ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಮೈಸೂರು,ಜೂ26,Tv10 ಕನ್ನಡ

ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಆಯ್ಕೆಯಾದರು. ಅವರು ಮೈಸೂರು ಚೈಲ್ಡ್ ನ್ಯೂರೋಲಾಜಿ ಅಂಡ್ ರಿಹ್ಯಾಬಿಲಿಟೇಶನ್ ಸೆಂಟರ್ (MCNRC) ಸಂಸ್ಥಾಪಕರೂ ಹಾಗೂ ಪ್ರಸಿದ್ಧ ಕನ್ಸಲ್ಟೆಂಟ್ ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಆಗಿದ್ದಾರೆ. ಡಾ. ಅನುಷಾ ರಾಜ್ ರವರು ಡಾ. ಕೆ.ಎಚ್. ಬಸವರಾಜ್ (ಚರ್ಮ ತಜ್ಞ) ಹಾಗೂ ಡಾ. ಭಾರತೀ ಎಂ.ಬಿ (ENT ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರು, ಜೆಎಸ್ಎಸ್ ಆಸ್ಪತ್ರೆ) ದಂಪತಿಯ ಪುತ್ರಿಯಾಗಿದ್ದಾರೆ.
ಮೆಡಿಕ್ವೀನ್ ಭಾರತ ಇಂಟರ್ ನ್ಯಾಷನಲ್ ಮಿಸ್ & ಮಿಸೆಸ್ 2025’* ಎಂಬುದು ವೈದ್ಯಕೀಯ ಕ್ಷೇತ್ರದ ಮಹಿಳೆಯರಿಗೆ ಮೀಸಲಾದ ಮೊಟ್ಟಮೊದಲ ಪೇಜಂಟ್ ಆಗಿದೆ. ಮಹಿಳಾ ಆರೋಗ್ಯದ ಸಂಭ್ರಮ’ ಎಂಬ ಧ್ಯೇಯದೊಂದಿಗೆ ವೈದ್ಯಕೀಯ ಸಮುದಾಯದ ಸಾಧನೆಗಳನ್ನು ಗೌರವಿಸುವ ಆಶಯ ಹೊಂದಿದೆ. ಸೀಸನ್ 6 ಕಾರ್ಯಕ್ರಮವು ಜೂನ್ 20 ರಿಂದ 22 ರವರೆಗೆ ಪುಣೆಯ ಟಿಪ್ ಟಾಪ್ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ಮೂರು ದಿನಗಳ ಕಾಲ ನಡೆಯಿತು.ಪ್ರೀ-ಫೈನಲ್‌ನಲ್ಲಿ ಡಾ. ಅನುಷಾ ರಾಜ್ ಕೆ ಅವರಿಗೆ ವಿಶಿಷ್ಟವಾದ ಫೇಸ್ ಆಫ್ ಮೆಡಿಕ್ವೀನ್’ ಎಂಬ ಗೌರವ ನೀಡಲಾಯಿತು. ಅಲ್ಲದೆ ಅವರು ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಹೆಲ್ತ್‌ಕೇರ್ ಅವಾರ್ಡ್ಸ್ 2025 -ಬೆಸ್ಟ್ ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಪ್ರಶಸ್ತಿಗೆ ಭಾಜನರಾದರು
ಗ್ರ್ಯಾಂಡ್ ಫೈನಲ್‌ನಲ್ಲಿ ನಾವಾರಿ ಸೀರೆ ರೌಂಡ್ ಹಾಗೂ ಈವಿನಿಂಗ್ ಗೌನ್ ರೌಂಡ್‌ಗಳೂ ನಡೆದವು. ಅಂತಿಮ ಪ್ರಶ್ನೋತ್ತರ ಸುತ್ತಿನಲ್ಲಿ, ಅವರಿಗೆ ಕೇಳಲಾದ “ನಿಮಗೆ ಮಹಿಳಾ ಸಬಲತೆ ಎಂದರೆ ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು
“ಈ ಕಾಲದಲ್ಲಿ ಮಹಿಳಾ ಸಬಲತೆ ಎಂದರೆ ಭಯವಿಲ್ಲದೆ, ಮಿತಿಗಳಿಲ್ಲದೆ ತಾನೇ ತೀರ್ಮಾನ ತೆಗೆದುಕೊಳ್ಳುವ ಶಕ್ತಿ. ಒಂದು ಪೀಳಿಗೆ ಸಬಲ ಮಹಿಳೆ, ಭವಿಷ್ಯದ ಹಲವಾರು ಪೀಳಿಗೆಯನ್ನೂ ಮೇಲಕ್ಕೆ ಎತ್ತಲು ಸಾಧ್ಯವಿದೆ.”
ಇದೇ ಉತ್ತರ ಅವರಿಗೆ ಕಿರೀಟ ಗೆಲ್ಲಿಸಿತು.
ಮುಖ್ಯ ಅತಿಥಿಗಳಾಗಿ
ವಿಜಯಾ ರಹತ್ಕರ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ.
ಮಾನ್ಯ ಅಜಿತ್ ಪವಾರ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ.
ರಾಕೇಶ್ ಬಾಪತ್, ಖ್ಯಾತ ನಟ ಕಾರ್ಯ ನಿರ್ವಹಿಸಿದರು…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *