ಶ್ರೀನಿವಾಸ್ ಪ್ರಸಾದ್ ಬೆಂಬಲಕ್ಕಾಗಿ ಉಭಯ ಪಕ್ಷಗಳಿಂದ ಕಸರತ್ತು…ಪ್ರಸಾದ್ ಭೇಟಿಯಾಗಲಿದ್ದಾರಾ ಸಿಎಂ…?

ಶ್ರೀನಿವಾಸ್ ಪ್ರಸಾದ್ ಬೆಂಬಲಕ್ಕಾಗಿ ಉಭಯ ಪಕ್ಷಗಳಿಂದ ಕಸರತ್ತು…ಪ್ರಸಾದ್ ಭೇಟಿಯಾಗಲಿದ್ದಾರಾ ಸಿಎಂ…?

ಮೈಸೂರು,ಏ1,Tv10 ಕನ್ನಡ

ರಾಜಕೀಯ ಬದ್ದವೈರತ್ವವನ್ನ ಮರೆತು ಮತ್ತೆ ಒಂದಾಗಲಿದ್ದಾರೆಯೇ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್ ಪ್ರಸಾದ್…? ಇಂತಹ ಒಂದು ಕುತೂಹಲ ಪ್ರಶ್ನೆ ಇದೀಗ ಕಾಂಗ್ರೆಸ್ ಪಾಳೆಯದಲ್ಲಿ ಎದ್ದಿದೆ.ಇನ್ನೆರಡು ದಿನಗಳಲ್ಲಿ ಇಂತಹ ಬೆಳವಣಿಗೆ ಆಗಲಿದೆ ಎಂಬ ಮಾಹಿತಿಯೂ ಕಾಂಗ್ರೆಸ್ ಮೂಲಗಳಿಂದ ಬರುತ್ತಿದೆ.ದಶಕಗಳ ಹಿಂದೆ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಈ ಜೋಡಿ ಕೆಲವು ಬೆಳವಣಿಗೆಯಿಂದ ದೂರವಾಗಿ ರಾಜಕೀಯ ಬದ್ದವೈರಿಗಳಾಗಿದ್ದರು.ಸಿದ್ದತಾಮಯ್ಯ ಬೆಂಬಲಕ್ಕೆ ಸದಾ ನಿಲ್ಲುತ್ತಿದ್ದ ಶ್ರೀನಿವಾಸ್ ಪ್ರಸಾದ್ ರನ್ನ ಸಂಪುಟದಿಂದ ಕೈಬಿಟ್ಟಾಗ ಸಿಡಿದೆದ್ದರು. ಸಿದ್ದರಾಮಯ್ಯ ವಿರುದ್ದ ತೊಡೆತಟ್ಟಿ ನಂಜನಗೂಡು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹೀನಾಯ ಸೋಲನುಭವಿಸಿದರು.ನಂತರ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಸಿದ್ದರಾಮಯ್ಯರಿಗೆ ಮೀಸೆ ತಿರುವಿದ್ದರು.ಈ ಬೆಳವಣಿಗೆ ನಂತರ ಹಂತಹಂತದಲ್ಲೂ ಸಿದ್ದರಾಮಯ್ಯ ವಿರುದ್ದ ಹೇಳಿಕೆ ನೀಡುವು ಮೂಲಕ ಕಿಡಿಕಾರುತ್ತಲೇ ಇದ್ದರು.ಇದೀಗ ಈ ರಾಜಕೀಯ ವೈರತ್ವವನ್ನ ಮರೆತು ಸಿದ್ದರಾಮಯ್ಯ ಕೈ ಕುಲುಕಲು ಶ್ರೀನಿವಾಸ್ ಪ್ರಸಾದ್ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ಪಾಳೆಯದಲ್ಲಿ ಕೇಳಿ ಬರುತ್ತಿದೆ.ಇದಕ್ಕೆ ಪುಷ್ಠಿ ನೀಡುವಂತೆ ಶ್ರೀನಿವಾಸ್ ಪ್ರಸಾದ್ ಅಳಿಯ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದೂ ಸಹ ಕಾರಣವಾಗುತ್ತಿದೆ.
ಮೈಸೂರು ಕೊಡಗು ಲೋಕಸಭಾ ಚುನಾವಣೆಯಲ್ಲಿ ದಲಿತ ಮತಗಳು ಅತ್ಯಂತ ಮಹತ್ವ ಪಡೆಯುವುದರ ಹಿನ್ನಲೆ ಈ ಬೆಳವಣಿಗೆಯೂ ನಡೆಯುತ್ತಿದೆ ಎನ್ನಲಾಗಿದೆ.ಸಧ್ಯ ಶ್ರೀನಿವಾಸ್ ಪ್ರಸಾದ್ ಬೆಂಬಲ ಪಡೆಯಲು ಎರಡೂ ಪಕ್ಷಗಳ ಮುಖಂಡರು ಶ್ರೀನಿವಾಸ್ ಪ್ರಸಾದ್ ಮನೆ ಬಾಗಿಲು ತಟ್ಟಿದ್ದಾರೆ.ಬಿಜೆಪಿ ಅಭ್ಯರ್ಥಿ ಯದುವೀರ್ ರವರು ಈಗಾಗಲೇ ಭೇಟಿ ನೀಡಿ ಬೆಂಬಲ ಕೋರಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಪರವಾಗಿ ಡಾ.ಹೆಚ್.ಸಿ.ಮಹದೇವಪ್ಪ,ವೆಂಕಟೇಶ್,ಡಾ.ಯತೀಂದ್ರ ಭೇಟಿ ಮಾಡಿದ್ದಾರೆ.ಉಭಯ ಪಕ್ಷಗಳು ಶ್ರೀನಿವಾಸ್ ಪ್ರಸಾದ್ ಬೆಂಬಲಕ್ಕಾಗಿ ಕಸರತ್ತು ನಡೆಸುತ್ತಿವೆ.
ಮುನಿಸು ಮರೆತು ದಿಗ್ಗಜ ನಾಯಕರು ಭೇಟಿಯಾಗುವ ಸಾಧ್ಯತೆ ಕಂಡುಬರುತ್ತಿದೆ.ಬಿಜೆಪಿಯಿಂದ ಲೋಕಸಭೆಗೆ ಮರು ಆಯ್ಕೆಯಾದ ಶ್ರೀನಿವಾಸ್ ಪ್ರಸಾದ್ ಕೆಲವು ಬೆಳವಣಿಗೆ ಹಿನ್ನಲೆ ತಮ್ಮ ಪಕ್ಷದ ನಾಯಕರ ವಿರುದ್ದವೇ ಅಸಮಾಧಾನ ವ್ಯಕ್ತಪಡಿಸಿದ್ದರು.ಸಂವಿಧಾನ ತಿದ್ದುಪಡಿ ಮಾಡುವ ವಿಚಾರದಲ್ಲಿ ಬಿಜೆಪಿ ತೆಗೆದುಕೊಂಡ ನಿರ್ಣಯಗಳನ್ನ ಬಹಿರಂಗವಾಗಿ ವಿರೋಧಿಸಿದ್ದರು.ಇದು ಶ್ರೀನಿವಾಸ್ ಪ್ರಸಾದ್ ರನ್ನ ಕೆರಳಿಸಿತ್ತು.ಸಧ್ಯ ಬಿಜೆಪಿ ಸಂಸದರಾಗಿದ್ದರೂ ತಮ್ಮ ಹಿಂದಿನ ಒಡನಾಟವಿದ್ದ ಪಕ್ಷಕ್ಕೆ ಸಪೋರ್ಟ್ ಮಾಡಲು ಶ್ರೀನಿವಾಸ್ ಪ್ರಸಾದ್ ಮನಸ್ಸು ಮಾಡಿದ್ದಾರಾ..? ಎಂಬ ಕುತೂಹಲಕಾರಿ ಅಂಶ ಕಾಡುತ್ತಿದೆ.
ಇದೀಗಾ ಹಳೆ ಮುನಿಸು ಮರೆತು ಒಂದಾಗಲು ವೇದಿಕೆಯೂ ಸಜ್ಜಾಗುತ್ತಿದೆ.
ಚುನಾವಣ ರಾಜಕೀಯ ನಿವೃತ್ತಿಯಾಗಿರುವ ಶ್ರೀನಿವಾಸ್ ಪ್ರಸಾದ್ ರವರ ಆರೋಗ್ಯ ವಿಚಾರಿಸುವ ನೆಪದಲ್ಲಿ ಸಿಎಂ ಭೇಟಿಗೆ ಮುಂದಾಗುತ್ತಿದ್ದಾರೆ.ಕಾಂಗ್ರೆಸ್ ಪರ ಇರುವ ಒಲವು
ಈಗಾಗಲೇ ಅಳಿಯನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಸಿದ್ದಾರೆ.ಒಟ್ಟಾರೆ ದಿಗ್ಗಜರ ಭೇಟಿ
ಸಾಕಷ್ಟು ಕುತೂಹಲ ಮೂಡಿಸಲಿದೆ…

Spread the love

Related post

ಕೌಟುಂಬಿಕ ಕಲಹ: ಪತ್ನಿಯನ್ನ ಕೊಂದು ಪೊಲೀಸರಿಗೆ ಶರಣಾದ ಪತಿ…

ಕೌಟುಂಬಿಕ ಕಲಹ: ಪತ್ನಿಯನ್ನ ಕೊಂದು ಪೊಲೀಸರಿಗೆ ಶರಣಾದ ಪತಿ…

ಮೈಸೂರು,ಡಿ4,Tv10 ಕನ್ನಡ ಕೌಟುಂಬಿಕ ಕಲಹ ಹಿನ್ನಲೆ ಪತ್ನಿಯ ಕತ್ತನ್ನ ಕೊಯ್ದ ಕೊಲೆಗೈದ ಪತಿ ಪೊಲೀಸರಿಗೆ ಶರಣಾದ ಘಟನೆ ಮೈಸೂರಿನ ಲಕ್ಷ್ಮಿಕಾಂತ ನಗರದಲ್ಲಿ ನಡೆದಿದೆ.ಶೃತಿ (28) ಪತಿಯಿಂದ ಕೊಲೆಯಾದ ಪತ್ನಿ.ಮನು(27)…
ಜಮೀನು ಖರೀದಿಸಿ ನಿವೇಶನ ಅಭಿವೃದ್ದಿಪಡಿಸಿಕೊಡುವುದಾಗಿ ನಂಬಿಸಿ ಕೊ.ಆಪರೇಟಿವ್ ಸೊಸೈಟಿಗೆ ದ್ರೋಹ…ಮೂವರ ವಿರುದ್ದ FIR ದಾಖಲು…

ಜಮೀನು ಖರೀದಿಸಿ ನಿವೇಶನ ಅಭಿವೃದ್ದಿಪಡಿಸಿಕೊಡುವುದಾಗಿ ನಂಬಿಸಿ ಕೊ.ಆಪರೇಟಿವ್ ಸೊಸೈಟಿಗೆ ದ್ರೋಹ…ಮೂವರ ವಿರುದ್ದ…

ಮೈಸೂರು,ಡಿ3,Tv10 ಕನ್ನಡ ಸಂಘದ ಸದಸ್ಯರ ಅನುಕೂಲಕ್ಕಾಗಿ ಜಮೀನು ಖರೀದಿಸಿ ವಸತಿ ನಿವೇಶನಗಳನ್ನ ಅಭಿವೃದ್ದಿ ಕೊಡಿಸುವುದಾಗಿ ನಂಬಿಸಿ ಕೋ.ಆಪರೇಟಿವ್ ಸೊಸೈಟಿ ಒಂದಕ್ಕೆ ಕೋಟ್ಯಾಂತರ ರೂ ವಂಚಿಸಿರುವ ಪ್ರಕರಣ ಸರಸ್ವತಿಪುರಂ ಪೊಲೀಸ್…
ಹುಣಸೂರು:ಒಂಟಿಯಾಗಿದ್ದ ವೃದ್ದೆ ಬರ್ಬರ ಕೊಲೆ…

ಹುಣಸೂರು:ಒಂಟಿಯಾಗಿದ್ದ ವೃದ್ದೆ ಬರ್ಬರ ಕೊಲೆ…

ಹುಣಸೂರು,ಡಿ3,Tv10 ಕನ್ನಡ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ದೆಯನ್ನ ಬರ್ಭರವಾಗಿ ಕೊಲೆಗೈದ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ನಡೆದಿದೆ.ಶಾಂತಕುಮಾರಿ (70) ಕೊಲೆಯಾದ ದುರ್ದೈವಿ.ಪುತ್ರ ಮನೆಗೆ ಬಂದಾಗ ತಾಯಿ ರಕ್ತದ ಮಡುವಿನಲ್ಲಿದ್ದ…

Leave a Reply

Your email address will not be published. Required fields are marked *