ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…
- TV10 Kannada Exclusive
- July 28, 2026
- No Comment
- 24

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…
ಚಾಮರಾಜನಗರ,ಜು28,Tv10 ಕನ್ನಡ
ಕಾಡುಹಂದಿ ಬೇಟೆ ಮಾಡಿದ ಆರೋಪದ ಹಿನ್ನಲೆ ಓರ್ವ ಆರೋಪಿಯನ್ನ ಬಂಧಿಸಲಾಗಿದೆ.ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ ಘಟನೆ ನಡೆದಿದೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ತಾಕೇರಿ ಗ್ರಾಮದ ಅನ್ವಿತ್ ಬಂಧಿತ ಆರೋಪಿ. ಪರಾರಿಯಾಗಲು ಯತ್ನಿಸಿದ್ದ ಅನ್ವಿತ್ ಬಲಗಾಲಿಗೆ ಗುಂಡು ತಗುಲಿ ಗಾಯವಾಗಿದೆ.
ದರ್ಶನ್, ಮಂಜ ಮತ್ತು ಕಿರಣ್ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಎರಡು ಮೃತ ಕಾಡುಹಂದಿಗಳು,ಮಚ್ಚು , ಟಾರ್ಪಲ್, ಟಾರ್ಚ್, ಹಾಗೂ ಆಲ್ಟೋ ಕಾರ್ ವಶಪಡಿಸಿಕೊಳ್ಳಲಾಗಿದೆ…