
ನಡುರಸ್ತೆಯಲ್ಲಿ ಪತ್ನಿಯನ್ನ ಅರೆನಗ್ನಗೊಳಿಸಿ ಹಲ್ಲೆ…ಪತಿ,ಮಾವ ಸೇರಿದಂತೆ ಮೂವರ ವಿರುದ್ದ FIR…
- TV10 Kannada Exclusive
- March 16, 2025
- No Comment
- 313
ಮೈಸೂರು,ಮಾ16,Tv10 ಕನ್ನಡ
ಪೊಲೀಸ್ ಠಾಣೆ ಹಾಗೂ ಕೌಟುಂಬಿಕ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನ ಹಿಂದಕ್ಕೆ ಪಡೆಯದ ಪತ್ನಿಯನ್ನ ಬಲವಂತವಾಗಿ ಕೂಡಿ ಹಾಕಿ,ನಡುರಸ್ತೆಯಲ್ಲಿ ಅರೆನಗ್ನಗೊಳಿಸಿ ಹಲ್ಲೆ ನಡೆಸಿ ಕಿರುಕುಳ ನೀಡಿದ ಪತಿ ಹಾಗೂ ಮಾವ ಮತ್ತು ಪತಿಯ ಅಣ್ಣನ ವಿರುದ್ದ ಪತ್ನಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಪಲ್ಲವಿ (24) ಎಂಬುವರೇ ಕಿರುಕುಳಕ್ಕೆ ಒಳಗಾದ ಗೃಹಿಣಿ.ಪತಿ ಮಹೇಶ್,ಮಾವ ಮಲ್ಲಯ್ಯ ಹಾಗೂ ಪತಿ ಅಣ್ಣ ಶಿವು ವಿರುದ್ದ FIR ದಾಖಲಾಗಿದೆ.
ಮಹೇಶ್ ವಿರುದ್ದ ಪಲ್ಲವಿ ಪೊಲೀಸ್ ಠಾಣೆಯಲ್ಲಿ,ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ವಿಚಾರಣೆ ಹಂತದಲ್ಲಿದೆ.ಕೆಲವು ದಿನಗಳ ಹಿಂದೆ ಪತ್ನಿಯನ್ನ ಭೇಟಿ ಮಾಡಿ ಅನ್ಯೋನ್ಯವಾಗಿರೋಣವೆಂದು ನಂಬಿಸಿ ಪಲ್ಲವಿಯನ್ನ ಕರೆತಂದು ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ಇರಿಸಿದ್ದಾನೆ.ಎರಡು ದಿನ ಸರಿ ಇದ್ದ ಮಹೇಶ್ ಮತ್ತೆ ಕ್ಯಾತೆ ತೆಗೆದು ಪತ್ನಿ ಮೇಲೆ ದರ್ಪ ತೋರಿಸಿದ್ದಾನೆ.ಪ್ರಕರಣಗಳನ್ನ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದ್ದಾನೆ.ಹಿಗ್ಗಾಮುಗ್ಗ ಥಳಿಸಿ ಪ್ರೈವೇಟ್ ಪಾರ್ಟ್ ಗೆ ಒದ್ದು ಹಲ್ಲೆ ನಡೆಸಿದ್ದಾನೆ.ಇದನ್ನ ಪ್ರಶ್ನಿಸಲು ಮಾವ ಮಲ್ಲಯ್ಯನ ಬಳಿ ಬಂದಾಗ ಪತಿ ಹಾಗೂ ಅಣ್ಣ ಶಿವು ಸೇರಿದಂತೆ ಮೂವರು ನಡುರಸ್ತೆಯಲ್ಲಿ ಅರೆನಗ್ನಗೊಳಿಸಿ ಹಲ್ಲೆ ನಡೆಸಿದ್ದಾರೆಂದು ಪಲ್ಲವಿ ದೂರಿನಲ್ಲಿ ತಿಳಿಸಿದ್ದಾರೆ.ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿದ್ದಾರೆಂದು ಪಲ್ಲವಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…