
ನಂಜನಗೂಡು ಶಿಕ್ಷಕ ಸೇರಿದಂತೆ BEO ಲೋಕಾ ಬಲೆಗೆ…ಗೌರವ ಧನ ಬಿಡುಗಡೆ ಮಾಡಲು ಲಂಚ…
- TV10 Kannada Exclusive
- March 28, 2024
- No Comment
- 560
ನಂಜನಗೂಡು,ಮಾ28,Tv10 ಕನ್ನಡ
ಗೌರವ ಧನ ಬಿಡುಗಡೆ ಮಾಡಲು ವ್ಯಕ್ತಿಯೊಬ್ಬರಿಂದ 5 ಸಾವಿರ ಲಂಚ ಪಡೆಯುತ್ತಿದ್ದ ಶಿಕ್ಷಕ ಹಾಗೂ ಬಿಇಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ನಂಜನಗೂಡು ಬಿಇಓ ಶಿವಲಿಂಗಯ್ಯ ಹಾಗೂ ಶಿಕ್ಷಕ ರಮೇಶ್ ಲೋಕಾಯುಕ್ತ ಬಲೆಗೆ ಬಿದ್ದವರು.ಮೈಸೂರಿನ ತಿಲಕ್ ನಗರ ನಿವಾಸಿ
ನರಸಿಂಹ ಮೂರ್ತಿ ಎಂಬುವರಿಂದ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.ಶಿವಲಿಂಗಯ್ಯ ಪರವಾಗಿ
ರಮೇಶ, BIERT( ವಿಶೇಷ ಶಿಕ್ಷಕ)
BEO & BRC ಕಚೇರಿ ,
ಇವರು ಲಂಚದ ಹಣವನ್ನು ಸ್ವೀಕರಿಸಿದ್ದರು. SP ಶ್ರೀ ಸಜೀತ್. ವಿ.ಜೆ. ನೇತೃತ್ವದಲ್ಲಿ
ಈ ಕಾರ್ಯಚರಣೆ ನಡೆದಿದೆ. ಭಾಗವಹಿಸಿದ್ದು
ಕೃಷ್ಣಯ್ಯ. ವಿ
ಡಿ ವೈ ಎಸ್ ಪಿ
ಕರ್ನಾಟಕ ಲೋಕಾಯುಕ್ತ
ಮೈಸೂರು.
ಕರ್ನಾಟಕ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ರವಿಕುಮಾರ್, ಉಮೇಶ್, ಜಯರತ್ನ, ಹಾಗೂ ಮೈಸೂರು ಲೋಕಾಯುಕ್ತ ಸಿಬ್ಬಂದಿಗಳು ವೀರ ಭದ್ರ ಸ್ವಾಮಿ, ಗೋಪಿ, ಲೋಕೇಶ್, ಆಶಾ, ಕಾಂತರಾಜು, ಮೋಹನ, ಪ್ರದೀಪ್, ಮೋಹನ್ ಗೌಡ ಮೈಸೂರು ಲೋಕಾಯುಕ್ತ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ…