ರಾಗಿ / ಭತ್ತ ಖರೀದಿ :ಫ್ರೂಟ್ ಐಡಿಯಲ್ಲಿ ನೋಂದಣಿಯಾಗಿರುವ ರೈತರ ಬ್ಯಾಂಕಿನ ಖಾತೆಗೆ ಹಣ ಜಮಾವಣೆ
- TV10 Kannada Exclusive
- February 23, 2023
- No Comment
- 155
ರಾಗಿ / ಭತ್ತ ಖರೀದಿ :ಫ್ರೂಟ್ ಐಡಿಯಲ್ಲಿ ನೋಂದಣಿಯಾಗಿರುವ ರೈತರ ಬ್ಯಾಂಕಿನ ಖಾತೆಗೆ ಹಣ ಜಮಾವಣೆ
ಸಣ್ಣ ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ / ಭತ್ತ ಖರೀದಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ರೈತರುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದಲ್ಲಾಳಿಗಳು ಭಾಗವಹಿಸುತ್ತಿರುತ್ತಾರೆಂದು ಮೌಖಿಕವಾಗಿ ದೂರುಗಳು ಜಿಲ್ಲಾಧಿಕಾರಿಗಳ ಕಛೇರಿಗೆ ಬಂದಿರುತ್ತವೆ.
ಕೃಷಿ ಇಲಾಖೆಯವರು ನೀಡುವ ಫ್ರೂಟ್ ಐಡಿ ಆಧಾರದ ಮೇಲೆ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ನಡೆಸಲಾಗುತ್ತಿರುತ್ತದೆ. ಈ ಯೋಜನೆಯಲ್ಲಿ ರಾಗಿ / ಭತ್ತ ಮಾರಾಟ ಮಾಡಿದ ರೈತರುಗಳಿಗೆ ಫ್ರೂಟ್ ಐಡಿಯಲ್ಲಿ ನೋಂದಣಿಯಾಗಿರುವ ರೈತರ ಬ್ಯಾಂಕಿನ ಖಾತೆಗೆ ಹಣ ಜಮಾವಣೆ ಆಗುತ್ತದೆ. ಒಂದು ವೇಳೆ ರೈತರಿಗೆ ಅರಿವಿಲ್ಲದೆ ರೈತರ ಫ್ರೂಟ್ ಐಡಿ ಸಂಖ್ಯೆಯನ್ನು ರಾಗಿ / ಭತ್ತ ಮಾರಾಟಕ್ಕೆ ಬೇರೆಯಾರಾದರೂ ನೋಂದಣಿ ಮಾಡಿದ್ದಲ್ಲಿ ರೈತರ ಖಾತೆಗೆ ಜಮಾ ಆಗುವ ಹಣವನ್ನು ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿಗಳಿಗೆ ನೀಡದಿರುವಂತೆ ಹಾಗೂ ಮೂರನೇ ವ್ಯಕ್ತಿಗಳು ಹಣ ನೀಡುವಂತೆ ಒತ್ತಾಯ ಅಥವಾ ಪ್ರಭಾವತಂದಲ್ಲಿ ಅಂತಹವರ ವಿರುದ್ದ ಹತ್ತಿರದ ಪೋಲೀಸ್ ಠಾಣೆಗೆ ದೂರು ನೀಡಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ಮಂಡ್ಯ ನಗರದ ಉಮ್ಮಡಹಳ್ಳಿ ಗೇಟ್ ಬಳಿ ಇರುವ ಭತ್ತ ಮತ್ತು ರಾಗಿ ಖರೀದಿ ಕೇಂದ್ರಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಅಹಾರ ಇಲಾಖೆ ಉಪ ನಿರ್ದೇಶಕ ಕೃಷ್ಣಕುಮಾರ್ ಉಪಸ್ಥಿತರಿದ್ದರು.