ಹಿಂದೂ ಧರ್ಮದ ಬಗ್ಗೆ ಅವಹೇಳನಾಕಾರಿ ಭಾಷಣ ಪ್ರಕರಣ…ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆ…ಕೇಸ್ ವಜಾ…
- Mysore
- February 9, 2023
- No Comment
- 91
ಹಿಂದೂ ಧರ್ಮದ ಬಗ್ಗೆ ಅವಹೇಳನಾಕಾರಿ ಭಾಷಣ ಪ್ರಕರಣ…ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆ…ಕೇಸ್ ವಜಾ…
ಮೈಸೂರು,ಫೆ9,Tv10 ಕನ್ನಡ
ಹಿಂದೂ ಧರ್ಮದ ಬಗ್ಗೆ ಹಾಗೂ ಶ್ರೀರಾಮನ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದ ಪ್ರೊ.ಕೆ.ಎಸ್.ಭಗವಾನ್,ಪ್ರೊ.ಅರವಿಂದ ಮಾಲಗತ್ತಿ ಹಾಗೂ ಮಹೇಶ್ ಚಂದ್ರ ಗುರು ರವರ ಮೇಲಿದ್ದ ಪ್ರಕರಣ ನ್ಯಾಯಾಲಯ ವಜಾ ಮಾಡಿದೆ.ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಪ್ರಕರಣವನ್ನ ವಜಾ ಮಾಡಲಾಗಿದೆ.ಮೈಸೂರಿನ ನಾಲ್ಕನೇ ಅಡಿಷನಲ್ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಪ್ರಕರಣ ವಜಾ ಮಾಡಲಾಗಿದೆ. ಜಯಲಕ್ಷ್ಮೀಪುರಂ ಪೊಲೀಸ್ ಠಾಣಾ ಮೊ ಸಂಖ್ಯೆ 11/2015 ರಲ್ಲಿ ಪ್ರಕರಣ ದಾಖಲಾಗಿತ್ತು.15-02-2015 ರಂದು ವಿಶ್ವ ಹಿಂದೂ ಪರಿಷತ್ ಮುಖಂಡ ಮನೋಜ್ ಕುಮಾರ್ ರವರು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದರು. ಮಾನಸ ಗಂಗೋತ್ರಿಯಲ್ಲಿರುವ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಕೆ ಎಸ್ ಭಗವಾನ್, ಪ್ರೊ ಅರವಿಂದ ಮಾಲಗತ್ತಿ ಹಾಗೂ ಪ್ರೊ ಮಹೇಶ್ ಚಂದ್ರಗುರು ರವರುಗಳು ಭಾಷಣದಲ್ಲಿ ಮಾತನಾಡುತ್ತಾ ಹಿಂದೂ ಧರ್ಮದ ಬಗ್ಗೆ ಅವಹೇಳನವಾಗಿ ಮಾತನಾಡಿದ್ದರೆಂದು ಆರೋಪಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವ ಇವರುಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಪ್ರಕರಣ ದಾಖಲಿಸಿದ್ದರು. ಮೊ ನಂ-11/2015 ರಲ್ಲಿ ಕಲಂ 295(a) IPC ರೀತ್ಯಾ ಪ್ರಕರಣ ದಾಖಲಿಸಿದ್ದರು.
ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣವನ್ನ ನ್ಯಾಯಾಲಯ ಕೈಬಿಟ್ಟಿದೆ.ವಿಶ್ವಹಿಂದೂಪರಿಷತ್ ಹೋರಾಟಗಾರರಿಗೆ ಹಿನ್ನಡೆಯಾಗಿದೆ…