
ಮುಖ್ಯಮಂತ್ರಿಗಳ ಕಾರು ತಪಾಸಣೆ…ಚುನಾವಣಾಧಿಕಾರಿಗಳ ಕಟ್ಟುನಿಟ್ಟಿನ ಕ್ರಮ…
- TV10 Kannada Exclusive
- April 1, 2024
- No Comment
- 210
ಮೈಸೂರು,ಏ1,Tv10 ಕನ್ನಡ
ಲೋಕಸಭೆ ಚುನಾವಣೆ ಹಿನ್ನಲೆ ಚುನಾವಣಾಧಿಕಾರಿಗಳು ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನ ಬಿಗಿ ಮಾಡಿದ್ದಾರೆ.ಅಕ್ರಮವಾಗಿ ಹಣ ಸಾಗಿಸುವ ಖದೀಮರ ಮೇಲೆ ಹದ್ದಿನ ಕಣ್ಣಿಟ್ಟಿರುವ ಅಧಿಕಾರಿಗಳು ಯಾವುದೇ ಮುಲಾಜು ನೋಡದೆ ವಾಹನಗಳನ್ನ ತಪಾಸಣೆಗೆ ಒಳಪಡಿಸುತ್ತಿದ್ದಾರೆ.ಇದಕ್ಕೆ ಸಿಎಂ ವಾಹನವೂ ಹೊರತಾಗಿಲ್ಲ.ಇಂದು ಟಿ.ನರಸೀಪುರ ಮಾರ್ಗವಾಗಿ ಮೈಸೂರಿನತ್ತ ಬರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಕಾರನ್ನ ಚಿಕ್ಕಹಳ್ಳಿ ಬಳಿ ಇರುವ ಚೆಕ್ ಪೋಸ್ಟ್ ನಲ್ಲಿ ತಡೆದು ತಪಾಸಣೆ ನಡೆಸಿದ್ದಾರೆ.ಅಲ್ಲದೆ ಸಿಎಂ ಜೊತೆ ಬಂದ ವಾಹನಗಳನ್ನೂ ಸಹ ತಪಾಸಣೆ ನಡೆಸಿದ್ದಾರೆ…