
ಲಷ್ಕರ್ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ…ಆಟೋದಲ್ಲಿ ಮರೆತುಹೋಗಿದ್ದ ಚಿನ್ನಾಭರಣ ಬ್ಯಾಗ್ ಮಾಲೀಕರ ವಶಕ್ಕೆ…
- TV10 Kannada Exclusive
- March 28, 2024
- No Comment
- 487
ಮೈಸೂರು,ಮಾ28,Tv10 ಕನ್ನಡ
ಆಟೋದಲ್ಲಿ ಮರೆತುಹೋಗಿದ್ದ ಚಿನ್ನಾಭರಣವಿದ್ದ ಬ್ಯಾಗ್ ಮಾಲೀಕರ ವಶಕ್ಕೆ ತಲುಪಿಸುವಲ್ಲಿ ಲಷ್ಕರ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.ಇನ್ಸ್ಪೆಕ್ಟರ್ ಮಹಮದ್ ಸಲೀಂ ಅಬ್ಬಾಸ್ ರವರ ಸಮಯೋಚಿತ ಕಾರ್ಯಾಚರಣೆಯಿಂದ ಚಿನ್ನದ ಬ್ಯಾಗ್ ಮಾಲೀಕರ ವಶಕ್ಕೆ ತಲುಪಿದೆ.ಪೊಲೀಸರ ಮಿಂಚಿನ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಹಾಗೂ ಡಿಸಿಪಿ ಮುತ್ತುರಾಜ್ ಮತ್ತು ಜಾಹ್ನವಿ ರವರು ಪ್ರಶಂಸಿಸಿದ್ದಾರೆ.
ಸಾತಗಳ್ಳಿ ನಿವಾಸಿ ಜ್ಯೋತಿ ಎಂಬುವರು ಆಟೋದಲ್ಲಿ ಮೈಸೂರಿನ ಅಶೋಕಾ ರಸ್ತೆಯಲ್ಲಿರುವ ಲಲಿತಾ ಜ್ಯೂಯಲರಿಗೆ ಬಂದಿದ್ದಾರೆ.ಹಿಂದೆ ಖರೀದಿಸಿದ್ದ 60 ಗ್ರಾಂ ಚಿನ್ನದ ವಡವೆಗಳನ್ನ ಬದಲಾಯಿಸಿಕೊಳ್ಳಲು ಬಂದಿದ್ದಾರೆ.ಆಟೋ ಇಳಿಯುವ ವೇಳೆ ಚಿನ್ನದ ವಡವೆ ಇದ್ದ ವ್ಯಾನಿಟಿ ಬ್ಯಾಗ್ ಮರೆತುಹೋಗಿದ್ದಾರೆ.ಕೂಡಲೇ ಎಚ್ಚೆತ್ತ ಜ್ಯೋತಿ ರವರು ಲಷ್ಕರ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.ನಿರೀಕ್ಷಕರಾದ ಮಹಮದ್ ಸಲೀ ಅಬ್ಬಾಸ್ ರವರು ಮಿಂಚಿನ ಕಾರ್ಯಾಚರಣೆ ನಡೆಸಿ ಕೇವಲ ಒಂದು ಗಂಟೆ ವೇಳೆಯಲ್ಲೇ ಆಟೋ ಪತ್ತೆ ಹಚ್ಚಿ ಚಿನ್ನದ ವಡವೆಗಳಿದ್ದ ಬ್ಯಾಗ್ ಪತ್ತೆಹಚ್ಚಿದ್ದಾರೆ.ಜ್ಯೋತಿ ರವರು ಕುಳಿತಿದ್ದ ಸೀಟ್ ಹಿಂದೆ ಇದ್ದ ವ್ಯಾನಿಟಿ ಬ್ಯಾಗ್ ನ್ನ ಆಟೋ ಚಾಲಕ ಮಹಮದ್ ನಸೀರ್ ರವರೂ ಸಹ ಗಮನಿಸಿಲ್ಲ.ಪೊಲೀಸರು ಆಟೋ ಪರಿಶೀಲನೆ ನಡೆಸಿದಾಗ ಬ್ಯಾಗ್ ಇರುವುದು ಪತ್ತೆಯಾಗಿದೆ.ಘಟನೆ ನಡೆದ ಕೇವಲ ಒಂದು ಗಂಟೆ ಅವಧಿಯಲ್ಲಿ ಕಳೆದುಕೊಂಡಿದ್ದ ಚಿನ್ನಾಭರಣವನ್ನ ಮಾಲೀಕರಿಗೆ ತಲುಪಿಸುವಲ್ಲಿ ಲಷ್ಕರ್ ಠಾಣೆ ಇನ್ಸ್ಪೆಕ್ಟರ್ ಮಹಮದ್ ಸಲೀಂ ಅಬ್ಬಾಸ್ ಹಾಗೂ ಸಿಬ್ಬಂದಿಗಳ ಕಾರ್ಯಕ್ಷಮತೆ ಮೆಚ್ಚುಗೆಗೆ ಪಾತ್ರವಾಗಿದೆ…