
ಕಾಂಗ್ರೆಸ್ ಪಕ್ಷದ ಭರವಸೆಗಳ ಗ್ಯಾರೆಂಟಿ ಕಾರ್ಡ್ ವಿತರಣೆ…ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದ ಮಾಜಿ ಶಾಸಕ ಎಂ.ಕೆ.ಎಸ್…
- TV10 Kannada Exclusive
- February 3, 2023
- No Comment
- 184

ಕಾಂಗ್ರೆಸ್ ಪಕ್ಷದ ಭರವಸೆಗಳ ಗ್ಯಾರೆಂಟಿ ಕಾರ್ಡ್ ವಿತರಣೆ…ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದ ಮಾಜಿ ಶಾಸಕ ಎಂ.ಕೆ.ಎಸ್…
ಮೈಸೂರು,ಫೆ3,Tv10 ಕನ್ನಡ
ಚುನಾವಣೆ ಸಮೀಪವಾಗುತ್ತಿದ್ದಂತೆಯೇ ಕ್ಷೇತ್ರದ ಆಕಾಂಕ್ಷಿಗಳು ಚುರುಕಿನಿಂದ ಓಡಾಡುತ್ತಿದ್ದಾರೆ.ಮತದಾರರ ಓಲೈಕೆಗೆ ಮುಂದಾಗಿದ್ದಾರೆ.ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಚುರುಕಿನಿಂದ ಮತದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.ಇಂದು ಅಶೋಕಪುರಂ ನಲ್ಲಿ ಕಾಂಗ್ರೆಸ್ ಪಕ್ಷದ ಭರವಸೆಗಳ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದ್ದಾರೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮತದಾರರಿಗೆ ಲಭ್ಯವಾಗುವ ಯೋಕನೆಗಳ ಬಗ್ಗೆ ತಿಳಿ ಹೇಳಿದ್ದಾರೆ. ಕಾರ್ಯಕ್ರಮ. ಗೃಹಲಕ್ಷ್ಮಿ.ಗೃಹಜ್ಯೋತಿ ಯೋಜನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳು,ಬಿಜೆಪಿಯವರ ಜನವಿರೋಧಿ ನೀತಿಗಳನ್ನು ತಿಳಿಸುತ್ತಿದ್ದಾರೆ.ಮನೆ ಮನೆಗಳಿಗೆ ತಲುಪಿ ತಿಳಿಸುತ್ತಿದ್ದಾರೆ.ಈ ವೇಳೆ ಮುಖಂಡರಾದ ಜೋಗಿಮಹೇಶ್,ಪೈಲ್ವಾನ್ ಕೃಷ್ಣ,ಮಂಜುನಾಥ್,ರಾಘು,ಹರ್ಷ,ದೀನು,ರವಿ,ಫಾರುಖ್ ಮತ್ತಿತರರು ಸಾಥ್ ನೀಡಿದರು…