
ಚಲಿಸುತ್ತಿದ್ದ ಸರ್ಕಾರಿ ಬಸ್ ನಿಂದ ಕಳಚಿಬಿದ್ದ ಬ್ಯಾಕ್ ವ್ಹೀಲ್…ತಪ್ಪಿದ ಅನಾಹುತ…
- Crime
- January 28, 2023
- No Comment
- 164

ಚಲಿಸುತ್ತಿದ್ದ ಸರ್ಕಾರಿ ಬಸ್ ನಿಂದ ಕಳಚಿಬಿದ್ದ ಬ್ಯಾಕ್ ವ್ಹೀಲ್…ತಪ್ಪಿದ ಅನಾಹುತ…

ಹುಣಸೂರು,ಜ28,Tv10 ಕನ್ನಡ
ಚಲಿಸುತ್ತಿದ್ದ ಬಸ್ ನಿಂದ ಬ್ಯಾಕ್ ವ್ಹೀಲ್ ಸಂಪೂರ್ಣ ಕಳಚಿಬಿದ್ದ ಘಟನೆ ಹುಣಸೂರಿನ ಯಶೋದಪುರ ಬಳಿ ನಡೆದಿದೆ.ಬಸ್ ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮೈಸೂರಿನಿಂದ ಸೋಮವಾರ ಪೇಟೆಗೆ ತೆರಳುತ್ತಿದ್ದ KA 09 F 5330 ನೊಂದಣಿ ಸಂಖ್ಯೆಯ ಕೆ.ಎಸ್.ಆರ್.ಟಿ.ಸಿ.ಬಸ್ ನ ಹಿಂದಿನ ಚಕ್ರಗಳು ಕಳಚಿ ಬಂದಿದೆ.ಹಂಪ್ ಬಳಿ ಸಾಗುತ್ತಿದ್ದ ವೇಳೆ ಕಳಚಿದೆ.ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 20 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ…