡಿಯಲ್ಲಿ ನಡೆದ ಮತದಾನದ ಮಹತ್ವದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಕರೆಲ್ಲರು ತಮ್ಮ ತಮ್ಮ ಕುಟುಂಬ ಹಾಗೂ ನೆರೆಹೊರೆಯವರಲ್ಲಿ ಮತದಾನದ ಜಾಗೃತಿ ಮೂಡಿಸುವ ಕಾರ್ಯವು ಪ್ರಸ್ತುತ ಕಾಲದಲ್ಲಿ ಹೆಚ್ಚು ಅನಿವಾರ್ಯವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಸರ್ವರ ಪಾಲೂ ಇರುತ್ತದೆಂಬುದನ್ನು ಮನದಟ್ಟು ಮಾಡಿಸಿ, ಅದಕ್ಕಾಗಿ ಮತದಾನದ ದಿನ ತಪ್ಪದೆ ಮತದಾನ ಮಾಡುವಂತೆ ಪ್ರೇರೇಪಿಸಬೇಕೆಂದು ತಿಳಿಸಿದರು.

ಕಾಲೇಜಿಗೆ ರಜೆಯಿದ್ದರೂ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳೆಲ್ಲರೂ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಒಟ್ಟುಗೂಡಿ ಬಲ್ಲೇನಹಳ್ಳಿಯ ಮನೆಮನೆಗೆ ತೆರಳಿ ಮತದಾನದ ಮಹತ್ವದ ಅರಿವು ಮೂಡಿಸಿದರು.
ಮತದಾನದ ದಿನ ಮತಗಟ್ಟಿಗೆ ಮತದಾರರನ್ನು ಕರೆತಂದು ಮತ ಚಲಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪ್ರತಿಜ್ಞೆಯನ್ನು ಸಹಾ ವಿದ್ಯಾರ್ಥಿಗಳು ಸ್ವೀಕರಿಸಿದರು.
ಈ ಕಾರ್ಯದಲ್ಲಿ ಹಿರಿಯ ಉಪನ್ಯಾಸಕರಾದ ಹೆಚ್.ಎನ್.ರಂಗರಾಜು, ಜೆ.ಜಿ.ರಾಜೇಗೌಡ ಪಾಲ್ಗೊಂಡಿದ್ದರು .

Spread the love

Related post

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…
ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…

Leave a Reply

Your email address will not be published. Required fields are marked *