
ಹಳ್ಳಿಹಕ್ಕಿ ಮನೆಗೆ ಡಿಕೆಶಿ ಭೇಟಿ…ಕುತೂಹಲ ಕೆರಳಿಸಿದ ಬೆಳವಣಿಗೆ…
- Politics
- February 16, 2023
- No Comment
- 186

ಹಳ್ಳಿಹಕ್ಕಿ ಮನೆಗೆ ಡಿಕೆಶಿ ಭೇಟಿ…ಕುತೂಹಲ ಕೆರಳಿಸಿದ ಬೆಳವಣಿಗೆ…

ಮೈಸೂರು,ಫೆ16,Tv10 ಕನ್ನಡ
ಕೆ ಆರ್ ನಗರದಲ್ಲಿರುವ ಅಡಗೂರು ಎಚ್ ವಿಶ್ವನಾಥ್ ನಿವಾಸಕ್ಕೆ ಡಿ ಕೆ ಶಿವಕುಮಾರ್ ಭೇಟಿ ನೀಡಿದ್ದಾರೆ.
ವಿನಾಯಕ ಬಡಾವಣೆಯಲ್ಲಿರುವ ಎಚ್ ವಿಶ್ವನಾಥ್ ನಿವಾಸಕ್ಕೆ ಭೇಟಿ ನೀಡಿ ಚಹಾ ಸೇವಿಸಿದ್ದಾರೆ.ಇಬ್ಬರ ಭೇಟಿ ಕುತೂಹಲ ಕೆರಳಿಸಿದೆ.ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಮುಖ್ಯ ಕಾರಣರಾದ ವಿಶ್ವನಾಥ್ ಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ.ಈ ಬಗ್ಗೆ ವಿಶ್ವನಾಥ್ ಮನಸ್ಸಿನಲ್ಲಿ ಬೇಸರವಿದ್ದರೂ ತಮ್ಮ ಸ್ವಂತ ಪಕ್ಷದ ಆಡಳಿತ ವೈಖರಿ ಬಗ್ಗೆ ಟೀಕಿಸುವ ಮೂಲಕವೇ ತಮ್ಮ ಇಚ್ಛೆಯನ್ನ ವ್ಯಕ್ತಪಡಿಸುತ್ತಿದ್ದಾರೆ.ಆದರೂ ಬಿಜೆಪಿ ಹೈಕಮಾಂಡ್ ವಿಶ್ವನಾಥ್ ನಿರೀಕ್ಷೆಯನ್ನ ಹುಸಿ ಮಾಡಿದೆ.ಇತ್ತೀಚೆಗಂತೂ ಬಿಜೆಪಿಯ ಕೆಲವು ನಿಲುವುಗಳನ್ನ ನೇರವಾಗಿ ಟೀಕಿಸುವ ಮೂಲಕ ಹಾಗೂ ಕಾಂಗ್ರೆಸ್ ನಾಯಕರ ಬಗ್ಗೆ ಒಲವು ತೋರಿಸುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ.ವಿಶ್ವನಾಥ್ ಕಾಂಗ್ರೆಸ್ ನತ್ತ ಮುಖ ಮಾಡುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.ಇದರ ಬೆನ್ನ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಜೊತೆ
ವಿಶ್ವನಾಥ್ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.ಈ ವೇಳೆ ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಜೊತೆ ಮಾತುಕತೆ ನಡೆಸಿದ್ದಾರೆ….