ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…
- Crime
- September 10, 2026
- No Comment
- 7

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…
ಮೈಸೂರು,ಸೆ10,Tv10 ಕನ್ನಡ
ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಥುರಾ ನಗರದ ಬಡಾವಣೆಯಲ್ಲಿ ಘಟನೆ ನಡೆದಿದೆ.ಹಾಲು ತರಲು ಮನೆಯಿಂದ ಹೊರಗಡೆ ಬಂದಿದ್ದ ಕಮಲಾಕ್ಷಮ್ಮ(85) ಎಂಬುವರ ಚಿನ್ನದ ಸರ ಕಸಿಯಲು ಯತ್ನಿಸಿದ್ದಾರೆ.ತೀವ್ರವಾಗಿ ಪ್ರತಿರೋಧಿಸಿದ ಕಮಲಾಕ್ಷಮ್ಮ ಎರಡು ಕೈಗಳಲ್ಲೂ ಸರವನ್ನ ಭದ್ರವಾಗಿ ಹಿಡಿದು ಕೂಗಾಡಿದ್ದಾರೆ.ಅರಚಾಟದ ಶಬ್ದ ಕೇಳಿ ಜನ ಬಂದಾಗ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.ಚಿನ್ನದ ಸರ ಎರಡು ಭಾಗವಾಗಿ ಕಮಲಾಕ್ಷಮ್ಮ ರವರ ಕೈನಲ್ಲೇ ಉಳಿದುಕೊಂಡಿದೆ. ಆಟೋದಲ್ಲಿ ಬಂದ ಕಿಡಿಗೇಡಿಗಳು ಕೃತ್ಯವೆಸಗಿದ್ದಾರೆ.ಸ್ಥಳಕ್ಕೆ ಮೇಟಗಳ್ಳಿ ಠಾಣೆ ಇನ್ಸ್ಪೆಕ್ಟರ್ ಅರುಣ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದು ಖದೀಮರ ಪತ್ತೆಗೆ ಜಾಲ ಬೀಸಿದ್ದಾರೆ…