ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲಿ ಮೀನುಗಾರಿಕೆಗೆ ಇ.ಟೆಂಡರ್ ನಡೆಸಿ : ಜಯರಾಮ್ ರಾಯ್ ಪುರ

ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲಿ ಮೀನುಗಾರಿಕೆಗೆ ಇ.ಟೆಂಡರ್ ನಡೆಸಿ : ಜಯರಾಮ್ ರಾಯ್ ಪುರ

ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲಿ ಮೀನುಗಾರಿಕೆಗೆ ಇ.ಟೆಂಡರ್ ನಡೆಸಿ : ಜಯರಾಮ್ ರಾಯ್ ಪುರ

ಮೀನುಗಾರಿಕೆ ಇಲಾಖೆ ವ್ಯಾಪ್ತಿಗೆ ಬರುವ ಕೆರೆಗಳನ್ನು ಇ ಹರಾಜು ಮಾಡುವ ಮೂಲಕ ಹೆಚ್ಚಿನ ಆದಾಯ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ಇ ಹರಾಜು ಮಾಡುವುದು ಉತ್ತಮ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಮ್ ರಯ್ ಪುರ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಅಧಿಕಾರಿಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮೀನುಗಾರಿಗೆ ಇಲಾಖೆಯಲ್ಲಿ ತಾಲ್ಲೂಕುವಾರು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆರೆಗಳನ್ನು ಒಟ್ಟಿಗೆ ಸೇರಿಸಿ ಹರಾಜು ಮಾಡುವುದರಿಂದ‌ ವಹಿವಾಟು ಹೆಚ್ಚಾಗಿ ನಡೆಯುತ್ತದೆ ಹಾಗೂ ಬೇಡಿಕೆ ಸಹ‌ ಹೆಚ್ಚುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶೇ 100 ರಷ್ಟು ಸಾಧನೆ ಮಾಡಿ ಮಾಚ್೯31 ರೊಳಗಾಗಿ‌ ಇಲಾಖೆಗಳು ತಮಗೆ ನೀಡಲಾಗಿರುವ ಗುರಿಯನ್ನು ಸಾಧಿಸಿ ಶೇ 100ರಷ್ಟು ಸಾಧನೆ ಮಾಡಿ ಎಂದರು.ಮುಂದಿನ ಸಾಲಿಗೆ ಇಲಾಖೆಗೆ ಅವಶ್ಯಕತೆ ಇರುವ ಹೊಸ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ‌ಪಡೆದುಕೊಂಡರು.

ಕೇಂದ್ರ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಡ್ರೋನ್ ಸರ್ವೆ ನಡಸಿ ವರದಿ ನೀಡುವಂತೆ ಗಣಿಗಾರಿಕೆ ಇಲಾಖೆ ಹಿರಿಯ ಭೂ ವಿಜ್ಞಾನಿ ಪದ್ಮಜಾ ಅವರಿಗೆ ತಿಳಿಸಿದರು.

ಮುಧುಮೇಹ ಹಾಗೂ ರಕ್ತದ ಒತ್ತಡ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಸಾರ್ವಜನಿಕರು ಪರೀಕ್ಷೆಗೆ ಒಳಪಡಬೇಕು,ಆಹಾರ ಪದ್ಧತಿ ಹಾಗೂ ಜೀವನ ಶೈಲಿ ಬದಲಾವಣೆಯಾಗಬೇಕು. ಇದರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು.‌ ಮನೆ ಮನೆಗೆ ಭೇಟಿ ನೀಡಿ ಪರೀಕ್ಷೆಗೆ ಒಳಪಡಿಸಿ ರೋಗಿಗಳನ್ನು ಪತ್ತೆ ಹಚ್ಚಿ ಅವರಿಗೆ ಔಷಧಿಯನ್ನು ತಲುಪಿಸಿ ನಿಯಂತ್ರಿಸಿದರೆ ಹೃದಯ, ನರ, ಮೂತ್ರಪಿಂಡ ಕ್ಕೆ ಸಂಬಂಧಿಸಿದ ರೋಗಗಳನ್ನು ನಿಯಂತ್ರಿಸಬಹುದು ಎಂದರು.

ಆಯುಷ್ಮಾನ್ ಆರೋಗ್ಯ ಕಾಡ್೯ ಗೆ ಹೆಚ್ಚಿನ ಸಂಖ್ಯೆಯಲ್ಲಿ ‌ಜನರನ್ನು ನೊಂದಣಿ ಮಾಡಲು ಗ್ರಾಮ ಒನ್‌ ಅವರನ್ನು ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸರ್ಕಾರಿ ಕಾರ್ಯಕ್ರಮಗಳಿಗೆ‌ ನಿಯೋಜಿಸಿ ಸಾರ್ವಜನಿಕರಿಗೆ ಸ್ಥಳದಲ್ಲೇ ಆಯುಷ್ಮಾನ ಆರೋಗ್ಯ ಯೋಜನೆಗೆ ನೊಂದಣಿ ಮಾಡಿಕೊಂಡು ಉತ್ತಮ ಸಾಧನೆ ಮಾಡುವಂತೆ ಜಿಲ್ಲಾಧಿಕಾರಿ ಡಾ: ಹೆಚ್.ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಧನಂಜಯ್ ಅವರು ಮಾತನಾಡಿ ಮುಂದಿನ ಆರ್ಥಿಕ ಸಾಲಿನಲ್ಲಿ 15 ನೇ ಹಣಕಾಸು ಯೋಜನೆಯಡಿ ಆಶಾ ಕಾರ್ಯಕರ್ತೆಯರಿಗೆ ಟ್ಯಾಬ್ ಖರೀದಿಸಿ ನೀಡಲು ಯೋಜಿಸಲಾಗುತ್ತಿದೆ. ಮನೆ ಮನೆ ಭೇಟಿ ನೀಡಿದಾಗ ಟ್ಯಾಬ್ ಮೂಲಕ ವೈದ್ಯರ ಸಲಹೆ ಆನ್ ಲೈನ್ ಮೂಲಕ‌ ನೀಡಿದರೆ ಚಿಕಿತ್ಸೆಯಲ್ಲಿ ಹೆಚ್ಚಿನ ಪರಿಣಾಮ ಬೀರಲಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ ಅವರು ಮಾತನಾಡಿ ಮನರೇಗಾ ಯೋಜನೆಯಡಿ ಕೆಲಸಗಳು ಕ್ಷಿಪ್ರಗತಿಯಲ್ಲಿ ಸಾಗಬೇಕು ನೀಡಲಾಗಿರುವ ಗುರಿ ಸಾಧಿಸಬೇಕು. ಜಿಲ್ಲೆಯಲ್ಲಿ ಮನರೇಗಾ ಯೋಜನೆಯಡಿ 1155 ಶಾಲೆಗಳಲ್ಲಿ ಆಟದ ಮೈದಾನಗಳು ನಿರ್ಮಾಣ ಮಾಡಲು ಯೋಜಿಸಲಾಗಿದೆ. ಇದರಲ್ಲಿ 116 ಪೂರ್ಣಗೊಂಡಿದ್ದು, 363 ಪ್ರಗತಿಯಲ್ಲಿದೆ. ಶಿಕ್ಷಣ ಇಲಾಖೆಯವರು ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳೊಂದಿಗೆ ಸಮನ್ವಯ ‌ಸಾಧಿಸಿ ಉಳಿದ ಕಾಮಗಾರಿಗಳು ಪ್ರಾರಂಭವಾಗಬೇಕು ಎಂದರು.

ಸಭೆಯಲ್ಲಿ ಜಿ. ಪಂ. ಉಪಕಾರ್ಯದರ್ಶಿ ಸಂಜೀವಪ್ಪ, ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತದ ವ್ಯವಸ್ಥಾಪಕ‌ ನಿರ್ದೇಶಕ ಜಯವಿಭವ ಸ್ವಾಮಿ, ಮಂಡ್ಯಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Spread the love

Related post

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ…ಓರ್ವನ ಬಂಧನ…ವಾಣಿಜ್ಯ ಹಾಗೂ ಗೃಹಬಳಕೆಯ 119 ಸಿಲಿಂಡರ್ ಸೀಜ್…

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ…ಓರ್ವನ ಬಂಧನ…ವಾಣಿಜ್ಯ ಹಾಗೂ…

ಮೈಸೂರು,ನ21,Tv10 ಕನ್ನಡ ಸಿಸಿಬಿ ಹಾಗೂ ಸರಸ್ವತಿಪುರಂ ಠಾಣೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ನಡೆಸುತ್ತಿದ್ದ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ ನಡೆಸಿ ಓರ್ವನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.…
ಲೋಕಾ ಬಲೆಗೆ ಬಿದ್ದ ಬಿಲ್ ಕಲೆಕ್ಟರ್…ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಲಾಕ್…

ಲೋಕಾ ಬಲೆಗೆ ಬಿದ್ದ ಬಿಲ್ ಕಲೆಕ್ಟರ್…ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಲಾಕ್…

ಮೈಸೂರು,ನ21,Tv10 ಕನ್ನಡ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿಲ್ ಕಲೆಕ್ಟರ್ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.ಮೈಸೂರಿನ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ.ಹೂಟಗಳ್ಳಿ ನಗರಸಭೆಯ ಬಿಲ್ ಕಲೆಕ್ಟರ್ ದಿನೇಶ್ ಲೋಕಾಯುಕ್ತ ಬಲೆಗೆ…
ಕಾಡು ತೊರೆದು ನಾಡಿಗೆ ಬಂದ್ರೂ ಮೂಲ ಆದಿವಾಸಿಗಳಿಗೆ ಸಿಗದ ಸರ್ಕಾರಿ ಸೌಲಭ್ಯ…21 ಕುಟುಂಬ ಹೈರಾಣು…

ಕಾಡು ತೊರೆದು ನಾಡಿಗೆ ಬಂದ್ರೂ ಮೂಲ ಆದಿವಾಸಿಗಳಿಗೆ ಸಿಗದ ಸರ್ಕಾರಿ ಸೌಲಭ್ಯ…21…

ನಂಜನಗೂಡು,ನ20,Tv10 ಕನ್ನಡ ಕಾಡುತೊರೆದು ನಾಡಿಗೆ ಬಂದು ನೆಲೆಸಿದರೂ ಮೂಲ ಆದಿವಾಸಿ ಜನರಿಗೆ ಬವಣೆ ತಪ್ಪಿಲ್ಲ.ಸರ್ಕಾರಿ ಸೌಲಭ್ಯಗಳಿಂದ ವಂಚಿತಾರದ ಸುಮಾರು 21 ಕುಟುಂಬ ಹೈರಾಣರಾಗಿದ್ದಾರೆ.ಪರಿಶಿಷ್ಟ ಪಂಗಡ ಅಧಿಕಾರಿಗಳ ನಿರ್ಲಕ್ಷತನಕ್ಕೆ ಇದೊಂದು…

Leave a Reply

Your email address will not be published. Required fields are marked *