
ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ ಕ್ಯಾಮರ ಕಣ್ಣಿಗೆ ಸೆರೆಯಾದ ವ್ಯಾಘ್ರ…
- TV10 Kannada Exclusive
- July 4, 2025
- No Comment
- 27


ನಂಜನಗೂಡು,ಜು4,Tv10 ಕನ್ನಡ
ಒಂದೇ ದಿನ ಮೂರು ಹಸುಗಳ ಮೇಲೆ ದಾಳಿ ಮಾಡಿದ ವ್ಯಾಘ್ರ ಒಂದು ಸಾವನ್ನಪ್ಪಿದ್ದು ಎರಡು ಹಸುಗಳು ಗಾಯಗೊಂಡ ಘಟನೆ ನಂಜನಗೂಡು ತಾಲೂಕು ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನೆಯಿಂದ ಸುತ್ತಮುತ್ತಲ ರೈತರಲ್ಲಿ ಆತಂಕ ಹೆಚ್ಚಾಗಿದೆ.
ವ್ಯಾಘ್ರನ ಸೆರೆ ಹಿಡಿಯುವಂತೆ ರೈತರು ಅಗ್ರಹಿಸಿದ್ದಾರೆ.ಅರಣ್ಯ ಇಲಾಖೆ ಅಲರ್ಟ್ ಆಗಿದೆ.ಕೆಲ ದಿನಗಳಿಂದ ಹುಕಿ ಹೆಡಿಯಾಲ ಸುತ್ತಮುತ್ತಲ ಈರೇಗೌಡನ ಹುಂಡಿ ಅಂಜನಾಪುರ ಗ್ರಾಮಗಳ ಬಳಿ ಕಾಣಿಸಿಕೊಂಡಿದೆ.ಜಮೀನಿನಲ್ಲಿ ಬಾರಿ ಗಾತ್ರದ ಹೆಜ್ಜೆ ಗುರುತುಗಳು ಕಂಡುಬಂದಿತ್ತು. ಅರಣ್ಯ ಇಲಾಖೆಯ ಎಸಿಎಫ್ ಪರಮೇಶ್ ನೇತೃತ್ವದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಹುಲಿಯ ಹೆಜ್ಜೆ ಗುರುತುಗಳ ಓಡಾಟವನ್ನು ಗಮನಿಸಿ ಮಡುವಿನಹಳ್ಳಿ ಸಮೀಪದ ಜಮೀನೊಂದರಲ್ಲಿ ಕ್ಯಾಮರ ಅಳವಡಿಸಿದ್ದರು.ಕಣ್ತಪ್ಪಿಸಿ ಓಡಾಡುತ್ತಿರುವ ಹುಲಿ ಕ್ಯಾಮರ ಕಣ್ಣಿಗೆ ಸೆರೆಯಾಗಿದೆ.ಇಂದು ಮಧ್ಯಾಹ್ನ ಒಂದು ಗಂಟೆಯ ಸಮಯದಲ್ಲಿ ಮಡುವಿನಹಳ್ಳಿ ಗ್ರಾಮದ ನಿಜಲಿಂಗಪ್ಪ ಎಂಬುವರಿಗೆ ಸೇರಿದ ಒಂದು ಹಸುವನ್ನು ಬಲಿಪಡೆದು ಮಹೇಶ್ ಎಂಬ ರೈತರಿಗೆ ಸೇರಿದ ಮತ್ತೆರಡು ಹಸುಗಳ ಮೇಲೂ ದಾಳಿ ನಡೆಸಿ ಗಾಯಗೊಳಿಸಿದೆ.
ಸ್ಥಳಕ್ಕೆ ಆಗಮಿಸಿದ ಹೆಡಿಯಾಲ ಉಪವಲಯ ಅರಣ್ಯ ಅಧಿಕಾರಿಗಳಾದ ಕಾರ್ತಿಕ್, ಕಿರಣ್ ಸ್ಥಳ ಪರಿಶೀಲಿಸಿ ಇಲಾಖೆಯಿಂದ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಮೇಲಾಧಿಕಾರಿಗಳು, ಇತ್ತ ಗಮನ ಹರಿಸಿ, ಹುಲಿಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ…