
ಯುವಕ ಅನುಮಾನಾಸ್ಪದ ಸಾವು…ಉತ್ತಮ ಕ್ರಿಕೆಟ್ ಪ್ರದರ್ಶನ ನೀಡಿದ್ದೇ ಸಾವಿಗೆ ಕಾರಣವಾಯ್ತೇ…?
- TV10 Kannada Exclusive
- March 15, 2025
- No Comment
- 89
ಹೆಚ್.ಡಿ.ಕೋಟೆ,ಮಾ15,Tv10 ಕನ್ನಡ
ಸೋಲುವ ಮ್ಯಾಚನ್ನ ಸಿಕ್ಸರ್ ಹೊಡೆದು ಗೆಲ್ಲಿಸಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ
ಹೆಚ್.ಡಿ.ಕೋಟೆ ತಾಲೂಕಿನ ವಡ್ಡರಗುಡಿ ಗ್ರಾಮದಲ್ಲಿ ನಡೆದಿದೆ.
ದಿವ್ಯಾ ಕುಮಾರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಟೆನ್ನಿಸ್ ಬಾಲ್ ಕ್ರಿಕೆಟರ್.
ಕಳೆದ ತಿಂಗಳ 24 ರಂದು ಬೀಚನಹಳ್ಳಿಯಲ್ಲಿ ಕ್ರಿಕೆಟ್ ಟೂರ್ನಮೆಂಟ್ ನಡೆದಿತ್ತು.
ನೇರಳೆ ಪ್ರೀಮಿಯರ್ ಲೀಗ್ ಹೆಸರಿನಲ್ಲಿ ಆಯೋಜನೆ ಮಾಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ
ಜೆಪಿ ವಾರಿಯರ್ಸ್ ತಂಡದ ಪರ ದಿವ್ಯಾ ಕುಮಾರ್ ಪ್ರತಿನಿಧಿಸಿದ್ದ.
ಡೆವಿಲ್ಸ್ ಸೂಪರ್ ಕಿಂಗ್ ತಂಡದ ವಿರುದ್ಧ ಪೈನಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ.
4 ಬಾಲ್ ಗೆ 20 ರನ್ ಹೊಡೆದು ಪಂದ್ಯ ಗೆಲ್ಲಿಸಿದ್ದ.
ಮ್ಯಾಚ್ ಗೆದ್ದ ಬಳಿಕ ಟೀಂ ಸದಸ್ಯರು ಪಾರ್ಟಿ ಮಾಡಿದ್ದರು. ಪಾರ್ಟಿ ಮುಗಿಸಿ ಬೈಕ್ ನಲ್ಲಿ ತೆರಳಿದ ಈತ ಅಪಘಾತದ ಸಂಭವಿಸಿದ ಸ್ಥಿತಿಯಲ್ಲಿ ಪೊದೆಯೊಂದರಲ್ಲಿ ಕೋಮ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ದಾಖಲು ಮಾಡಲಾಗಿತ್ತು.
ಘಟನೆ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮೊದಲಿಗೆ ಬೈಕ್ ಅಪಘಾತ ನಡೆದಿದೆ ಎಂದುಕೊಂಡಿದ್ದೆವು.
ಆದ್ರೆ ಬೈಕ್ ಅಪಘಾತ ಅನುಮಾನಾಸ್ಪದವಾಗಿ ಇತ್ತು.ಇದರಿಂದ ಕ್ರಿಕೆಟ್ ಗೆಲ್ಲಿಸಿದ್ದ ಎಂಬ ಕಾರಣಕ್ಕೆ ದ್ವೇಷದಿಂದ ಹೊಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.
ದಿವ್ಯಾ ಕುಮಾರ್ ಅತ್ಯುತ್ತಮ ಟೆನಿಸ್ ಬಾಲ್ ಕ್ರಿಕೆಟ್ ಪ್ಲೇಯರ್ ಆಗಿದ್ದ.
ಸಾಕಷ್ಟು ತಂಡಗಳು ಈತನನ್ನು ಸೇರಿಸಿಕೊಂಡು ಕ್ರಿಕೆಟ್ ಆಡುತ್ತಿದ್ದರು.
ಇದರಿಂದ ಈತನನ್ನು ಕೊಲೆ ಮಾಡಿರಬಹುದು ಎಂಬ ಅನುಮಾನ ಇದೆ.
ಪೊಲೀಸರು ಸಹ ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತಿಲ್ಲ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ.
ಕಳೆದ 20 ದಿನಗಳಿಂದಲು ಆಸ್ಪತ್ರೆಯಲ್ಲಿ ಕೋಮ ಸ್ಥಿತಿಯಲ್ಲೆ ಇದ್ದ ದಿವ್ಯಾ ಕುಮಾರ್
ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.
ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…