ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಸಾಧನೆಗೈದ ಸರ್ಕಾರಿ ವಸತಿ ಶಾಲೆ ವಾರ್ಡನ್…ಅಭಿನಂದಿಸುವುದನ್ನೂ ಮರೆತ ಇಲಾಖೆ…
- TV10 Kannada Exclusive
- April 1, 2024
- No Comment
- 95
ನಂಜನಗೂಡು,ಏ1,Tv10 ಕನ್ನಡ
ಸಾಧನೆಗೆ ಯಾವುದೇ ಮಿತಿ ಇಲ್ಲ,ಅಡ್ಡಿಯೂ ಇಲ್ಲ.ಮನಸ್ಸಿದ್ದರೆ ಮಾರ್ಗ ಎಂಬುದನ್ನ ನಿರೂಪಿಸಿದ್ದಾರೆ ನಂಜನಗೂಡು ತಾಲೂಕಿನ ಮಹದೇವನಗರ ಗ್ರಾಮದ ಮೂಳೆಗುಡ್ಡ ಬಳಿ ಇರುವ ಮುರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆಯ ಮೇಲ್ವಿಚಾರಕ ಗಣಪತಿ ಜಕಾತಿ.ಸಾವಿರಾರು ಕಿಲೋಮೀಟರ್ ದೂರ ಇರುವ ಥೈಲ್ಯಾಂಡ್ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಚಕ್ರ ಎಸೆತ ಮತ್ತು 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಮಿಕ್ಸೆಡ್ ರಿಲೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ.ಸ್ವಂತ ಖರ್ಚಿನಲ್ಲಿ ವಿದೇಶಕ್ಕೆ ತೆರಳಿ ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ ವಾರ್ಡನ್ ಗೆ ತಾವು ಕೆಲಸ ಮಾಡುತ್ತಿರುವ ಸಮಾಜ ಕಲ್ಯಾಣ ಇಲಾಖೆ ಸಹ ಅಭಿನಂದಿಸುವುದನ್ನ ಮರೆತು ಅಗೌರವ ಸೂಚಿಸುತ್ತಿದೆ.ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಕ್ರೀಡೆಗೆ ತೆರಳಲು ಪ್ರಾಯೋಜಕರಿಲ್ಲದೆ ಸಾಕಷ್ಟು ಕ್ರೀಡಾಪಟುಗಳು ಸಾಧನೆ ಮಾಡಲು ಸಾಧ್ಯವಾಗಿಲ್ಲ.ಇಂತಹ ದಿನಗಳಲ್ಲಿ ಸ್ವಂತ ಖರ್ಚಿನಲ್ಲಿ ಥೈಲ್ಯಾಂಡ್ ಗೆ ತೆರಳಿ ಭಾರತಕ್ಕೆ ಕೀರ್ತಿ ತಂದಿದ್ದಾರಲ್ಲದೆ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ.ಜಿಲ್ಲಾ ಉಸ್ತುವಾರಿ ಡಾ.ಹೆಚ್.ಸಿ.ಮಹದೇವಪ್ಪನವರೇ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾರೆ.ಹೀಗಿದ್ದೂ ತಮ್ಮ ಇಲಾಖೆಯಲ್ಲೇ ಸೇವೆ ಸಲ್ಲಿಸುತ್ತಿರುವ ಈ ಪ್ರತಿಭೆಗೆ ಪ್ರಾಯೋಜಕತ್ವ ಸಿಕ್ಕಿಲ್ಲ.ಕನಿಷ್ಟಪಕ್ಷ ಅಭಿನಂದನೆಯಾದರೂ ದೊರೆಯುವುದೇ…?